Advertisement

ಉದ್ಯೋಗ ನೀಡಲು ಉಳುಗೆರೆ ಅಭಿವೃದ್ಧಿ

03:22 PM May 01, 2020 | mahesh |

ಯಳಂದೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮೀಣರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ತಾಲೂಕಿನ ಯರಗಂಬಳ್ಳಿ ಗ್ರಾಮದ ಉಳುಗೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ತಾಪಂ ಇಒ ರಾಜು ಮಾತನಾಡಿ, ನರೇಗಾ ಯೋಜನೆಯ 10 ಲಕ್ಷ ರೂ. ಹಾಗೂ ಜಲಾಮೃತ ಯೋಜನೆ
ಯಡಿ 8 ಲಕ್ಷ ರೂ. ವೆಚ್ಚದಲ್ಲಿ ಪಂಚಾಯತ್‌ ರಾಜ್‌ ಇಲಾಖೆವತಿಯಿಂದ ಒಟ್ಟು 18 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಪ್ರಸ್ತುತ 310 ಮಂದಿ
ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದೆ ಎಂದರು.

Advertisement

ಮೊದಲಿಗೆ ಕೆರೆ ಬದಿಯಲ್ಲಿ ಟ್ರಂಚ್‌ ಅಗೆದು, ಇದರಲ್ಲಿ ನೀರು ಸಂಗ್ರಹಗೊಳ್ಳುವಂತೆ ಮಾಡಲಾಗುತ್ತಿದೆ. ಈ ಮಣ್ಣನ್ನು ಕೆರೆ ಬದಿಯಲ್ಲಿ ಹಾಕಲಾಗುತ್ತಿದೆ. ಇದರಿಂದ ಎಲ್ಲೆಯನ್ನು ಗುರುತಿಸುವ ಕೆಲಸ ಮಾಡ ಲಾಗುತ್ತಿದೆ. ಇದರಿಂದ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಕೆಲಸ ನೀಡುವುದರ ಜೊತೆಗೆ ಗ್ರಾಮದ ಕೆರೆಯನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. ಪಂಚಾಯತ್‌ ರಾಜ್‌ ಇಲಾಖೆ ಎಇಇ ಹರೀಶ್‌ ಮಾತನಾಡಿ, ನಮ್ಮ ಇಲಾಖಾ ವ್ಯಾಪ್ತಿಯಿಂದ
ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕೆರೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಎರಡೂವರೆ ಹಾಗೂ ಮೂರು ಮೀಟರ್‌ ಉದ್ದಗಲ ಹಾಗೂ ನಾಲ್ಕು ಅಡಿ ಆಳದ ಹಳ್ಳಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಮಳೆ ನೀರು ಶೇಖರಿಸಲು ಮೊದಲ ಹಂತವಾಗಿ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಕೆರೆಯ ಹೊಳೆತ್ತಲು ಕ್ರಮ ವಹಿಸಲಾಗುವುದು ಎಂದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷ ಸಿದ್ದರಾಜು, ಪಿಡಿಒ ವೆಂಕಟಾಚಲಮೂರ್ತಿ, ಜೆಇ ಲಿಂಗರಾಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next