ನವದೆಹಲಿ: 16ನೇ ಏಷಿಯನ್ ಫಿಲ್ಮ್ ಆವಾರ್ಡ್ಸ್ ನಲ್ಲಿ ಭಾರತದ ಎರಡು ಬಿಗ್ ಹಿಟ್ ಸಿನಿಮಾಗಳು ವಿವಿಧ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಮಣಿರತ್ನಂ ನಿರ್ದೇಶನದ ʼಪೊನ್ನಿಯಿನ್ ಸೆಲ್ವನ್ʼ ಹಾಗೂ ಎಸ್.ಎಸ್. ರಾಜಮೌಳಿ ಅವರ ʼಆರ್ ಆರ್ ಆರ್ʼ ಎರಡು ಸಿನಿಮಾಗಳು 16ನೇ ಏಷಿಯನ್ ಫಿಲ್ಮ್ ಆವಾರ್ಡ್ಸ್ ನಲ್ಲಿ ನಾಮಿನೇಟ್ ಆಗಿವೆ.
ಪ್ರತಿಕಾಗೋಷ್ಟಿ ನಡೆಸಿ, 16ನೇ ಏಷಿಯನ್ ಫಿಲ್ಸ್ ಆವಾರ್ಡ್ಸ್‌ನ ದಿನಾಂಕವನ್ನು ಮಾಡಿದ್ದು, ನಾಮಿನೇಟ್ ಆದ ಚಿತ್ರಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.
ಮಣಿರತ್ನಂ ನಿರ್ದೇಶನದ ಮಾಡಿರುವ ʼ ಪೊನ್ನಿಯಿನ್ ಸೆಲ್ವನ್ʼ ಸಿನಿಮಾ ಆರು ವಿಭಾಗದಲ್ಲಿ ನಾಮಿನೇಟ್ ಆಗಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಂಕಲನ ( ಶ್ರೀಕರ್ ಪ್ರಸಾದ್), ಅತ್ಯುತ್ತಮ ಛಾಯಾಗ್ರಹಣ, ಬೆಸ್ಟ್ ಒರಿಜಿನಲ್ ಮ್ಯೂಸಿಕ್ ( ಎ.ಆರ್. ರೆಹಮಾನ್), ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ (ಕಾಲಖಾನಿ) ಅತ್ಯುತ್ತಮ ನಿರ್ಮಾಣ ವಿನ್ಯಾಸಕ್ಕಾಗಿ ತೋಟ ತರಣಿ ಅವರು ನಾಮಿನೇಟ್ ಆಗಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಆಸ್ಕರ್ ನಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ಗಾಗಿ ನಾಮಿನೇಟ್ ಆಗಿರುವ ʼಆರ್ ಆರ್ ಆರ್ʼ ಏಷಿಯನ್ ಫಿಲ್ಮ್ ಆವಾರ್ಡ್ಸ್ ನಲ್ಲಿ ಅತ್ಯುತ್ತಮ ವಿಷುಯಲ್ ಎಫೆಕ್ಟ್‌ಗಾಗಿ (ಶ್ರೀನಿವಾಸ್ ಮೋಹನ್) ಅತ್ಯುತ್ತಮ ಧ್ವನಿಗಾಗಿ ಅಶ್ವಿನ್ ರಾಜಶೇಖರ್ ಅವರು ನಾಮಿನೇಟ್ ಆಗಿದ್ದಾರೆ.
ಮಾರ್ಚ್ 12 ರಂದು ಸಂಜೆ 7:30 ಕ್ಕೆ ಹಾಂಗ್ ಕಾಂಗ್ ನ ಪ್ಯಾಲೇಸ್ ಮ್ಯೂಸಿಯಂನಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ.