Advertisement

ಹಾಕಿದ್ದ ದಿನವೇ ಕೊಚ್ಚಿಹೋಯ್ತು ಸಿಮೆಂಟ್‌ ಕಾಂಕ್ರೀಟ್

06:25 AM Jun 13, 2020 | Suhan S |

ಕಾರಟಗಿ: ಪಟ್ಟಣದ ಡಾ| ರಾಜ್‌ ಕಲಾ ಮಂದಿರದ ಬಳಿಯ ಚಿನಿವಾಲ ಆಸ್ಪತ್ರೆಯ ಮುಂಭಾಗದ ರಸ್ತೆಗೆ ಕಾಂಕ್ರೀಟ್‌ ಮಾಡಿದ್ದ ದಿನವೇ ಮಳೆ ಸುರಿದಿದ್ದು, ಸಿಮೆಂಟ್‌ ಕೊಚ್ಚಿಕೊಂಡು ಹೋಗಿ ಕಲ್ಲುಗಳು ಮೇಲೆದ್ದಿವೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

Advertisement

ಮೂರ್‍ನಾಲ್ಕು ವರ್ಷಗಳ ಹಿಂದೆ ಡಾ| ರಾಜ್‌ ಕಲಾಮಂದಿರದ ಬಳಿ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿತ್ತು. ಆದರೆ ಚಿನಿವಾಲ ಆಸ್ಪತ್ರೆಯ ಮುಂಭಾಗದಲ್ಲಿ ಕಾಂಕ್ರೀಟ್‌ ಮಾಡುವುದನ್ನು ತಾಂತ್ರಿಕ ಕಾರಣಗಳಿಂದ ಬಿಡಲಾಗಿತ್ತು. ಕಳೆದ 8 ದಿನಗಳ ಹಿಂದೆ ಸಿಸಿ ನಿರ್ಮಿಸಲು ರಸ್ತೆಯ ಮಣ್ಣನ್ನು ಅಗೆದು ನಂತರ ಮರಂ ಹಾಕಿ ರೋಲರ್‌ನಿಂದ ಸಮತಟ್ಟು ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಈ ರಸ್ತೆಗೆ ಕಾಂಕ್ರೀಟ್‌ ಹಾಕುತ್ತಿದ್ದಾಗ ಮಳೆ ಪ್ರಾರಂಭವಾಗಿದ್ದರೂ ಗುತ್ತಿಗೆದಾರರು ಕಾಂಕ್ರೀಟ್‌ ಹಾಕಿ ಹೋಗಿದ್ದಾರೆ. ಆದರೆ ನಂತರ ರಭಸದಿಂದ ಸುರಿದ ಮಳೆಗೆ ಸಿಮೆಂಟ್‌ ಕಿತ್ತು ಹೋಗಿದೆ. ಪುರಸಭೆ ಆಡಳಿತ ಕಾಮಗಾರಿ ವೀಕ್ಷಿಸಿ ಪುನಃ ಕಾಂಕ್ರೀಟ್‌ ಹಾಕಿಸಿ ರಸ್ತೆಯನ್ನು ಸಮತಟ್ಟಾಗಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಳೆ ಬರುವ ಸಮಯದಲ್ಲಿ ಕಾಂಕ್ರೀಟ್‌ ಹಾಕಬಾರದಾಗಿತ್ತು. ರಸ್ತೆ ನಿರ್ಮಿಸುವುದು ಗುತ್ತಿಗೆದಾರನ ಹೊಣೆ. ಕಾಂಕ್ರೀಟ್‌ ಹಾಕಿದ ಸ್ಥಳ ಪರಿಶೀಲಿಸಿ ಸಮರ್ಪಕವಾಗಿ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. ರಸ್ತೆ ನಿರ್ಮಿಸಿದ ನಂತರ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ ಬಿಲ್‌ ಪಾವತಿಗೆ ಅನುಮತಿ ನೀಡಲಾಗುವುದು. -ಎನ್‌. ಶಿವಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next