Advertisement

BJP,Congress ಸೇರಿ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಚುನಾವಣ ಆಯೋಗ

03:39 PM May 22, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ, ಸಮುದಾಯ, ಭಾಷೆ ಮತ್ತು ಧರ್ಮದ ಆಧಾರದಲ್ಲಿ ಪ್ರಚಾರ ನಡೆಸಿಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳನ್ನು ಭಾರತೀಯ ಚುನಾವಣ ಆಯೋಗ ಬುಧವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Advertisement

ಚುನಾವಣ ಸಮಿತಿಯು ಬುಧವಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು “ಭಾರತದ ಸಾಮಾಜಿಕ-ಸಾಂಸ್ಕೃತಿಕ ಪರಿಸರವು ನಿರಂತರ ಸಂರಕ್ಷಣೆಯಾಗಿರುವುದರಿಂದ ಚುನಾವಣೆಗಳಿಗೆ ಬಲಿಯಾಗಲು ಸಾಧ್ಯವಿಲ್ಲ” ಎಂದು ಹೇಳಿದೆ.

‘ಭಾರತೀಯ ಮತದಾರರ ಗುಣಮಟ್ಟದ ಚುನಾವಣ ಅನುಭವದ ಪರಂಪರೆಯನ್ನು ದುರ್ಬಲಗೊಳಿಸಲು ಎರಡು ದೊಡ್ಡ ಪಕ್ಷಗಳಿಗೆ ಅವಕಾಶ ನೀಡಲಾಗುವುದಿಲ್ಲ’ ಎಂದು ಮುಖ್ಯ ಚುನಾವಣ ಸಂಸ್ಥೆ ಆಕ್ರೋಶ ಹೊರ ಹಾಕಿದೆ.

‘ಪ್ರಚಾರದ ಸಮಯದಲ್ಲಿ ಧಾರ್ಮಿಕ ಮತ್ತು ಕೋಮುವಾದದ ಮಾತುಗಳಿಂದ ದೂರವಿರಬೇಕು’ ಎಂದು ಚುನಾವಣ ಸಂಸ್ಥೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next