Advertisement

ಮತ್ತೆ ಬಂದ ಪೂಜಾಗಾಂಧಿ; ಪ್ರತಿ ಹಿಂಸ ಚಿತ್ರದಲ್ಲಿ ಪೂಜಾಫ‌ಲ

10:04 AM Feb 14, 2019 | Sharanya Alva |

ನಟಿ ಪೂಜಾಗಾಂಧಿ “ದಂಡುಪಾಳ್ಯ’ ಚಿತ್ರದ ನಂತರ ಎಲ್ಲೂ ಸುದ್ದಿಯಾಗಲೇ ಇಲ್ಲ. ಅಲ್ಲೆಲ್ಲೋ ಚುನಾವಣೆ ವೇಳೆ ಸದ್ದು ಮಾಡಿದ್ದು ಬಿಟ್ಟರೆ, ಬೇರೆಲ್ಲೂ ಪೂಜಾಗಾಂಧಿ ಸುದ್ದಿಯಾಗಲೇ ಇಲ್ಲ. ಯಾವ ಚಿತ್ರ ಮಾಡುತ್ತಿದ್ದಾರೆ ಎಂಬುದಕ್ಕೂ ಉತ್ತರ ಇರಲಿಲ್ಲ. ಈಗ ಪೂಜಾಗಾಂಧಿ ಸದ್ದಿಲ್ಲದೆಯೇ ಒಂದು ಸಿನಿಮಾ ಒಪ್ಪಿಕೊಂಡು, ಆ ಚಿತ್ರದ ಮೂಲಕ ಪುನಃ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಚಿತ್ರೀಕರಣ ಕೂಡ ಶುರುವಾಗಿದೆ. ಅಂದಹಾಗೆ, ಪೂಜಾಗಾಂಧಿ ಅಭಿನಯಿಸುತ್ತಿರುವ ಚಿತ್ರಕ್ಕೆ “ಪ್ರತಿ ಹಿಂಸ’ ಎಂದು ಹೆಸರಿಡಲಾಗಿದೆ. 2 ಎಂ ಸಿನಿಮಾಸ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆಯೇ ಶುರುವಾಗಿ ಹತ್ತು ದಿನಗಳ ಕಾಲ ಚಿತ್ರೀಕರಣ ಮುಗಿಸಿಕೊಂಡಿದೆ.

Advertisement

ಇನ್ನು, ಈ ಚಿತ್ರಕ್ಕೆ ಕೆ.ಜನಾರ್ಧನ್‌ ನಿರ್ದೇಶಕರು. ಕೆ.ವಿ.ಶಬರೀಶ್‌ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. “ಪ್ರತಿ ಹಿಂಸ’ ಚಿತ್ರದಲ್ಲಿ ಪೂಜಾಗಾಂಧಿ ಅವರಿಗೆ ವಿಶೇಷ ಪಾತ್ರವಿದೆ. ಇದು ಬಿಗ್‌ ಬಜೆಟ್‌ ಚಿತ್ರ ಅನ್ನುವುದಷ್ಟೇ ಈ ಹೊತ್ತಿನ ಮಾಹಿತಿ. ಉಳಿದಂತೆ ಚಿತ್ರದ ಕಥೆ ಏನು ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಇದೊಂದು ಸಾಹಸಮಯ ಸಿನಿಮಾ ಎಂಬುದಕ್ಕೆ ಮಾತ್ರ ಉತ್ತರ ಸಿಕ್ಕಿದೆ. ಇನ್ನು, ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. 

ಚಿತ್ರಕ್ಕೆ ಹ. ಸು.ರಾಜಶೇಖರ್‌ ಸಂಭಾಷಣೆ ಬರೆದಿದ್ದಾರೆ. ಗಂಗು ನಿರ್ಮಾಣದ ಸಾರಥ್ಯ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪೂಜಾ ಗಾಂಧಿ ಜೊತೆಗೆ ಸಚಿನ್‌, ರಾಹುಲ್‌ ದೇವ್‌, ರವಿ ಕಾಳೆ ಹಾಗೂ ಇತರರು ಕಾಣಿಸಿಕೊಳ್ಳುತ್ತಿದ್ದಾರೆ. ಮಾಸ್‌ ಮಾಧ ಸಾಹಸ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಭರ್ಜರಿ ಸಾಹಸ ಸನ್ನಿವೇಶಗಳಿವೆ. ಆ ಸಾಹಸ ದೃಶ್ಯದಲ್ಲಿ ನಟಿ ಪೂಜಾ ಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ಕೊಡುವ ಚಿತ್ರತಂಡ, ಚಿತ್ರಕ್ಕೆ ರಾಜೇಶ್‌ ಕುಮಾರ್‌ ಛಾಯಾಗ್ರಹಣ ಮಾಡಲಿದ್ದು, ವಿ2 ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next