Advertisement

ಆಸ್ಟ್ರೇಲಿಯಕ್ಕೆ 2-1 ಸರಣಿ,ಖ್ವಾಜಾ ಸರಣಿಶ್ರೇಷ್ಠ: ಪಾಂಟಿಂಗ್‌ ಭವಿಷ್ಯ

06:30 AM Nov 30, 2018 | Team Udayavani |

ಸಿಡ್ನಿ: ಮುಂಬರುವ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿಯಲ್ಲಿ ಎಲ್ಲರ ನಿರೀಕ್ಷೆಯಂತೆ ಭಾರತ ಮೇಲುಗೈ ಸಾಧಿಸುವುದಿಲ್ಲ, ವಿರಾಟ್‌ ಕೊಹ್ಲಿ ಸರ್ವಾಧಿಕ ರನ್‌ ಪೇರಿಸುವುದಿಲ್ಲ; ಬದಲಾಗಿ ಆಸ್ಟ್ರೇಲಿಯ 2-1 ಅಂತರದಿಂದ ಸರಣಿ ಜಯಿಸಲಿದ್ದು, ಉಸ್ಮಾನ್‌ ಖ್ವಾಜಾ ಅತ್ಯಧಿಕ ರನ್‌ ಸಾಧನೆಯೊಂದಿಗೆ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಭವಿಷ್ಯ ನುಡಿಸಿದ್ದಾರೆ!

Advertisement

“ಉಸ್ಮಾನ್‌ ಖ್ವಾಜಾ ಬ್ಯಾಟಿಂಗ್‌ ಫಾರ್ಮ್ನ ಉತ್ತುಂಗದಲ್ಲಿದ್ದಾರೆ. ಆಸ್ಟ್ರೇಲಿಯದಲ್ಲಿ ಅವರ ಸಾಧನೆ ಅಸಾಮಾನ್ಯ. ಭಾರತದ ವೇಗದ ಬೌಲರ್‌ಗಳಿಗೆ ಅವರು ಖಂಡಿತವಾಗಿಯೂ ಬೆದರಿಕೆಯೊಡ್ಡಲಿದ್ದಾರೆ. ಅವರು ಈ ಸರಣಿಯಲ್ಲಿ ವಿರಾಟ್‌ ಕೊಹ್ಲಿಯನ್ನು ಮೀರಿಸಿ ಸರ್ವಾಧಿಕ ರನ್‌ ಗಳಿಸಲಿದ್ದಾರೆ, ಜತೆಗೆ ಸರಣಿಶ್ರೇಷ್ಠರಾಗಿಯೂ ಮೂಡಿಬರಲಿದ್ದಾರೆ’ ಎಂದು ಪಾಂಟಿಂಗ್‌ ಕ್ರಿಕೆಟ್‌ ವೆಬ್‌ಸೈಟ್‌ ಸಂದರ್ಶನವೊಂದರ ವೇಳೆ ಹೇಳಿದರು.

ಈ ಸಂದರ್ಭದಲ್ಲಿ ಪಾಂಟಿಂಗ್‌ ಭಾರತ ತಂಡದ ಆಸ್ಟ್ರೇಲಿಯ ಪ್ರವಾಸದ ಇತಿಹಾಸವನ್ನೂ ಉಲ್ಲೇಖೀಸಿದರು. “ಭಾರತ ಕಳೆದ 40 ವರ್ಷಗಳಿಂದಲೂ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ ಆಡುತ್ತ ಬಂದಿದೆ. 11 ಸರಣಿಗಳಲ್ಲಿ ಒಂದನ್ನೂ ಗೆದ್ದಿಲ್ಲ. ಕಾರಣ ಇಲ್ಲಿನ ಫಾಸ್ಟ್‌, ಬೌನ್ಸಿ ಟ್ರ್ಯಾಕ್‌ಗಳು. ಹೀಗಾಗಿ ಈ ಸಲವೂ ಅವರಿಗೆ ಈ ಸಮಸ್ಯೆ ಎದುರಾಗಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next