Advertisement
ಒಮ್ಮೆ ನಮ್ಮ ನೇಚರ್ ಕ್ಲಬ್‌ನಿಂದ ದೇವರಮನೆ ಕಾಡಿಗೆ ಸ್ನೇಹಿತರೆಲ್ಲಾ ಟ್ರಕ್ಕಿಂಗ್ ಹೋಗುವುದು, ಅಲ್ಲಿ ಟೆಂಟ್ ಹಾಕಿ ರಾತ್ರಿ ತಂಗುವುದೆಂದು ನಿರ್ಧಾರವಾಯಿತು. ಹ್ಯಾಂಡ್‌ಪೋಸ್ಟ್‌ನಲ್ಲಿ ಎಲ್ಲಾ ಸೇರಿಕೊಂಡು ಜೀಪ್‌ನಲ್ಲಿ ಹೋಗಿ ನಂತರ ಚಾರಣ ಪ್ರಾರಂಭಿಸುವುದು ಎಂದು ನಿಗದಿಯಾಯ್ತು. ಅಡುಗೆ ವ್ಯವಸ್ಥೆಗಾಗಿ ಸುಬ್ರಹ್ಮಣ್ಯರನ್ನು ಕರೆದುಕೊಂಡೆವು. ತೇಜಸ್ವಿಯವರು, ಅವರ ಶ್ರೀಮತಿ ರಾಜೇಶ್ವರಿಯವರು, ಅಳಿಯ ಜಾnನೇಶ್ ಸಹ ನಮ್ಮ ಗುಂಪನ್ನು ಸೇರಿಕೊಂಡರು. ಕ್ಯಾಮೆರಾ, ಬಟ್ಟೆಬರೆ ಇತರೆ ವಸ್ತುಗಳಿದ್ದ ತೇಜಸ್ವಿಯವರ ಬ್ಯಾಗ್ ಸಾಕಷ್ಟು ತೂಕವಿದ್ದಂತೆ ಕಂಡಿತು. “ಬ್ಯಾಗ್ ಕೊಡಿ, ದೂರದಲ್ಲಿ ನಿಂತಿರುವ ಜೀಪಿಗೆ ಇಡ್ತೀನಿ’ ಎಂದು ಅವರ ಕೈನಲ್ಲಿದ್ದ ಬ್ಯಾಗ್ ಇಸ್ಕೊಳ್ಳಲು ಹೊರಟರೆ.. ನಮ್ಗೆàನು ಕೈಕಾಲು ಇಲ್ಲಾಂತ ತಿಳ್ಕಂಡಿದ್ದೀಯಾ, ನನ್ನ ಕೈಕಾಲು ಗಟ್ಟಿ ಇದಾವೆ ಕಣೋ ಮಾರಾಯಾ, ನಾನೂ ನಿಮ್ಹಾಗೇ ಅನ್ನಾ ತಿನ್ನೋ ಮನುಷ್ಯ ಕಣÅಯ್ನಾ ಎಂದು ಗದರಿಸಿ ಬ್ಯಾಗ್ ಎತ್ತಲೂ ಬಿಡಲಿಲ್ಲ. ದೇವರಮನೆಯಲ್ಲೂ ಸಹ ಜೀಪಿನವ ನನ್ನ ಜೊತೆ ಚೌಕಾಸಿ ಮಾಡುವಾಗ ‘ಏ ಒಂದು ನೂರು ರೂಪಾಯಿ ಜಾಸ್ತಿ ಕೊಟ್ಟು ಕಳಿಸ್ರಯ್ನಾ, ಅವರದ್ದು ಅದೇನು ಕಿರಿಕಿರಿ’ ಎಂದಿದ್ದರು. ದೇವಾಲಯದ ಪಕ್ಕದ ಬಯಲಿನಲ್ಲಿ 10-12 ಜನ ಮಲಗಬಹುದಾದಷ್ಟು ದೊಡ್ಡದಾದ ಟೆಂಟ್ ಹಾಕಿ ರಾತ್ರಿ ಕಳೆಯಲು ಸಿದ್ಧರಾದೆವು.
