Advertisement

ಬೆಂಗಳೂರಿನಲ್ಲಿ ಪೊನ್ನಿಯನ್‌ ಸೆಲ್ವನ್‌ ತಂಡ

11:35 AM Apr 24, 2023 | Team Udayavani |

ಮಣಿರತ್ನಂ ನಿರ್ದೇಶನದ “ಪೊನ್ನಿಯಿನ್‌ ಸೆಲ್ವನ್‌’ ಮೊದಲ ಭಾಗ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿತ್ತು. ಈಗ ಚಿತ್ರದ ಮುಂದುವರೆದ ಭಾಗವಾಗಿ “ಪೊನ್ನಿಯಿನ್‌ ಸೆಲ್ವನ್‌-2′ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏ.28ರಂದು ತೆರೆಕಾಣುತ್ತಿದೆ. ಚಿತ್ರದ ಪ್ರಚಾರಾರ್ಥವಾಗಿ ಇತ್ತೀಚೆಗೆ ಪೊನ್ನಿಯಿನ್‌ ಸೆಲ್ವನ್‌ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು.

Advertisement

ನಟರಾದ ವಿಕ್ರಂ, ಕಾರ್ತಿ, ಜಯಂ ರವಿ ಹಾಗೂ ನಟಿ ತ್ರಿಷಾ ಚಿತ್ರದ ಪ್ರಮೋಶನ್‌ ನಲ್ಲಿ ಭಾಗಿಯಾಗಿದ್ದರು. ನಟ ವಿಕ್ರಂ ಮಾತಾನಾಡಿ, “ನನಗೆ ಎಲ್ಲಾ ತರಹ ಪಾತ್ರಗಳನ್ನು ಮಾಡಲು ಇಷ್ಟ. ಆದಿತ್ಯ ಕರಿಕಾಳನ್‌ ಪಾತ್ರ ನನಗೆ ತೃಪ್ತಿ ಕೊಟ್ಟಿದೆ. ಪಿಎಸ್‌- 2 ಒಂದೊಳ್ಳೆ ಐತಿಹಾಸಿಕ ಸಿನಿಮಾ. ಪ್ರತಿಯೊಬ್ಬರು ನೋಡಲೇಬೇಕು’ ಎಂದರು.

ನಟ ಕಾರ್ತಿ ಕೂಡಾ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. “ಪಿಎಸ್‌-1′ ಮತ್ತು “ಪಿಎಸ್‌-2′ ಎರಡು ಸಿನಿಮಾಗಳು ಒಟ್ಟಿಗೆ ಚಿತ್ರೀಕರಣವಾಗಿತ್ತು. ಮೊದಲ ಭಾಗಕ್ಕೆ ನೀವು ತೋರಿಸಿದ ಪ್ರೀತಿ ಪಿಎಸ್‌-2 ಮೇಲೂ ಇರುತ್ತದೆ ಎಂಬ ವಿಶ್ವಾಸವಿದೆ. ಹತ್ತನೇ ಶತಮಾನದ ರಾಜರು ಹಿಂದೆ ಹೇಗೆ ಬದುಕುತ್ತಿದ್ದರು ಎಂಬುವುದು ಗೊತ್ತಿಲ್ಲ. ಈ ಚಿತ್ರದಲ್ಲಿ ಅದನ್ನು ದೃಶ್ಯದ ಮೂಲಕ ಕಟ್ಟಿಕೊಡಲಾಗಿದೆ’ ಎಂದರು

ನಟ ಜಯಂ ರವಿ ಕನ್ನಡ ಸಿನಿಮಾಗಳ ಸಾಧನೆಯ ಬಗ್ಗೆಯೂ ಮಾತನಾಡಿದರು. “ಕೆಜಿಎಫ್ ಭಾರತದ ಭಾಷೆ ಗಡಿ ಮುರಿದಿದ್ದರೆ, ಕಾಂತಾರ ಧಾರ್ಮಿಕ ಗಡಿ ಮುರಿದಿದೆ. ಅದರಿಂದ ನಮಗೆ ಧಾರ್ಮಿಕ ನಂಬಿಕೆ ಹೆಚ್ಚಾಗಿದೆ. ಪ್ರಪಂಚದ ಸಿನಿಮಾ ಲೋಕದಲ್ಲಿ ಕನ್ನಡ ಇಂಡಸ್ಟ್ರಿ ಗುರುತರ ಪಾತ್ರ ವಹಿಸಿದೆ’ ಎಂದರು.

ನಟಿ ತ್ರಿಷಾ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡು. ಮಣಿರತ್ನಂ ಅವರ ಜೊತೆ ಕೆಲಸ ಮಾಡಿರುವುದಕ್ಕೆ ಸಂತಸ ಇದೆ ಎಂದರು.

Advertisement

ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ “ಪೊನ್ನಿಯಿನ್‌ ಸೆಲ್ವನ್‌’ ಆಧಾರಿಸಿದ ಸಿನಿಮಾವಿದು. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್‌ 28ಕ್ಕೆ ತೆರೆಕಾಣಲಿದೆ.ಲೈಕಾ ಪ್ರೊಡಕ್ಷನ್ಸ್‌ ಮತ್ತು ಮದ್ರಾಸ್‌ ಟಾಕೀಸ್‌ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣವಾಗಿದೆ. “ಪೊನ್ನಿಯಿನ್‌ ಸೆಲ್ವನ್‌ -2′ ಸಿನಿಮಾದಲ್ಲಿ ಕಾರ್ತಿ, ಐಶ್ವರ್ಯಾ ರೈ, ಚಿಯಾನ್‌ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್‌ ಕುಮಾರ್‌, ಪ್ರಕಾಶ್‌ ರಾಜ್‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next