Advertisement
ಕೆಲವೊಮ್ಮೆ ರಜಾ ದಿನಗಳಲ್ಲಿ ಸಾಯಂಕಾಲ ಸಾರ್ವಜನಿಕ ಉದ್ಯಾನಗಳಲ್ಲಿ ಅಥವಾ ಸಮುದ್ರ ತಟದಲ್ಲಿ ಕುಳಿತು ಹರಟೆ ಹೊಡೆಯುತ್ತಿ¨ªೆವು. ಕೆಲವೊಮ್ಮೆ ಮಾತಿನ ಭರದಲ್ಲಿ ಸಮಯ ಹೋದದ್ದೇ ತಿಳಿಯುವುದಿಲ್ಲ, ಮನೆಯವರಿಂದ ಮೊಬೈಲ್ ಕರೆ ಬಂದಾಗಲೇ ಎಚ್ಚರವಾಗುವುದು. ನಾವು ಮಾತಿಗಿಳಿದರೆ ಕೊನೆಯೇ ಇರುವುದಿಲ್ಲವೆಂದು ನಮ್ಮಿಬ್ಬರ ಮನೆಯವರಿಗೂ ಚೆನ್ನಾಗಿ ಗೊತ್ತಿತ್ತು, ನಮ್ಮಿಬ್ಬರ ಸ್ವಭಾವವು ಇಬ್ಬರ ಮನೆಯವರಿಗೂ ಗೊತ್ತಿದ್ದರಿಂದ ಯಾರ ಅಭ್ಯಂತರವೂ ಇರಲಿಲ್ಲ. ನನ್ನ ಮನೆಯಲ್ಲಿ ಏನಾದರೂ ವಿಶೇಷ ಇದ್ದರೆ ಸಾವಂತ್‌ನನ್ನು ಕರೆಯುತ್ತಿದ್ದೆ. ಅವನು ಕುಟುಂಬಸಮೇತ ತಪ್ಪದೇ ಬರುತ್ತಿದ್ದ. ನಾನೂ ಅವನ ಸುಖ-ದುಃಖದಲ್ಲಿ ಭಾಗಿಯಾಗುತ್ತಿದ್ದೆ. ಅವನು ಸ್ಥಳೀಯನಾಗಿದ್ದರೆ, ನಾನು ಹೊಟ್ಟೆಪಾಡಿಗಾಗಿ ಇಲ್ಲಿ ಬಂದು ನೆಲೆಸಿದವನು. ಆದರೂ ನಮ್ಮಿಬ್ಬರ ನಡುವೆ ಯಾವ ಭೇದಭಾವವೂ ಇರಲಿಲ್ಲ. ಇಬ್ಬರೂ ಒಂದೇ ಕುಟುಂಬದ ಸದಸ್ಯರಂತೆ ಇದ್ದೆವು.
Related Articles
Advertisement
ಒಂದು ದಿನ ಮಧ್ಯಾಹ್ನ ಲಂಚ್ ಟೈಮ್‌ನಲ್ಲಿ ಸಾವಂತ್ ಸಿಕ್ಕಿದಾಗ ಗಂಭೀರನಾಗಿದ್ದ, ಬೇಕು ಬೇಕೆಂದೇ ವಿಷಯವನ್ನು ರಾಜಕೀಯದತ್ತ ಸೆಳೆದ. ನಾನು ಹಲವಾರು ಭಾರಿ ಅದರಿಂದ ತಪ್ಪಿಸಲು ಪ್ರಯತ್ನಪಟ್ಟರೂ ಅವನು ನನ್ನನ್ನು ಎಳೆದು ತರುತ್ತಿದ್ದ. ನನಗೆ ಗೊತ್ತಿತ್ತು, ರಾಜಕೀಯದ ವಿಷಯದಿಂದ ನಮಗಂತೂ ಏನೂ ಪ್ರಯೋಜನ ಇಲ್ಲ, ಬದಲು ನಮ್ಮ ಸಮಯ, ಶಕ್ತಿಯ ವ್ಯರ್ಥ ಹಾಳು, ಅಲ್ಲದೆ ಭಾವನಾತ್ಮಕ ಸಂಬಂಧದಲ್ಲೂ ವಿನಾಕಾರಣ ಬಿರುಕು ಹುಟ್ಟುತ್ತದೆನ್ನುವ ಅಳುಕು ಇದ್ದಿತ್ತು. ಆದರೆ ಅವನಿಗದು ಅರ್ಥವಾಗಲಿಲ್ಲ. ಗೆಳೆಯ ಎನ್ನುವುದನ್ನು ಮರೆತು, ಮನಸ್ಸಿನಲ್ಲಿ ಭೂತ ಹೊಕ್ಕವನಂತೆ ಮಾತಾಡುತ್ತಿದ್ದ. ಬೇಡ ಎಂದರೂ ಅವನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ನನಗೆ ಅನಿವಾರ್ಯವಾಗಿತ್ತು. ಹಾಗಾಗಿ ಮಾತಿಗೆ ಮಾತು ಬೆಳೆದು ಜೋರಾಯ್ತು. ನಾನು ಅವನನ್ನು ಸಮಾಧಾನಿಸಲು ಪ್ರಯತ್ನಪಟ್ಟೆ. ನೋಡು, ನಮಗೆ ರಾಜಕೀಯದ ಪ್ರಜ್ಞೆ ಬೇಡ ಅಂತ ಹೇಳುವುದಿಲ್ಲ. ಹಾಗಂತ ಕಣ್ಣಿದ್ದು ಕುರುಡರಂತೆ ವರ್ತಿಸುವುದೂ ಸರಿಯಲ್ಲವಲ್ಲಾ! ಯಾರು ಏನೋ ಹೇಳುತ್ತಾರೆಂದು ವಿವೇಚನೆ ಮಾಡದೆ ಅದನ್ನು ಪ್ರತಿಪಾದಿಸುವುದರಲ್ಲಿ ಅರ್ಥ ಇಲ್ಲ, ವಿಷಯದ ಆಳಕ್ಕಿಳಿದು ನೋಡಿದಾಗ ಅಥವಾ ಪಕ್ಷದಿಂದ ಮೇಲೆದ್ದು ನಿಂತು ವಿಷಯವನ್ನು ಗ್ರಹಿಸಿದಾಗ ಮಾತ್ರ ವಸ್ತುಸ್ಥಿತಿ ಏನೂಂತ ತಿಳಿಯುವುದು. ಅದನ್ನು ಬಿಟ್ಟು ನಾವು ಮೂರ್ಖರಾಗಿ ನಮ್ಮನ್ನು ನಾವು ಕಳೆದುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ನಾವು ಪ್ರಜ್ಞಾವಂತರಾದಾಗ ಮಾತ್ರ ರಾಷ್ಟ್ರಕಟ್ಟುವಲ್ಲಿ ಸಾಧ್ಯವಾಗುತ್ತದೆ. ಜೊತೆಗೆ ರಾಷ್ಟ್ರಪ್ರೇಮ ಬೆಳೆಸಿಕೊಳ್ಳ ಬೇಕು. ನಮ್ಮಲ್ಲಿರುವ ಸಂಕುಚಿತತೆಯನ್ನು ಬಿಟ್ಟು ನಾವೆಲ್ಲರೂ ಒಂದೇ ಮಾತೆಯ ಮಕ್ಕಳೆನ್ನುವ ಹೃದಯ ವೈಶಾಲ್ಯತೆ ಬೆಳೆಸಬೇಕು. ಆ ಮೂಲಕ ದೇಶದ ಸಮಗ್ರತೆ, ಏಕತೆ, ಅಖಂಡತೆಯನ್ನು ಮೆರೆಸಿ, ಗೌರವಿಸಿ, ಉಳಿಸಲು ಸಾಧ್ಯ. ನಾವು ದೇಶದ ಸರ್ವಾಂಗೀಣ ಪ್ರಗತಿಯ ಬಗ್ಗೆ ಚಿಂತನೆ, ಮಾತುಕತೆ, ಜನಜಾಗ್ರತಿ ನಡೆಸಬೇಕು. ಅದನ್ನು ಬಿಟ್ಟು ನಾವು ಇನ್ನೂ ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿಯ ಹೆಸರಲ್ಲಿ ಕೊಸರಾಡುವಂತಾಗಬಾರದು. ನನ್ನ ನೇರ ಮಾತುಗಳನ್ನು ಕೇಳಲು ಸಾವಂತ್‌ನಲ್ಲಿ ಯಾವ ವ್ಯವಧಾನವೂ ಇರಲಿಲ್ಲ, ಅಲ್ಲಿಂದ ಹೊರಟು ಬಿಟ್ಟ.
