Advertisement

ಪೊಲಾರ್ಡ್, ಸಿಮನ್ಸ್ ಸಾಹಸ: ಅಜೇಯ ಟ್ರಿನಿಡಾಡ್ ಟೊಬ್ಯಾಗೋ ತಂಡಕ್ಕೆ ಸಿಪಿಎಲ್ 2020 ಕಿರೀಟ

12:40 PM Sep 11, 2020 | keerthan |

ಟ್ರಿನಿಡಾಡ್: ಕೂಟದ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ್ದ ಕೈರನ್ ಪೊಲಾರ್ಡ್ ನಾಯಕತ್ವದ ಟ್ರಿನ್ಬ್ಯಾಗೋ ನೈಟ್ ರೈಡರ್ಸ್ ತಂಡ ಫೈನಲ್ ಪಂದ್ಯವನ್ನೂ ಅಧಿಕಾರಯುತವಾಗಿ ಗೆದ್ದು ಮತ್ತೊಂದು ಸಿಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Advertisement

ಬ್ರಿಯಾನ್ ಲಾರಾ ಸ್ಟೇಡಿಯಂ ನಲ್ಲಿ ಸೈಂಟ್ ಲೂಶಿಯಾ ಜೂಕ್ಸ್ ವಿರುದ್ಧ ಟಾಸ್ ಗೆದ್ದ ಪೊಲಾರ್ಡ್ ಫೀಲ್ಡಿಂಗ್ ಆಯ್ಕೆ ಮಾಡಿದರು. ಜೂಕ್ಸ್ ತಂಡಕ್ಕೆ ಆಂಡ್ರೆ ಫ್ಲೆಚರ್ (39 ರನ್ ), ಮಾರ್ಕ್ ಡೆಯಾಲ್ (29) ನೆರವಾದರು. ನಜಿಬುಲ್ಲಾ 24 ರನ್ ಗಳಿಸಿದರೆ, ಚೇಸ್ 22 ರನ್ ಗಳಿಸಿ ಔಟಾದರು.

ಅಂತ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ ಟಿಕೆ ಆರ್ ತಂಡ ಸತತ ವಿಕೆಟ್ ಕಬಳಿಸಿತು. ಪರಿಣಾಮವಾಗಿ ಜೂಕ್ಸ್ 154 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನಾಯಕ ಪೊಲಾರ್ಡ್ ನಾಲ್ಕು ವಿಕೆಟ್ ಪಡೆದರೆ, ಅಲಿ ಖಾನ್ ಮತ್ತು ಫಾವದ್ ಅಹಮದ್ ತಲಾ ಎರಡು ವಿಕೆಟ್ ಕಿತ್ತರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಅಮಾನತು

ಸಾಧಾರಣ ಗುರಿ ಬೆನ್ನತ್ತಿದ ಟಿಕೆಆರ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ವೆಬ್ ಸ್ಟರ್ ಮತ್ತು ಟಿಮ್ ಸೀಫರ್ಟ್ ಅಗ್ಗಕ್ಕೆ ಔಟಾದರು. ಆದರೆ ಮೂರನೇ ವಿಕೆಟ್ ಗೆ ಜೊತೆಯಾದ ಅನುಭವಿ ಲೆಂಡ್ಲ್ ಸಿಮನ್ಸ್ ಮತ್ತು ಡ್ಯಾರೆನ್ ಬ್ರಾವೋ ಅಜೇಯ ಶತಕದ ಜೊತೆಯಾಟ ಆಡಿದರು.

Advertisement

ಸಿಮನ್ಸ್ 49 ಎಸೆತಗಳಲ್ಲಿ 84 ಬಾರಿಸಿದರೆ, ಡ್ಯಾರೆನ್ ಬ್ರಾವೋ 47 ಎಸೆತಗಳಲ್ಲಿ ಆರು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು. ತಂಡ 18.1 ಓವರ್ ನಲ್ಲಿ ಗುರಿ ಬೆನ್ನತ್ತಿ ಜಯ ಸಾಧಿಸಿತು.

ಸಿಮನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಪೊಲಾರ್ಡ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next