ಲಂಡನ್: ಐಪಿಎಲ್ ಹವಾ ಮುಗಿದು ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಆರಂಭವಾಗುತ್ತಿದೆ. ಜೂನ್ 7ರಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳೂ ಫೈನಲ್ ಪಂದ್ಯದಲ್ಲಿ ಆಡಲಿದೆ. ಆಸ್ಟ್ರೇಲಿಯಾ ತಂಡವು ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಬಗ್ಗೆ ಹೆಚ್ಚು ಗಮನ ಹರಿಸಲಿದೆ ಎಂದು ಮಾಜಿ ಆಸೀಸ್ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಪೂಜಾರ ಅವರು ಆಸೀಸ್ ವಿರುದ್ಧ ಯಾವುದೇ ತಂಡಕ್ಕಿಂತ ಹೆಚ್ಚು ರನ್ ಮತ್ತು ಶತಕಗಳನ್ನು ಗಳಿಸಿದ್ದರಿಂದ ಆಸೀಸ್ ಗೆ ಕಂಟಕವಾಗಿದ್ದಾರೆ. ಆಸೀಸ್ ವಿರುದ್ಧ ಆಡಿದ 24 ಟೆಸ್ಟ್‌ಗಳಲ್ಲಿ ಪೂಜಾ 2033 ರನ್ ಮತ್ತು ಐದು ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಕೂಡಾ ಆಸ್ಟ್ರೇಲಿಯಾ 24 ಟೆಸ್ಟ್ ಪಂದ್ಯಗಳಲ್ಲಿ 1979 ರನ್ ಗಳಿಸಿದ್ದಾರೆ.
ಪಂದ್ಯದಲ್ಲಿ ಭಾರತದ ಅವಕಾಶಗಳಿಗೆ ಇಬ್ಬರೂ ಪ್ರಮುಖರು. ಆಸ್ಟ್ರೇಲಿಯಾ ತಂಡವು ಅವರನ್ನು ಬೇಗನೆ ಔಟ್ ಮಾಡಲು ಯೋಜಿಸುತ್ತಿದೆ ಎಂದು ಪಾಂಟಿಂಗ್ ಐಸಿಸಿ ರಿವ್ಯೂ ವಿಡಿಯೋದಲ್ಲಿ ಹೇಳಿದರು.
ಇದನ್ನೂ ಓದಿ:ಚಾಮರಾಜನಗರ ತಾಲೂಕಿನಲ್ಲಿ ಸಣ್ಣ ವಿಮಾನ ಪತನ; ತಪ್ಪಿದ ಅನಾಹುತ; ಪೈಲಟ್ ಗಳು ಪಾರು
Related Articles
“ಆಸ್ಟ್ರೇಲಿಯನ್ ತಂಡವು ವಿರಾಟ್ ಬಗ್ಗೆ ಮಾತನಾಡುತ್ತದೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಅವರು ಪೂಜಾರ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಅವರಿಬ್ಬರ ಬಗ್ಗೆ ಮಾತ್ರ” ಎಂದು ಪಾಂಟಿಂಗ್ ಹೇಳಿದ್ದಾರೆ.
“ಪೂಜಾರ ಅವರು ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಅವರ ಪಾಲಿಗೆ ಕಂಟಕವಾಗಿದ್ದಾರೆ. ಈ ವಿಕೆಟ್ ಆಸ್ಟ್ರೇಲಿಯಾದ ಪಿಚ್‌ನಂತೆಯೇ ಇರುತ್ತದೆ. ಹಾಗಾಗಿ ಅವನನ್ನು ಬೇಗನೆ ಔಟ್ ಮಾಡಲು ಆಸೀಸ್ ತಂಡ ಬಯಸುತ್ತದೆ” ಎಂದಿದ್ದಾರೆ.