Related Articles
Advertisement
ನೇಚರ್ ಕ್ಲಬ್‌ನ ಎಲ್ಲಾ ಮೂವತ್ತೆ„ದು ಜನ ಸದಸ್ಯರೂ ಭಾಗವಹಿಸಿದ್ದರು. ಬೆಳಗ್ಗೆ ಏಳು ಗಂಟೆಗೆ ಭೈರಾಪುರದ ದೇವಾಲಯದ ಆವರಣ ತಲುಪಿದ ನಾವು ರಾತ್ರಿಯಿಡೀ ಸುರಿದಿದ್ದ, ಇನ್ನೂ ತಿಳಿಯಾಗದ ಮಂಜಿನ ನಡುವೆ ನಮ್ಮನ್ನೇ ನಾವು ಹುಡುಕಾಡಿಕೊಳ್ಳತೊಡಗಿದೆವು. ಪಕ್ಕದಲ್ಲೇ ಇದ್ದ ನಮ್ಮ ತಂಡದ ಸದಸ್ಯರನ್ನು ದನಿಯೇರಿಸಿ ಕೂಗಿ ಕರೆದು ಮಾತನಾಡಿಸಲಾರಂಬಿಸಿದೆವು. “ಏ ಧನಂಜಯಾ, ಎಲ್ಲೋ ಮಾರಾಯ ಕಾಫಿ! ಎಂಬ ದೊಡ್ಡ ದನಿಯ ಗದರಿಕೆಗೆ ಬೆಚ್ಚಿಬಿದ್ದು ತಿರುಗಿ ನೋಡಿದರೆ, ಆಜಾನುಬಾಹು ತೇಜಸ್ವಿ ಅಸ್ಪಷ್ಟವಾಗಿ ಗೋಚರಿಸಿದರು.
ನಮ್ಮ ತಂಡದ ಕೇಟರಿಂಗ್ ಪ್ಲಾನರ್ ಸುರೇಂದ್ರನಾಥ್‌ರವರಿಗೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಅಡುಗೆ ತಯಾರಿಯ ಉಸ್ತುವಾರಿ ವಹಿಸಿಕೊಳ್ಳುವುದೆಂದರೆ ಎಲ್ಲಿಲ್ಲದ ಉತ್ಸಾಹ. ನಾನು ವಿದ್ಯಾರ್ಥಿಯಾಗಿದ್ದಾಗ ಹೈಡ್ರೋಕಾರ್ಬನ್ ಮತ್ತು ಕಾಬೋìಹೈಡ್ರೇಟ್ ನಡುವಿನ ವ್ಯತ್ಯಾಸ ತಿಳಿಸಿಕೊಟ್ಟವರು ಇವರು. ಬಿಸ್ಸಿಬಿಸಿ ಕಾಫಿ ಮಾಡಿ ತಂಡದ ಎಲ್ಲರಿಗೂ ತಮ್ಮ ನಳಪಾಕದ ಪರಿಚಯ ಮಾಡಿಕೊಟ್ಟರು. ಸ್ಟಾರ್ಟಿಂಗ್ ಪಾಯಿಂಟ್ ಆಗಿದ್ದ ದೇವಾಲಯದ ಆವರಣದಲ್ಲಿ ಕೆಲ ಸಮಯ ಅಡ್ಡಾಡಿದೆವು. ಮೂಡಿಗೆರೆಯಿಂದ ಪಾರೆÕಲ್ ತಂದಿದ್ದ ಉಪ್ಪಿಟ್ಟು-ಕೇಸರಿಬಾತ್‌ನ ಡಬ್ಬ ತೆರೆದಿದ್ದೇ ತಡ; ಘಮ್ಮನೆಯ ಸ್ವಾದ ನಮ್ಮೆಲ್ಲರನ್ನೂ ಮತ್ತೆ ದೇವಾಲಯದ ಗರುಡಗಂಬದ ಬಳಿಗೆ ಎಳೆದು ತಂದಿತು. ತೇಜಸ್ವಿಯವರು ನಮ್ಮ ತಂಡದ ಹುಡುಗರನ್ನು ಪ್ರೀತಿಯಿಂದ ರೇಗಿಸುತ್ತಾ, ಗದರಿಸುತ್ತಾ ಹಾಸ್ಯಚಟಾಕಿಗಳನ್ನು ಹಾರಿಸುತಿದ್ದರು.
