Advertisement

ಪೂಜಾ ಪ್ರಕಾಶನ ಮುಂಬಯಿ  ಪ್ರಕಾಶಿತ ಮೂರು ಕೃತಿಗಳು ಏಕಕಾಲಕ್ಕೆ ಬಿಡುಗಡೆ

11:31 AM Jan 01, 2019 | Team Udayavani |

ಮುಂಬಯಿ: ಊರಿನ ಪುನರ್‌ಪುಲಿ, ಕೋಲ ಮೊದಲಾದವುಗಳನ್ನು ಒಟ್ಟಿಗೆ ಕಟ್ಟಿಕೊಂಡು ಈ ಮುಂಬಯಿಗೆ ಬಂದು ಸೇರಿದ ನಾವಿಬ್ಬರೂ ಇಲ್ಲೂ ಸಹೋದರತ್ವ ದಿಂದಲೇ ಬಾಳಿದೆವು. ಚಂದ್ರಹಾಸ ಸುವರ್ಣ ಅವರು ಮಣ್‌¡ದ ಮದಿಪು ಕಾದಂಬರಿ ರಚಿಸಿದರೆ ನಾನು ಮಣ್ಣಿನ ಪರಿಮಳ ಪಸರಿಸುವ ಹೊಟೇಲ್‌ ಉದ್ಯಮ ನಡೆಸಿದೆ. ಬರವಣಿಗೆ, ಸಾಹಿತ್ಯ ಓದಿನಿಂದ ಮನುಷ್ಯನ ಬುದ್ಧಿ-ಜ್ಞಾನ ವೃದ್ಧಿಯಾಗಿ ಸಮಾಜವು ಸ್ವಸ್ಥವಾಗುವುದು. ಅರಿವು ಮನುಕುಲದ ಬಾಳು ಬೆಳಗಿಸುತ್ತದೆ ಎಂದು ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ಸಂಸ್ಥಾಪಕ ರಘುನಂದನ್‌ ಎಸ್‌. ಕಾಮತ್‌ ತಿಳಿಸಿದರು.

Advertisement

ಡಿ. 29ರಂದು ಸಂಜೆ ಸಾಂತಾಕ್ರೂಜ್‌ ಪೂರ್ವದ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ಅಭಿನಯ ಸಾಮ್ರಾಜ್ಯ ಮುಂಬಯಿ ಮತ್ತು ಪೇಜಾವರ ಮಠ ಮುಂಬಯಿ ಶಾಖೆ ಸಹಯೋಗ‌‌ದಲ್ಲಿ ನಡೆದ ಪೂಜಾ ಪ್ರಕಾಶನ ಮುಂಬಯಿ ಪ್ರಕಾಶಿತ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃತಿಕಾರರನ್ನು ಅಭಿನಂದಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದ  ನಾಗೇ ಶ್ವರ ಸಿನಿ ಕ್ರಿಯೇಷನ್ಸ್‌ನ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ, ಕರ್ನಾಟಕ ಸಂಘ ಅಸಲ್ಫಾ ಅಧ್ಯಕ್ಷ ಕಡಂದಲೆ ಸುರೇಶ್‌ ಎಸ್‌.ಭಂಡಾರಿ ಅವರು ಪೂಜಾ ಪ್ರಕಾಶನದ ಪ್ರಕಾಶಕ,  ಪ್ರಶಸ್ತಿ ಪುರಸ್ಕೃತ ಕವಿ, ಲೇಖಕ  ಶಿಮಂತೂರು ಚಂದ್ರಹಾಸ ಸುವರ್ಣ ರಚಿತ ಪಣಿಯಾಡಿ ಪ್ರಶಸ್ತಿ ಪುರಸ್ಕೃತ ತುಳು ಕಾದಂಬರಿ “ಮಣ್‌¡ದ ಮದಿಪು’ ಮತ್ತು ಪ್ರಶಸ್ತಿ ವಿಜೇತ ಕವಯಿತ್ರಿ, ಲೇಖಕಿ ಶಾರದಾ ಆನಂದ್‌ ಅಂಚನ್‌ ಅವರ ತುಳು ಅನುವಾದ ಕೃತಿ “ಪಾರ್ದನೊಡು ಮೂಡ್‌ª ಬೈದಿನ ಬೀರ್ಯದ ಪೊಂಜೊವುಲು’ ಮತ್ತು ಕನ್ನಡ ಕಥಾ ಸಂಕಲನ “ರಂಗೋಲಿ’ ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಿದರು. ಸಮಾಜ ಸೇವಕ ಮಧುಕರ್‌ ಪೂಜಾರಿ ಅತಿಥಿಯಾಗಿ ಉಪಸ್ಥಿತರಿದ್ದರು.

