Advertisement
ಪಟ್ಟಣದಿಂದ ಹಾದು ಹೋಗಿರುವ ಈ ಹಿಂದೆ ಯರಿಯೂರು ಕಾಲುವೆ ಎಂದು ಕರೆಯುತ್ತಿದ್ದ ಪ್ರಸ್ತುತ ದೊಡ್ಡ ಚರಂಡಿ ದುರಸ್ತಿಗೆ ನಗರೋತ್ಥಾನ ಯೋಜನೆಯಡಿ 1.23 ಕೋಟಿ ರೂ.ನಲ್ಲಿ ವಿವಿಧ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ನೆರವೇರಿಸಲು ಕಳೆದ ಜನವರಿ ತಿಂಗಳಲ್ಲಿ ಅಂದಿನ ಶಾಸಕ ಎನ್.ಮಹೇಶ್ ಚಾಲನೆ ನೀಡಿದ್ದರು. ಇದರಲ್ಲಿ ಈ ಚರಂಡಿಯ ದುರಸ್ತಿಯೂ ಸೇರಿತ್ತು. ಈ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಸಂಬಂಧಪಟ್ಟ ಗುತ್ತಿಗೆದಾರ, ಎಂಜಿನಿಯರ್ ಸ್ಥಳದಲ್ಲಿ ಇರುವುದಿಲ್ಲ. ಸಿಮೆಂಟ್, ಕಬ್ಬಿಣ ಹಾಗೂ ಎಂ.ಸ್ಯಾಂಡ್ ಗುಣಮಟ್ಟದಿಂದ ಕೂಡಿಲ್ಲ. ಅಲ್ಲದೆ, ಇದನ್ನು ಕಡಿಮೆ ಪ್ರಮಾಣದಲ್ಲಿ ಇದರ ಬಳಕೆ ಮಾಡಲಾಗಿದೆ. ಇದರ ಬಳಕೆ ಬಗ್ಗೆ ಮಾಹಿತಿ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಅಲ್ಲದೆ, ಕೆಲವೆಡೆ ಈಗ ಹಾಕಲಾಗಿರುವ ಕಾಂಕ್ರೀಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ.
Advertisement
Poor work: ನಗರೋತ್ಥಾನ ಕಾಮಗಾರಿ ಕಳಪೆ ಆರೋಪ: ದೂರು ಸಲ್ಲಿಕೆ
03:41 PM Sep 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.