Advertisement
ಗ್ಯಾಲರಿ ತುಂಬೆಲ್ಲ ಗೊಂಬೆಗಳೇ ಗೊಂಬೆಗಳು. ಸೃಷ್ಟಿಕರ್ತ ಬ್ರಹ್ಮ, ಈಶ್ವರ-ಮಹೇಶ್ವರ, ಅಂಬೆ-ಭವಾನಿ, ಕುದುರೆ, ಆನೆ -ಅಂಬಾರಿ ನೋಡುತ್ತಾ ಹೋದಷ್ಟೂ ಬೆಳೆಯುವ ವಿಧಗಳು ಕಲಾಪ್ರೇಮಿಗಳ ಮನತಣಿಸಿದವು. ಮ್ಯಾನೇಜ್‌ಮೆಂಟ್ ಆಫ್ ಆರ್ಟ್ ಟ್ರಶ್ಯೂರ್ ಆಫ್ ಇಂಡಿಯಾ (ಮಾಟಿ) ಆಯೋಜಿಸಿದ್ದ ಪ್ರದರ್ಶನಕ್ಕೆ ಕನ್ನಡದ ‘ಗೊಂಬೆ’ ಹೆಸರನ್ನೇ ಇರಿಸಿದ್ದು ವಿಶೇಷವಾದರೆ, ಈ ಗೊಂಬೆಗಳನ್ನು ತಯಾರಿಸಿದ್ದು ಕೊಪ್ಪಳ ಜಿಲ್ಲೆಯ ಕನ್ನಾಲ್ ಗ್ರಾಮದ ಕಲಾವಿದರು. ಮರದಿಂದ ಮಾಡುವ ಈ ಗೊಂಬೆಗಳು, ದೆಹಲಿ ನೋಡುಗರಿಗೆ ಹೊಸ ಆಕರ್ಷಣೆಯಾಗಿದ್ದವು. ಗಾರುಡಿ ಗೊಂಬೆಗಳ ಕುರಿತು ಮಾತನಾಡಿದ ಪ್ರೊ| ಆನಿಂದ್ಯ ಕಂತಿ ವಿಸ್ವಾಸ್ ಅವರು, ‘ಈ ಗೊಂಬೆ ಕಲೆ ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಒಡಿಶಾದ ‘ಪಟ್ಟಚಿತ್ರ’ ಮತ್ತು ಗುಜರಾತ್‌ನ ‘ವರ್ಲಿ’ ಕಲೆಯೊಂದಿಗೆ ಹಲವು ಸಾಮ್ಯತೆಗಳನ್ನು ಹಂಚಿಕೊಂಡಿದೆ’ ಎನ್ನುತ್ತಾರೆ. Advertisement
ದಿಲ್ಲಿಯಲ್ಲಿ ಗಾರುಡಿ ಗೊಂಬೆ ಮೋಡಿ!
03:20 AM Jul 12, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.