ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಚಿಕ್ಕಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ನೀಡುವ ಆಹಾರವು ಕಳಪೆಯಾಗಿದ್ದು ಸೇವಿಸಲು ಯೋಗ್ಯವಾಗಿಲ್ಲ ಎಂದು ಸ್ಥಳೀಯ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ದೂರಿದ ಪ್ರಸಂಗ ನಡೆದಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಜಡ್ಡುಗಟ್ಟಿದ ಕೊಳಕು ಬೆಲ್ಲ, ಕಸಕಡ್ಡಿಯಿಂದ ಕೂಡಿದ ಅಕ್ಕಿ, ಸಕ್ಕರೆ, ಬೇಳೆ, ಹಾಲಿನ ಪುಡಿ, ಕೊಳೆತ ಮೊಟ್ಟೆಗಳನ್ನು ನೀಡಲಾಗುತ್ತಿದೆ. ಕೆಲವು ಕೇಂದ್ರಗಳಲ್ಲಿ ಇದನ್ನೂ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತರನ್ನು ಕೇಳಿದರೆ ನಮಗೆ ಇಲಾಖೆ ಯಿಂದ ಪೂರೈಕೆಯಾದ ಆಹಾರವನ್ನು ಕೊಡುತ್ತಿದ್ದೇವೆ ಎಂದು ಬೇಜವಾಬ್ದಾರಿ ಉತ್ತರ ನೀಡಿ ಜರುಗುತ್ತಾರೆ ಎಂದರು. ಅವರ ಮನೆಗಳಲ್ಲಿ ತಾವು ಮತ್ತು ತಮ್ಮ ಮಕ್ಕಳು ಇಂತಹ ಆಹಾರ ತಿನ್ನುತ್ತಾರ ಎಂದು ಮಹಿಳೆಯರು ಪಂಚಾಯಿತಿಯಲ್ಲಿ ಪ್ರೆಶ್ನೆ ಮಾಡಿದರು.
ಇದೆ ವೇಳೆ ಈ ವಿಷಯವಾಗಿ ಕೆಲ ಅಂಗನವಾಡಿ ಕಾರ್ಯಕರ್ತರನ್ನು ಕೇಳಿದಾಗ ಒಂದು ಕೇಂದ್ರದಲ್ಲಿ ನಿರ್ವಹಣೆ ಮಾಡುವಲ್ಲಿ ಈ ಸಮಸ್ಯೆಯಾಗಿದೆ ಎಲ್ಲ ಕೇಂದ್ರಗಳಲ್ಲಿ ಗುಣ ಮಟ್ಟದ ಆಹಾರ ನೀಡಲಾಗುತ್ತಿದೆ ಎನ್ನುವ ಅಭಿಪ್ರಾಯ ಕಂಡುಬತು.
ಆದರೆ ಮಹಿಳೆಯರು ದೂರಿದಂತೆ ಇತ್ತೀಚ್ಚಿಗೆ ಅಂಗನವಾಡಿ ಕೇಂದ್ರಗಳಿಂದ ಕೊಡುವ ಆಹಾರವನ್ನಾಗಲಿ, ಆಹಾರ ಪದಾರ್ಥವಾಗಲಿ ಗರ್ಭಿಣಿ ಯರು, ಬಾಣತಿಯರು ತೆಗೆದುಕೊಳ್ಳುತ್ತಿಲ್ಲ. ಹದಿನೈದು ದಿನ ಅಂಗನವಾಡಿಯಲ್ಲಿ ಅಡಿಗೆ ಮಾಡಿ ಗರ್ಭಿಣಿ ಯರಿಗೆ ಉಣ್ಣಿಸಿದರು. ಈಗ ಅದು ನಿಲ್ಲಿಸಿದ್ದಾರೆ. ಆಹಾರ ಕೊಡುತ್ತೇವೆಂದು ಹೇಳುತ್ತಾರೆ ಯಾರಿಗೆ ಏನು ಕೊಡುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಯಾವ ರೀತಿ ಅಡಿಗೆ ಮಾಡಿ ಹಾಕುತ್ತಾರೋ, ಏನು ತಿನ್ನಿಸುತ್ತಾರೋ ಎಂಬುವುದು ನಮಗೆ ಹೇಗೆ ಗೊತ್ತಾಗಬೇಕು ಎಂದು ಆಕ್ರೋಶ ಹೊರ ಹಾಕಿದರು.
ಮಕ್ಕಳನ್ನು ಕಳಿಸುವುದಿಲ್ಲ ಅಂದರೂ ಬಂದಾನ ಮಾಡಿ ಕೇಂದ್ರಗಳಿಗೆ ಕರೆದುಕೊಂಡು ಹೋಗುತ್ತಾರೆ ನಮ್ಮ ಮಕ್ಕಳಿಗೆ ಹೆಚ್ಚು ಕಡಿಮೆ ಆದರೆ ಏನು ಗತಿ. ಇವರನ್ನು ಕೇಳುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಇಂತಹ ಆಹಾರ ತಿಂದ ಚಿಕ್ಕ ಮಕ್ಕಳು, ಬಡ ಕುಟುಂಬದ ಗರ್ಭಿಣಿ, ಬಾಣತಿಯರ ಪರಿಸ್ಥಿತಿ ಏನಾಗಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಕೇಂದ್ರದಿಂದ ನೀಡಿದ ಮೊಟ್ಟೆ, ಬೆಲ್ಲ, ಸಕ್ಕರೆ, ಹಾಲಿನ ಪುಡಿ ಇತರೆ ಪದಾರ್ಥಗಳನ್ನು ಪಂಚಾಯಿತಿ ಕಚೇರಿಯ ಟೇಬಲ್ ಮೇಲೆ ಹಿಟ್ಟು ಪ್ರದರ್ಶಿಸಿದರು. ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಪಂಚಾಯ್ತಿ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.