Advertisement

ಕಳಪೆ ಕಾಮಗಾರಿ ಹಿನ್ನಲೆ : ತಾಟಗೇರಾದಲ್ಲಿ ಕಿರು ಸೇತುವೆ ಕಾಮಗಾರಿ ಸ್ಥಗಿತ

08:44 PM Nov 14, 2021 | Team Udayavani |

ದಾಂಡೇಲಿ: ತಾಲೂಕಿನ ತಾಟಗೇರಾ ಗ್ರಾಮದಲ್ಲಿ ಶಾಸಕರ ಅನುದಾನದಡಿ ನಿರ್ಮಾಣಗೊಳ್ಳುತ್ತಿರುವ ಕಿರು ಸೇತುವೆಯ ಕಾಮಗಾರಿಯನ್ನು ಕಳಪೆ ಕಾಮಗಾರಿಯ ಹಿನ್ನಲೆ ಗ್ರಾಮಸ್ಥರು ನೀಡಿದ ದೂರಿನನ್ವಯ ಹಳಿಯಾಳ ಉಪವಿಭಾಗದ ಪಂಚಾಯತ್ ರಾಜ್ ಕಾರ್ಯನಿರ್ವಾಹಕ ಅಭಿಯಂತರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

Advertisement

ಶಾಸಕರ ಅನುದಾನದಲ್ಲಿ ನಿರ್ಮಾಣಗೊಳುತ್ತಿದ್ದ ಕಿರು ಸೇತುವೆಯ ಕಳಪೆ ಕಾಮಗಾರಿಯ ಕುರಿತು, ತಾಟಗೇರಾ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ ಬೋವಿವಡ್ಡರ ಅವರಿಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಸುಭಾಸ ಬೋವಿವಡ್ಡರ ಅವರು ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ಸಮಯದಲ್ಲಿ ಕಾಮಗಾರಿಯ ಅಂದಾಜು ಮೊತ್ತದ ನಾಮಫಲಕ ಅಳವಡಿಸಿರಲಿಲ್ಲ. ಈ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಯನ್ನು ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಉದ್ದಟತನ ಪ್ರದರ್ಶಿಸಿದ್ದಾರೆ. ಆದ್ದರಿಂದ ನಡೆಯುತ್ತಿರುವ ಸೇತುವೆ ಕಾಮಗಾರಿ ಕಳಪೆ ಆಗಿರುವ ಸಾದ್ಯತೆ ಇದೆ.

ಈ ಕಾರಣದಿಂದ ಸೇತುವೆ ನಿರ್ಮಾಣಗೊಳ್ಳುತ್ತಿರುವ ಸ್ಥಳದಲ್ಲಿ ನಿರ್ಮಾಣದ ಅಂದಾಜು ಮೊತ್ತ ಹಾಗೂ ಇನ್ನಿತರ ವಿವರಗಳನ್ನೊಳಗೊಂಡ ನಾಮಫಲಕವನ್ನು ಅಳವಡಿಸಬೇಕು ಮತ್ತು ಈ ಭಾಗದ ಗ್ರಾಮಸ್ಥರಿಗೆ ಸೇತುವೆಯ ಕುರಿತು ಸಮರ್ಪಕವಾದ ಮಾಹಿತಿ ನೀಡಬೇಕು, ಅಲ್ಲಿಯವರೆಗೆ ಕಾಮಗಾರಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಬೇಕೆಂದು ಸುಭಾಷ ಬೋವಿವಡ್ಡರ ಅವರು ಮನವಿ ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಕಾರ್ಯನಿರ್ವಾಹಕ ಅಭಿಯಂತರರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಇದನ್ನೂ ಓದಿ : ಹುಣಸೂರು : ಭಾರಿ ಮಳೆಗೆ ಹನಗೋಡು ಹೋಬಳಿಯಲ್ಲಿ ಮನೆಗಳು ಕುಸಿತ

Advertisement

Udayavani is now on Telegram. Click here to join our channel and stay updated with the latest news.

Next