ಆ ಬಳಿಕ ಸಾವಂತ್ ನನ್ನ ಜತೆಗಿನ ಒಡನಾಟವನ್ನು ನಿಲ್ಲಿಸಿದ. ಅವನು ಬೇರೆ ರೈಲು ಹಿಡಿದು ಕೆಲಸಕ್ಕೆ ಹೋಗಿ ಬರುತ್ತಿದ್ದುದನ್ನು ಗಮನಿಸಿದೆ. ಮತ್ತೆ ಅವನಿಂದ ವಿಫುಲವಾಗಿ ಬರುತ್ತಿದ್ದ ವಾಟ್ಸಾಪ್ ಸಂದೇಶಗಳಿಗೆ ತೆರೆ ಬಿದ್ದಿತು. ನಾನು ಮೊಬೈಲಲ್ಲಿ ಕರೆ ಮಾಡಿದರೂ ಸ್ವೀಕೃತ ಮಾಡಲಿಲ್ಲ. ಸಂದೇಶ ಕಳಿಸಿದರೂ ಪ್ರತಿಕ್ರಿಯಿಸಲಿಲ್ಲ. ನನಗೂ ಅವನ ವರ್ತನೆ ವಿಚಿತ್ರ ಎನಿಸಿತು. ಇವನಿಗೆ ಮಾನವ ಸ್ಪರ್ಶಕ್ಕಿಂತಲೂ ರಾಜಕೀಯದ ಸ್ಪರ್ಶವೇ ಹೆಚ್ಚಾಯ್ತಲ್ಲ ಎಂದು ಬೇಸರವಾಯ್ತು. ಸಮಯ ಬಂದಾಗ ಎಲ್ಲವೂ ಸರಿ ಹೊಂದುತ್ತದೆಂದು ಮೌನಗೊಂಡೆ.
ಸುಮಾರು ಒಂದು ವಾರದ ಬಳಿಕ ನನ್ನ ಮೊಬೈಲ್‌ಗೆ ಸಾವಂತ್‌ನಿಂದ ಕರೆ ಬಂತು. ನಾನಾವಾಗ ಆಫೀಸಿನಲ್ಲಿ ತುರ್ತು ಮೀಟಿಂಗ್‌ನಲ್ಲಿ¨ªೆ. ಕರೆ ಸ್ವೀಕೃತ ಮಾಡದಿದ್ದರೆ ಅವನು ಅಪಾರ್ಥ ಮಾಡಿಕೊಳ್ಳುತ್ತಾನೆಂದು ಕೂಡಲೇ ಹೊರಬಂದು ಕರೆ ಸ್ವೀಕರಿಸಿದೆ. ಭಾವುಕನಾಗಿ, “ಹೇಳು ಸಾವಂತ್, ಹೇಗಿದ್ದೀಯಾ?’ ಎಂದಾಗ ಎದುರಿನಿಂದ ಹೆಣ್ಣಿನ ಸ್ವರ ಕೇಳಿ ಬಂತು, ನನಗೆ ಕೊಂಚ ಗಾಬರಿಯಾಯ್ತು. ಅವಳು, “ನಾನು ಶ್ವೇತ, ಸಾವಂತ್‌ನ ಆಫೀಸಿನಿಂದ ಮಾತಾಡುತ್ತಿದ್ದೇನೆ. ಸಾವಂತ್‌ನ ಆರೋಗ್ಯ ಒಳ್ಳೆಯದಿಲ್ಲ, ನೀವು ಅವನ ಆತ್ಮೀಯ ಗೆಳೆಯರಲ್ಲವೆ, ಅದಕ್ಕಾಗಿ ಫೋನ್ ಮಾಡಿ ತಿಳಿಸಿದೆ’ ಎಂದಳು.
