Advertisement

Ambassador; ಕ್ಯಾನ್ಸರ್‌ ಜಾಗೃತಿಗೆ ಪೂನಂ ಪಾಂಡೆ ರಾಯಭಾರಿ?

12:21 AM Feb 08, 2024 | Team Udayavani |

ಹೊಸದಿಲ್ಲಿ: ಇತ್ತೀಚೆಗಷ್ಟೇ ಗರ್ಭಕಂಠ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದೇನೆ ಎಂದು ವದಂತಿ ಹಬ್ಬಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ನಟಿ ಪೂನಂ ಪಾಂಡೆ ಇದೇ ಗರ್ಭಕಂಠ ಕ್ಯಾನ್ಸರ್‌ ಬಗ್ಗೆ ಸರಕಾರ‌ವು ನಡೆಸಲಿರುವ ರಾಷ್ಟ್ರೀಯ ಮಟ್ಟದ ಜಾಗೃತಿ ಅಭಿಯಾನಕ್ಕೆ ರಾಯಭಾರಿ ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಪೂನಂ ಮತ್ತು ಆಕೆಯ ತಂಡ ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸುತ್ತಿದ್ದು, ಶೀಘ್ರವೇ ಈ ಕುರಿತಂತೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next