ಎತ್ತಿನಭುಜ ಶಿಖರವನ್ನು ಏರಲು ಸಿದ್ಧವಾಗಿ ಬಂದಿದ್ದ ನಾವು ತಿಂದಿದ್ದು ಹೆಚ್ಚಾಗಿ ಹೊಟ್ಟೆ ಭಾರದಿಂದ ಫಸ್ಟ್ ಗೇರ್‌ನಲ್ಲಿಯೇ ಮುಕ್ಕಿರಿಯತೊಡಗಿ ತೇಜಸ್ವಿಯವರಿಂದ ಉಗಿಸಿಕೊಂಡದ್ದೂ ಆಯಿತು. ಬೇಸಿಗೆಯಾಗಿದ್ದರೂ ಕಾಡಿನ ನಡುವೆ ತೇವಾಂಶವಿದ್ದುದರಿಂದ ಜಿಗಣೆಗಳು ಹೇರಳವಾಗಿದ್ದವು. ತಂಡದಲ್ಲಿದ್ದ ಹುಡುಗಿಯರು ಜಿಗಣೆಯನ್ನು ಕಂಡು ಹಾವನ್ನೇ ತುಳಿದವರಂತೆ ಬೊಬ್ಬೆ ಹೊಡೆಯಲಾರಂಭಿಸಿದರು. ಮಧ್ಯಾಹ್ನದ ಊಟಕ್ಕೆಂದು ಮೊಸರನ್ನ, ಪುಳಿಯೊಗರೆ ತಂದಿದ್ದೆವು. ದೈಹಿಕವಾಗಿ ಬಲವಾಗಿದ್ದ ನಾವು ಕೆಲ ಹುಡುಗರು ಸರದಿಯಂತೆ 200-300 ಮೀಟರ್ ದೂರದವರೆಗೆ ಕಡಾಯಿಗಳನ್ನು ಹೊತ್ತು ನಡೆಯುತ್ತಿದ್ದೆವು. ಪುಳಿಯೊಗರೆಗಿಂತ ಈ ಮೊಸರನ್ನದ ಪಾರೆÕಲ್ ವಿಪರೀತ ಭಾರವಾಗಿತ್ತು. ನಿಮಗೇನಾದ್ರೂ ಬುದ್ಧಿಗಿದ್ದಿ ಇದೆಯೇನÅಯ್ನಾ? ಎಷ್ಟೂ ಅಂತ ಹೊರ್ತೀರಿ. ಸಪರೇಟ್ ಪ್ಯಾಕ್ ಮಾಡಿಸಿ ಅವರವರಿಗೆ ಕೊಡೋದು ಬಿಟ್ಟು, ಎಲ್ಲರದನ್ನು ಒಬ್ಬೊಬ್ಬರೇ ಹೊತ್ತುಕೊಂಡು ಬರಿ¤ದ್ದೀರಲ್ಲ. ಟ್ರೆಕ್ ಮಾಡ್ತೀರೋ ಇಲ್ಲಾ ಹಮಾಲಿ ಕೆಲಸ ಮಾಡ್ತೀರೋ? ಎಂದು ತೇಜಸ್ವಿ ರೇಗಾಡಿದರು. ಸಪರೇಟ್ ಪ್ಯಾಕ್ ಮಾಡಲೆಂದೇ ನಾವೂ ಪ್ಲಾನ್ ಮಾಡಿದ್ದೆವು. ಹಿಂದಿನ ದಿನವೇ ಪ್ಯಾಕ್ ಮಾಡಲು ಮುತ್ತುಗದ ಎಲೆ ಹಾಳೆ ಮತ್ತು ಪೇಪರ್ ತಂದು ಅಡುಗೆಯವರಿಗೆ ನೀಡಿದ್ದೆವು. ಬಿಸಿಯಾಗಿದ್ದ ಅಡುಗೆ ಪ್ಯಾಕ್ ಮಾಡಿದರೆ ಮದ್ಯಾಹ್ನದ ವೇಳೆಗೆ ಬಿಸಿಲಿಗೆ ಹಾಳಾಗುವುದೆಂದು ಬಾಕ್ಸ್‌ನಲ್ಲಿ ಹಾಕಿ ಹಾಗೆಯೇ ಕಳುಸಿಕೊಟ್ಟಿದ್ದರು.
