Advertisement

Thirthahalli ಕೊದಂಡರಾಮ ದೇವಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಪೂಜೆ: ಕಿಮ್ಮನೆ ರತ್ನಾಕರ್

02:52 PM Jan 19, 2024 | Kavyashree |

ತೀರ್ಥಹಳ್ಳಿ: ಜ.22 ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ಕಾರಣದಿಂದ ತೀರ್ಥಹಳ್ಳಿಯ ರಥಬೀದಿಯಲ್ಲಿರುವ ಶ್ರೀ ಕೊದಂಡರಾಮನ ದೇವಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

Advertisement

ಕಲ್ಲಾರೆ ಗಣಪತಿ ದೇವಸ್ಥಾನದ ಬಳಿ ಪಾನಕ ವಿತರಣೆ ಕೂಡ ಇರಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀಕೊದಂಡಸ್ವಾಮಿಗೆ ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದೆ. ಈ ಪೂಜೆಗೆ ಪ್ರತಿಯೊಬ್ಬರು ಭಾಗವಹಿಸಿ ಎಂದು ಮನವಿ ಮಾಡಿದರು.

ಶುಕ್ರವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸದಸ್ಯರಿಗೂ ಈ ಪೂಜೆಗೆ ಅಹ್ವಾನ ನೀಡುತ್ತಿದ್ದೇನೆ. ಶನಿವಾರ, ಭಾನುವಾರ ಶ್ರಮದಾನ ಮಾಡಿ ದೇವಸ್ಥಾನ ಹಾಗೂ ಆವರಣಗಳನ್ನು ಸುಣ್ಣ-ಬಣ್ಣ ಬಳಿದು ಸ್ವಚ್ಛತೆ ನಡೆಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪಟ್ಟಣ ಪಂಚಾಯತ್ ಸಹಕಾರ ಕೂಡ ಕೇಳಿದ್ದೇವೆ. 2 ಕೋಟಿ ವೆಚ್ಚದಲ್ಲಿ ದೇವಸ್ಥಾನ ಅಭಿವೃದ್ಧಿಗೆ ಏನು ಮಾಡಬೇಕೋ ಅದಕ್ಕೆ ಪ್ರಯತ್ನ ಮಾಡುತ್ತೇವೆ ಎಂದರು.

ಯಾವುದೇ ಧರ್ಮವದರೂ ದೇವರು ಒಬ್ಬನೇ. 130 ಕೋಟಿ ಜನರಿಗೂ ಶ್ರೀರಾಮಚಂದ್ರ ಒಳ್ಳೆಯದು ಮಾಡಲಿ. ದೇಶದಲ್ಲಿ ಸೌಹಾರ್ದ, ಶಾಂತಿ ನೆಲೆಸುವಂತೆ ಭಗವಂತ ಕರುಣಿಸಲಿ. ಶ್ರೀ ರಾಮನ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಅವರಿಗೆ ದೇಶವನ್ನು ನಡೆಸುವ ಶಕ್ತಿ ನೀಡಲಿ. ಚುನಾವಣೆಗೂ ಮೊದಲು ಕೆಲವು ಆಶ್ವಾಸನೆ ನೀಡಿದ್ದರು. ಅದನ್ನು ಜಾರಿ ಮಾಡುವಂತಹ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಅವರು ಭೀಷ್ಮನ ರೀತಿ, ಹಾಗಾಗಿ ಪ್ರಧಾನಿ ವಚನ ಭ್ರಷ್ಟರಾಗಬಾರದು ಎಂದರು.

ದೇಶದಿಂದ ವಿದೇಶಕ್ಕೆ ಹಣ ತೆಗೆದುಕೊಂಡು ಹೋದವರನ್ನು ವಾಪಾಸ್ ಕರೆ ತರುತ್ತೇವೆ ಎಂದು ಹೇಳಿದ್ದರು. ವಾಪಾಸ್ ತರುವಂತಹ ಶಕ್ತಿ ಶ್ರೀರಾಮ ನೀಡಲಿ. ಕರ್ನಾಟಕ ಸರ್ಕಾರಕ್ಕೆ ನೀಡಬೇಕಾದ ಪಾಲನ್ನು ನೀಡುತ್ತಿಲ್ಲ. ಹಾಗಾಗಿ ಅದಕ್ಕೆ ಬೇಕಾದ ಬುದ್ದಿ ಹಾಗೂ ಶಕ್ತಿಯನ್ನು ನೀಡಲಿ. ಇನ್ನು ಈ ವಿಚಾರದಲ್ಲಿ ಯಾರು ಕೂಡ ಪ್ರಚೋದನಾಕಾರಿ ಹೇಳಿಕೆ ನೀಡಬೇಡಿ. ಧರ್ಮ ಸಂಘರ್ಷಕ್ಕೆ ಕಾರಣರಾಗಬೇಡಿ ಎಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next