ನಾನು ಕೂಡಲೇ ಮೀಟಿಂಗ್ ಬಿಟ್ಟು ಅವನ ಆಫೀಸಿಗೆ ಓಡಿದೆ. ಅಲ್ಲಿ ಸಾವಂತ್ ಕ್ಯಾಬಿನ್‌ನ ಸೋಫಾದಲ್ಲಿ ಅಂಗಾತ ಮಲಗಿದ್ದ. ವರ್ಟಿಗೋದಿಂದ ಹೊರಳಾಡುತ್ತ ನರಳುತ್ತಿದ್ದುದನ್ನು ತಿಳಿದು ವ್ಯಥೆಯಾಯ್ತು. ಯೋಗ ಶುರುಮಾಡಿದ ಬಳಿಕ ಸಾವಂತ್ ಯಾವತ್ತೂ ಈ ತರದ ವರ್ಟಿಗೋ ಸಮಸ್ಯೆಯಿಂದ ಬಳಲಿದ್ದನ್ನು ಹೇಳಲಿಲ್ಲ. ಅವನ ಸಹೋದ್ಯೋಗಿಗಳು, “ಸಾವಂತ್, ಕೆಲವು ದಿನಗಳಿಂದ ಟೆನ್ಸ್ನ್‌ನಲ್ಲಿದ್ದ, ವಿಷಯ ಏನೆಂದು ಗೊತ್ತಿಲ್ಲ’ ಎಂದರು. ನಾನು ಅವನ ಬಳಿಯಲ್ಲಿದ್ದು ಉಪಚರಿಸುತ್ತಿದ್ದೆ, ಅವನು ಮಾತ್ರೆಯನ್ನು ಮೊದಲೇ ತೆಗೆದುಕೊಂಡಿದ್ದರಿಂದ, ವರ್ಟಿಗೋ ತೀವ್ರತೆ ಸ್ವಲ್ಪ ಮಟ್ಟಿಗೆ ಇಳಿಮುಖವಾಯ್ತು. ಆದರೂ, ಅವನು ಮನೆಗೆ ಒಬ್ಬನೇ ಹೋಗುವ ಸ್ಥಿತಿಯಲ್ಲಿರಲಿಲ್ಲ. ಅಂತಹ ಸಂದರ್ಭದಲ್ಲಿ ಅವನೊಡನೆ ಯಾವ ಸಹೋದ್ಯೋಗಿ ಜತೆಗೂಡುತ್ತಾರೆಂದು ಯೋಚಿಸುತ್ತಿದ್ದೆ. ಮೇಲ್ನೋಟಕ್ಕೆ ಎಲ್ಲರೂ ಕಾಳಜಿ ಇದ್ದವರಂತೆ ತೋರಿದರೂ, ಯಾರೂ ಜೊತೆಗೂಡುವ ಸೂಚನೆ ಕಂಡುಬರಲಿಲ್ಲ. ಸಾವಂತ್‌ನ ಮನೆ ನನ್ನ ಮನೆಯ ಹತ್ತಿರವೇ ಇದ್ದುದರಿಂದ ಅವನ ಜತೆಗೂಡಲು ಅವನ ಸಹೋದ್ಯೋಗಿ ನನಗೆ ವಿಷಯ ತಿಳಿಸಿ¨ªೆಂದು ಕೊನೆಗೆ ಅರ್ಥವಾಯ್ತು. ಅದಾಗಲೇ ಆಫೀಸು ಬಿಡುವ ಸಮಯವಾದ್ದರಿಂದ ಎಲ್ಲರೂ ತಮ್ಮ ತಮ್ಮ ಮನೆಗೆ ಹೊರಡುವ ಆತುರದಲ್ಲಿದ್ದರು. ಮಣ್ಣಿನ ಮಕ್ಕಳೆಂದು ರಾಗ ಎಳೆದು ಪ್ರಚೋದಿಸುತ್ತಿದ್ದ ಸಾವಂತ್‌ನ ಸಹೋದ್ಯೋಗಿ ಕೂಡ ಸಹಾಯಕ್ಕೆ ಬರಲಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ನಾನು ಉಬರ್ ಬುಕ್ ಮಾಡಿ ಸಾವಂತ್‌ನನ್ನು ಮನೆಗೆ ತಲುಪಿಸಿ ಬಂದೆ, ಆವಾಗ ರಾತ್ರಿ ಹನ್ನೆರಡರ ಮೇಲಾಗಿತ್ತು.
ಮರುದಿನ ಎಂದಿನಂತೆ ಬೆಳಗ್ಗೆ ರೈಲು ಹಿಡಿಯಲು ರೈಲು ನಿಲ್ದಾಣದ ತಲುಪಿದಾಗ ಸಾವಂತ್ ಮೊದಲೇ ಅಲ್ಲಿ ಬಂದು ನಿಂತಿದ್ದ. ನನ್ನನ್ನು ನೋಡಿದವನೇ ಹತ್ತಿರ ಬಂದು ನನ್ನನ್ನು ಅಪ್ಪಿ ಹಿಡಿದು “ತಪ್ಪಾಯ್ತು, ಕ್ಷಮಿಸು’ ಎಂದ! ಆಗ ಅವನ ಕಣ್ಣಂಚಿನಲ್ಲಿ ನೀರು ಹನಿಗೂಡಿದನ್ನು ಗಮನಿಸಿದೆ! ಮೋಹನ ಕುಂದರ್