ತೇಜಸ್ವಿಯವರಿಗೆ ಇದನ್ನು ಹೇಳಿದೆ. ‘ನಿನ್ನ ಮ್ಯಾನೇಜ್‌ಮೆಂಟ್‌ನಲ್ಲಿ ಇಂಥವೇ ಆಗುವುದು, ಕಂತ್ರಿ ನೀನು’ ಎಂದರು. ಅಲ್ಲಲ್ಲಿ ನಿಂತು ದಣಿವಾರಿಸಿಕೊಂಡು ತಮಾಷೆ, ಹರಟೆ, ಅನುಭವಗಳ ಮೆಲುಕು, ಕಂಡ ಸಸ್ಯಗಳ ಕುರಿತಾದ ಮಾಹಿತಿ ಪಡೆಯುತ್ತಾ$¤ ನಡೆದಿದ್ದ ನಾವು ಸುಮಾರು ಮೂರು ಕಿಲೋಮೀಟರ್ ನಡೆದಿದ್ದೆವು.
ಸೂರ್ಯ ಬಿರಬಿರನೆ ನೆತ್ತಿಯ ಮೇಲೆ ಬಂದಿದ್ದ. ಕಾಡನ್ನು ದಾಟಿ ಬಟಾಬಯಲು ಪ್ರದೇಶಕ್ಕೆ ಬಂದಿದ್ದೆವು. ಸುಮಾರು ಹನ್ನೆರಡೂವರೆಯ ಸಮಯ. ತಂಡದವರ ನಡಿಗೆ ಕ್ರಮೇಣ ನಿಧಾನವಾಯ್ತು. ಸೂರ್ಯ ಬೇರೆ ಬೆಳಗಿನ ಮಂಜಿನ ಮೇಲೆ ಸೇಡು ತೀರಿಸುವವನಂತೆ ಕರುಣೆ ಇಲ್ಲದೇ ನಮ್ಮನ್ನು ಹಣಿಯುತಿದ್ದ. ಕಡಾಯಿ ಹೊತ್ತಿದ್ದವರ ಗೋಳಾಟ ನೋಡಲಾರದೇ ತೇಜಸ್ವಿ ನಿಲÅಯ್ಯ ಎಲ್ಲರೂ ಸ್ವಲ್ಪ ಹೊತ್ತು. ಉಪ್ಪಿಟ್ಟು-ಕೇಸರಿಬಾತು ಪವರ್ ಕಳ್ಕೊಂಡಿರೋ ಹಾಗೆ ಕಾಣಿಸುತ್ತೆ. ಹೇಗಿದ್ದರೂ ತಿನ್ನೋಕ್ಕೇ ತಾನೇ ಮೊಸರನ್ನ ತಂದಿರೋದು. ಇಲ್ಲಿಂದ ಆ ನೆತ್ತಿಯವರೆಗೆ ಯಾಕಯ್ನಾ ಕಡಾಯಿ ಹೊರಬೇಕು? ಇಲ್ಲೇ ತಿಂದು ಬಿಡೋಣ, ಎಲ್ಲರೂ ಅವರವರ ಲಗೇಜು ಅವರವರೇ ಹೊತ್ತುಕೊಂಡಂತೆ ಆಗುತ್ತೆ. ನನಗೆ ಇವರ ಪರದಾಟ ನೋಡೋಕ್ಕೆ ಆಗ್ತಿಲ್ಲ. ಎಂದು ನಮ್ಮ ಹೆಗಲ ಮೇಲಿದ್ದ ದೊಡ್ಡ ಭಾರವನ್ನು ಉಪಾಯವಾಗಿ ಕೆಳಗಿಳಿಸಿದ್ದರು.
ಧನಂಜಯ ಜೀವಾಳ