Advertisement

Porsche ಕಾರು ಪ್ರಕರಣ: ಆರೋಪಿಯ ತಂದೆ, ಅಜ್ಜ 14 ದಿನ ನ್ಯಾಯಾಂಗ ವಶಕ್ಕೆ

12:31 AM Jun 01, 2024 | Team Udayavani |

ಮುಂಬಯಿ: ಪುಣೆ ಪೋರ್ಶೆ ಕಾರು ಅಪಘಾತ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಅಪ್ರಾಪ್ತ ಆರೋಪಿಯ ತಂದೆ ಹಾಗೂ ಅಜ್ಜನನ್ನು ಪುಣೆ ಕೋರ್ಟ್‌ ಶುಕ್ರವಾರ 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಿದೆ.

Advertisement

ಹೊಣೆ ಹೊತ್ತುಕೊಳ್ಳುವಂತೆ ಚಾಲಕನಿಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಅಪ್ರಾಪ್ತ ಆರೋಪಿಯ ತಂದೆ, ಉದ್ಯಮಿ ವಿಶಾಲ್‌ ಅಗರ್ವಾಲ್‌ ಮತ್ತು ಅಜ್ಜನನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳು ಸರಿಯಾಗಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಕೋರ್ಟ್‌, ಆರೋಪಿಗಳಿಬ್ಬರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಏತನ್ಮಧ್ಯೆ, ಘಟನೆ ವೇಳೆ ಅಪ್ರಾಪ್ತ ಆರೋಪಿಯು ಮದ್ಯಪಾನದ ನಶೆಯಲ್ಲಿದ್ದ ಎಂದು ಆತನ ಜತೆಗೆ ಕಾರಿನಲ್ಲಿದ್ದ ಇಬ್ಬರು ಸ್ನೇಹಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next