ಉತ್ತರಾಖಂಡ್ : ರಿಷಿಕೇಶ್ ನಲ್ಲಿರುವ ರೆಸಾರ್ಟ್ ನ ಸ್ವಾಗತಗಾರ್ತಿ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಹತ್ಯೆ ಹಿಂದೆ ಏನೆಲ್ಲಾ ನಡೆದಿತ್ತು ಎಂಬುದರ ಮಾಹಿತಿ ಬಹಿರಂಗಗೊಂಡಿದೆ.
ರಿಷಿಕೇಶ್ ನಲ್ಲಿರುವ ವಂತರಾ ರೆಸಾರ್ಟ್‌ನಲ್ಲಿ ಸ್ವಾಗತಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಕಳೆದ ಸೆ. ಸೆಪ್ಟೆಂಬರ್ 18 ರಿಂದ ನಾಪತ್ತೆಯಾಗಿದ್ದರು ಬಳಿಕ ಸೆಪ್ಟೆಂಬರ್ 22 ರಂದು ಚಿಲ ಶಕ್ತಿ ನಾಲೆಯಲ್ಲಿ ಪತ್ತೆಯಾಗಿದೆ, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರೆಸಾರ್ಟ್ ಮಾಲಕ ಹಾಗೂ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಪೊಲೀಸರು ಮೂವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಮೂವರನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಇಲ್ಲ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕು ಗೊಳಿಸಿದ್ದು, ಈ ವೇಳೆ ಅಂಕಿತ ತನ್ನ ಸಹೋದ್ಯೋಗಿಗಳಿಗೆ ಕಳುಹಿಸಿದ ಸಂದೇಶ ಇಲ್ಲಿನ ವಾಸ್ತವ ಅಂಶವನ್ನು ಪುಷ್ಟಿ ಕರಿಸುತ್ತೆ ಎನ್ನಲಾಗಿದೆ. ಅಲ್ಲದೆ ರೆಸಾರ್ಟ್ ನಲ್ಲಿ ಏನೆಲ್ಲಾ ನಡೆಯುತ್ತಿತ್ತು ಎಂಬುದರ ಕುರಿತು ಅಂಕಿತಾ ತನ್ನ ಸಹೋದ್ಯೋಗಿಗಳಿಗೆ ತಿಳಿಸಿದ್ದಾಳೆ ಅಲ್ಲದೆ ನಾನು ಬಡವಳಾಗಿರಬಹುದು ಆದರೆ ನನ್ನನ್ನು 10 ಸಾವಿರಕ್ಕೆ ಮಾರಿಕೊಳ್ಳುವುದಿಲ್ಲ ಎಂದು ಸಹುದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಗೊತ್ತಾಗಿದೆ..
ಅಂಕಿತ ಈ ಮೂವರ ಜೊತೆ ನಡೆಸಿದ ಸಂಭಾಷಣೆಯ ಸಂದೇಶವನ್ನು ತನ್ನ ಸಹದ್ಯೋಗಿಗಳಿಗೆ ಕಳುಹಿಸಿದ್ದಾಳೆ.
ಅಂಕಿತ ನಾಪತ್ತೆಯಾಗುವ ದಿನ ರೆಸಾರ್ಟ್ ನಿರ್ವಾಹಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಅಂಕಿತ್ ಅಲಿಯಾಸ್ ಪುಲ್ಕಿತ್ ಗುಪ್ತಾ, ಮ್ಯಾನೇಜರ್ ಸೌರಭ್ ಭಾಸ್ಕರ್ ಅವರೊಂದಿಗೆ ರಿಷಿಕೇಶಕ್ಕೆ ತೆರಳಿದ್ದರು ಅಲ್ಲಿಂದ ಹಿಂತಿರುಗುವ ವೇಳೆ ಚಿಲ ಶಕ್ತಿ ನಾಲೆ ಬಳಿ ಮೂವರು ಮದ್ಯ ಸೇವಿಸಲು ಕಾರನ್ನು ನಿಲ್ಲಿಸಿದ್ದಾರೆ, ಈ ವೇಳೆ ರೆಸಾರ್ಟ್ ಮ್ಯಾನೇಜರ್ ಅಂಕಿತಾಳನ್ನು ರೆಸಾರ್ಟಿಗೆ ಬರುವ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ ಆದರೆ ಇದನ್ನು ಅಂಕಿತ ಖಡಾ ಖಂಡಿತವಾಗಿ ನಿರಾಕರಿಸಿದ್ದಾರೆ ಇದರಿಂದ ಸಿಟ್ಟಿಗೆದ್ದ ಮೂವರು ಸೇರಿ ಅಂಕಿತಾಳನ್ನು ನಾಲೆಗೆ ದೂಡಿ ಕೊಲೆಗೈದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಶಿಕ್ಷಕನ ಮೇಲೆ ಗುಂಡು ಹಾರಿಸಿ ಹಗೆ ಸಾಧಿಸಿದ 10ನೇ ತರಗತಿ ವಿದ್ಯಾರ್ಥಿ, ಸ್ಥಿತಿ ಗಂಭೀರ