ಮದಿಪು ಕೃತಿಯನ್ನು ಅಕ್ಷಯ ಮಾಸಿಕದ ಸಂಪಾದಕ ಹರೀಶ್‌ ಹೆಜ್ಮಾಡಿ ಮತ್ತು ಶಾರದಾ ಅಂಚನ್‌ ಅವರ ಕೃತಿಗಳನ್ನು ಕವಿ, ನಾಟಕಕಾರ ಸಾ. ದಯಾ ಅವರು ಕ್ರಮವಾಗಿ ಪರಿಚಯಿಸಿ ಶುಭಹಾರೈಸಿದರು. ಕೃತಿಕಾರರಾದ ಚಂದ್ರಹಾಸ ಸುವರ್ಣ ಮತ್ತು ಶಾರದಾ ಅಂಚನ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಭಾರತ್‌ ಬ್ಯಾಂಕ್‌ ನಿರ್ದೇಶಕ ದಾಮೋದರ್‌ ಸಿ. ಕುಂದರ್‌, ಪೇಜಾವರ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ರಾಮದಾಸ ಉಪಾಧ್ಯಾಯ ರೆಂಜಾಳ, ನ್ಯಾಯವಾದಿ ಆರ್‌. ಎಂ. ಭಂಡಾರಿ, ಅನ್ನಪೂರ್ಣೇಶ್ವರಿ ಕಾಮತ್‌, ಚಿತ್ರಕಾರ ದೇವದಾಸ ಶೆಟ್ಟಿ, ನಿತ್ಯಾನಂದ ಡಿ. ಕೋಟ್ಯಾನ್‌, ಹರೀಶ್‌ ಜಿ. ಪೂಜಾರಿ ಕೊಕ್ಕರ್ಣೆ, ಜಯ ಎ. ಶೆಟ್ಟಿ, ನಾಗರಾಜ್‌ ಗುರುಪುರ, ರಮೇಶ್‌ ಶೆಟ್ಟಿ ಪಯ್ಯರು, ಶೇಖರ್‌ ಸಸಿಹಿತ್ಲು, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಲತಾ ಎಸ್‌. ಶೆಟ್ಟಿ ಮುದ್ದುಮನೆ, ರಜಿತ್‌ ಎಂ. ಸುವರ್ಣ, ಜಯಕರ ಡಿ. ಪೂಜಾರಿ, ಪ್ರೇಮನಾಥ್‌ ಪಿ. ಕೋಟ್ಯಾನ್‌, ಡಾ| ಈಶ್ವರ್‌ ಅಲೆವೂರು, ಧರ್ಮಪಾಲ್‌ ಜಿ. ಅಂಚನ್‌, ಅಶೋಕ್‌ ವಳದೂರು, ಕು| ಮಾನ್ಸಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಕೃತಿಕಾರರನ್ನು ಅಭಿನಂದಿಸಿದರು.

Advertisement

ಪೂಜಾ ಪ್ರಕಾಶನದ ಸರಸ್ವತಿ ಸಿ. ಸುವರ್ಣ, ಪೂಜಾಶ್ರೀ ಸಿ. ಸುವರ್ಣ, ಆನಂದ್‌ ವಿ. ಅಂಚನ್‌, ಪ್ರಭಾಕರ್‌ ಅಮೀನ್‌, ಹೇಮಾ ಹರಿದಾಸ್‌, ವೀಣಾ ಪೂಜಾರಿ ಅವರು ಅತಿಥಿಗಳನ್ನು ಗೌರವಿಸಿದರು. ಶಾರದಾ ಎ. ಅಂಚನ್‌ ಪ್ರಾರ್ಥನೆಗೈದರು. ನವೀನ್‌ ಕರ್ಕೇರ  ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ್‌ ಸುವರ್ಣ ವಂದಿಸಿದರು. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಹೊಟ್ಟೆಪಾಡಿಗೆ ತಾಯ್ನಾಡನ್ನು ತೊರೆದು ಮಾಯಾ ನಗರಿಗೆ ಬಂದರೂ ನಾವು ನಮ್ಮ ಸಂಸ್ಕೃತಿ, ಸಾಹಿತ್ಯ ಸೇವೆಯನ್ನು ನಿರಂತರವಾಗಿ ಉಳಿಸುವ ಪ್ರಯತ್ನದಲ್ಲಿ ನಿರತರಾದವರು ಎನ್ನುವುದಕ್ಕೆ ಇಂದಿನ ಈ ಕಾರ್ಯಕ್ರಮ ಸಾಕ್ಷಿ. ಹೆಣ್ಣು ಕೇವಲ ಮನೆಯಲ್ಲಿ ಶೃಂಗರಿಸಿದ ಗೊಂಬೆಯಲ್ಲ ಎನ್ನುವುದಕ್ಕೆ ಶಾರದಾ ಅಂಚನ್‌ ಉದಾಹರಣೆ. ಅಹಿಂಸೆಯ ರೂಪದಲ್ಲಿರುವ ಪೆನ್ನು ಒಂದು ಉಪಯುಕ್ತ ಅಸ್ತ್ರ. ಅದನ್ನು ಸಶಕ್ತವಾಗಿ ಉಪಯೋಗಿಸಬೇಕಾದ ಅಗತ್ಯ ನಮಗಿದೆ. ವಿಜ್ಞಾನ ಬಾಹ್ಯ ಜಗತ್ತನ್ನು ಗಟ್ಟಿಗೊಳಿಸಿದರೆ, ಓದು ಎಂಬ ಜ್ಞಾನ ನಮ್ಮ ಆತ್ಮವನ್ನು  ಗಟ್ಟಿಗೊಳಿಸುತ್ತದೆ.
-ಕಡಂದಲೆ ಸುರೇಶ್‌ ಭಂಡಾರಿ, 
ಆಡಳಿತ ನಿರ್ದೇಶಕರು, ನಾಗೇಶ್ವರ ಸಿನಿ ಕ್ರಿಯೇಷನ್ಸ್‌

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next