Advertisement

ಪೂಂಜಾವು ಕಲ್ಲಿನ ಕೋರೆಯಿಂದ ತೊಂದರೆ 

03:58 PM Feb 17, 2018 | Team Udayavani |

ಅನಂತಾಡಿ: ಪೂಂಜಾವು ಎಂಬಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಲ್ಲಿನ ಕೋರೆಯಿಂದ ಸಾರ್ವಜನಿಕರಿಗೆ ತೊಂದರೆ ಇದ್ದು, ಅನಂತಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯ ನಿರ್ಣಯದಂತೆ ಈ ತೊಂದರೆಯ ಬಗ್ಗೆ ಕಲ್ಲಿನ ಕೋರೆಯ ಮಾಲಕರಲ್ಲಿ ಮಾತುಕತೆ ನಡೆಸಲು ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್‌ ಇವರ ನೇತೃತ್ವದಲ್ಲಿ ಪಂ. ಉಪಾಧ್ಯಕ್ಷೆ ಕವಿತಾ, ಪಂ. ಸದಸ್ಯರಾದ ಪುರಂದರ ಗೌಡ, ವಸಂತ ಗೌಡ, ವಸಂತಿ, ಸುಮಿತ್ರಾ, ಸುಜಾತಾ, ಪಂ. ಅಭಿವೃದ್ಧಿ ಅಧಿಕಾರಿ ಜಯರಾಮ ಕೆ. ಅವರು ಕಲ್ಲಿನ ಕೋರೆಗೆ ಭೇಟಿ ನೀಡಿ ಎಚ್ಚರಿಕೆ ನೀಡಿದರು.

Advertisement

ಸಾರ್ವಜನಿಕರ ಬೇಡಿಕೆಗಳನ್ನು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೋರೆ ಮಾಲಕರಿಗೆ ತಿಳಿಸಿದ್ದು, ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಬೇಡಿಕೆಗಳು

.ಸಾರ್ವಜನಿಕ ರಸ್ತೆಯಲ್ಲಿ ಕೋರೆಯ ಲಾರಿಗಳು ಸಂಚರಿಸುವಾಗ ಧೂಳು  ಏಳದಂತೆ ಸರಿಯಾದ ನೀರಿನ ಬಳಕೆ ಮಾಡಬೇಕು.
. ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆ ಆಗದಂತೆ  ಶಬ್ದ ಮಾಲಿನ್ಯ ಮಾಡಬಾರದು.
. ಬೆಳಗ್ಗೆ 8.30ರಿಂದ ಸಂಜೆ 6ರ ವರೆಗೆ ಮಾತ್ರ ಕೆಲಸ ಕಾರ್ಯ ನಡೆಯಬೇಕು.
. ಕಲ್ಲಿನ ಕೋರೆಯಿಂದ ಹೊರ ಬರುವ ಧೂಳು ಅಕ್ಕಪಕ್ಕದ ಮನೆಗಳಿಗೆ, ಕೃಷಿ ತೋಟಕ್ಕೆ ಹಾಗೂ ರಸ್ತೆಗೆ ಹೋಗದಂತೆ ತಡೆಹಿಡಿಯಬೇಕು.
. ಅಧಿಕ ಹೊರೆ ಹೊತ್ತು ದಶ ಚಕ್ರದ ಲಾರಿಗಳು ಸಂಚರಿಸಬಾರದು.
. 15 ದಿನಗಳೊಳಗೆ ರಸ್ತೆಗೆ ಡಾಮರು ಹಾಕಬೇಕು.

Advertisement

Udayavani is now on Telegram. Click here to join our channel and stay updated with the latest news.

Next