Advertisement

ಜನಸಂಖ್ಯೆ: ಇನ್ನೊಂದೇ ವರ್ಷದಲ್ಲಿ ಚೀನಾವನ್ನು ಮೀರಿಸಲಿದೆ ಭಾರತ!

12:08 PM Jul 11, 2022 | Team Udayavani |

ಹೊಸದಿಲ್ಲಿ: 2022 ರ ನವೆಂಬರ್ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆಯು ಎಂಟು ಶತಕೋಟಿಗೆ ತಲುಪುವ ಮುನ್ಸೂಚನೆ ಇದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಇದರ ಪ್ರಕಾರ, ಜನಸಂಖ್ಯೆಯಲ್ಲಿ ಭಾರತವು ಮುಂದಿನ ವರ್ಷ ಚೀನಾವನ್ನು ಮೀರಿಸಲಿದೆ ಎಂದು ಅಂದಾಜಿಸಲಾಗಿದೆ.

Advertisement

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಜನಸಂಖ್ಯಾ ವಿಭಾಗದಿಂದ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 ಪ್ರಕಾರ ಜಾಗತಿಕ ಜನಸಂಖ್ಯೆಯು ನವೆಂಬರ್ 15, 2022 ರಂದು ಎಂಟು ಬಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ವಿಶ್ವಸಂಸ್ಥೆಯ ಇತ್ತೀಚಿನ ಅಂದಾಜಿನ ಪ್ರಕಾರ ವಿಶ್ವದ ಜನಸಂಖ್ಯೆಯು 2030 ರಲ್ಲಿ ಸುಮಾರು 8.5 ಶತಕೋಟಿ ಮತ್ತು 2050 ರಲ್ಲಿ 9.7 ಶತಕೋಟಿಗೆ ಬೆಳೆಯಬಹುದು. ಇದು 2080 ರ ದಶಕದಲ್ಲಿ ಸುಮಾರು 10.4 ಶತಕೋಟಿ ಜನರನ್ನು ತಲುಪುತ್ತದೆ ಮತ್ತು 2100 ರವರೆಗೆ ಆ ಮಟ್ಟದಲ್ಲಿ ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ.

2023ರ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ವರದಿ ಹೇಳಿದೆ. 2022 ರಲ್ಲಿ ವಿಶ್ವದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳಾದ ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಜಾಗತಿಕ ಜನಸಂಖ್ಯೆಯ 29 ಪ್ರತಿಶತವನ್ನು ಜನರಿದ್ದರೆ, ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಒಟ್ಟು ವಿಶ್ವದ ಜನಸಂಖ್ಯೆಯ 26 ಪ್ರತಿಶತ ಜನರಿದ್ದಾರೆ.

ಇದನ್ನೂ ಓದಿ:ಎಐಎಡಿಎಂಕೆ ನಾಯಕತ್ವಕ್ಕಾಗಿ ಮಾರಾಮಾರಿ; ಪನ್ನೀರ್ ಸೆಲ್ವಂಗೆ ಮುಖಭಂಗ, ಎಡಪ್ಪಾಡಿ ಆಯ್ಕೆ

Advertisement

2050 ರವರೆಗಿನ ಹೆಚ್ಚಳವಾಗುವ ಜಾಗತಿಕ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿನವು ಕೇವಲ ಎಂಟು ದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತದೆ. ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ತಾಂಜಾನಿಯಾದಲ್ಲಿ ಜನಸಂಖ್ಯೆ ಹೆಚ್ಚಳವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next