ಚಿಂತಾಮಣಿ: ನಗರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ, ಬಾಣಂತಿಯರಿಗೆ ಕಳಪೆ ಆಹಾರ ವಿತರಣೆ, ಬ್ರೆಡ್, ಹಾಲಿನಲ್ಲಿ ಗುಣಮಟ್ಟ ಕಡಿತ ಮಾಡಿದ್ದ ಆರೋ ಪದ ಮೇಲೆ ಗುತ್ತಿಗೆ ದಾರರಿಗೆ ಆಸ್ಪತ್ರೆ ವೈದ್ಯಾ ಧಿಕಾರಿ ಸಂತೋಷ್ ನೋಟಿ ಸ್ ನೀಡಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರ ವಾರ ಉದಯವಾಣಿ ವೆಬ್ ನ್ಯೂಸ್, ಶನಿವಾರ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ ಆಧಾರದ ಮೇಲೆ ಸಾರ್ವಜನಿಕ ಆಸ್ಪತ್ರೆಯ ಕ್ಯಾಂಟೀನ್ ಗುತ್ತಿಗೆದಾರರಾದ ಶಿಡ್ಲಘಟ್ಟ ಬಾಲಾಜಿ ಪ್ರಾವಿಜನ್ ಸ್ಟೋರ್, ಸತ್ಯದೇವ್ ಬೇಕರಿ, ಮೀಲಕ್ ಡೇರಿ ಮಾಲಿಕ ಸತ್ಯನಾರಾಯಣಾಚಾರ್ ಅವರಿಗೆ ವೈದ್ಯಾಧಿಕಾರಿಗಳು ನೋಟಿಸ್ ನೀಡಿದರು.
ಸಾರ್ವಜನಿಕ ಆಸ್ಪತ್ರೆಗೆ 2021-22ನೇ ಸಾಲಿಗೆ ಪಥ್ಯ ಆಹಾರ ಸರಬರಾಜು ಮಾಡಲು ಟೆಂಡರ್ ತಮಗೆ ಆಗಿದ್ದು, ಸರ್ಕಾರ ನಿಗದಿಪಡಿಸಿದ ಪ್ರಮಾಣದಲ್ಲಿ ರೋಗಿಗಳಿಗೆ ಹಾಲು, ಬ್ರೆಡ್, ಪಥ್ಯ ಆಹಾರ ನೀಡುತ್ತಿಲ್ಲ ಎಂದು ಉದಯವಾಣಿ ಪತ್ರಿಕೆಯಲ್ಲಿ ವರದಿ ಆಗಿದೆ.
ಇದನ್ನೂ ಓದಿ;- ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್
ಪತ್ರಿಕೆಯಲ್ಲಿ ಆರೋಪಿಸಿರುವಂತೆ ಹಾಗೂ ಪತ್ರಿಕೆಯಲ್ಲಿ ನೀಡಿರುವ ಬಗ್ಗೆ ನಿಮ್ಮ ಸೂಕ್ತ ಲಿಖೀತ ಸಮಜಾಯಿಯನ್ನು ನೀಡುವಂತೆ ಗುತ್ತಿಗೆದಾರರಿಗೆ ನೋಟಿಸ್ ಪ್ರತಿಯಲ್ಲಿ ಸೂಚಿಸಲಾಗಿದೆ. ಅಲ್ಲದೆ, ನೋಟಿಸ್ ನೀಡಿದ ಮೂರು ದಿನಗಳ ಒಳಗೆ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಸಮಜಾಯಿಷಿ ನೀಡದಿದ್ದರೆ ತಮಗೆ ಆಗಿರುವ ಗುತ್ತಿಗೆ ರದ್ದು ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.