Advertisement

Politics: ನನ್ನನ್ನು ಸಿಎಂ ಮಾಡಿ ಎಂದಾಗ ನಿರಾಕರಿಸಿದ್ದ ಎಚ್ಡಿಕೆ- ಡಿ.ಕೆ.ಶಿ ಹೊಸ ಬಾಂಬ್‌

11:25 PM Nov 15, 2023 | Team Udayavani |

ಬೆಂಗಳೂರು: ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವಿದ್ದಾಗ, ನನ್ನನ್ನು ಮುಖ್ಯ ಮಂತ್ರಿಯಾಗಿ ಘೋಷಿಸಿದರೆ ಮುಂಬಯಿಯಿಂದ ಮರಳಿ ಬರುವುದಾಗಿ ಗೋಪಾಲಯ್ಯ ಮತ್ತು ಎಸ್‌.ಟಿ. ಸೋಮಶೇಖರ್‌ ಹೇಳಿದ್ದರು. ಆದರೆ ಅಂದು ಕುಮಾರಸ್ವಾಮಿ ಅದಕ್ಕೆ ಒಪ್ಪಿರಲಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಜೆಡಿಎಸ್‌ನ ತುಮಕೂರು ಗ್ರಾಮಾಂ ತರ ಕ್ಷೇತ್ರದ ಮಾಜಿ ಶಾಸಕ ಗೌರಿಶಂಕರ್‌ ಮತ್ತು ದಾಸರಹಳ್ಳಿಯ ಆರ್‌. ಮಂಜುನಾಥ್‌ ಅವರನ್ನು ಪಕ್ಷಕ್ಕೆ ಸೇರಿಸಿದ ಬಳಿಕ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಜೆಡಿಎಸ್‌ ಜಾತ್ಯತೀತ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟ ಪಕ್ಷ ಎನ್ನುವ ಕಾರಣಕ್ಕೆ 80 ಜನ ಕಾಂಗ್ರೆಸ್‌ ಶಾಸಕರು ಇದ್ದರೂ 30 ಸ್ಥಾನ ಗೆದ್ದಂತಹ ಅವರ ಪಕ್ಷ(ಜೆಡಿಎಸ್‌ಗೆ)ಕ್ಕೆ ಬೆಂಬಲ ನೀಡಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಅಂದು ಸರಕಾರ ಬೀಳಿಸಿದವರ ಜತೆಗೇ ಇಂದು ಅವರು ನೆಂಟಸ್ಥನ ಮಾಡಿದ್ಧಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರೇ, ನೀವು ಕೂಡ 20 ಮತ್ತು 14 ತಿಂಗಳು ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದೀರಿ. ನಿಮಗೆ ಆಡಳಿತ ಮಾಡಲು ಬಿಡಲಿಲ್ಲವೇ? ವಿಪಕ್ಷವಾಗಿ ಟೀಕೆಗಳನ್ನು ಮಾಡಿದರೂ ಬಿಜೆಪಿಯವರಿಗೆ ನಾವು ಆಡಳಿತ ಮಾಡಲು ಬಿಡಲಿಲ್ಲವೇ? ಆದರೆ ನೀವು ಅಧಿಕಾರ ನನಗೆ ಸಿಗಲಿಲ್ಲ ಎಂದು ಅಸೂಯೆಯಿಂದ ಕೈಕೈ ಹಿಸುಕಿಕೊಂಡು ಕುಳಿತರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಯ ದ್ವಂದ್ವ ನಿಲುವು ಅವರಿಗೇ ಅರ್ಥವಾಗುತ್ತಿಲ್ಲ. ಕರ್ನಾ ಟಕದಲ್ಲಿ ಬಿಜೆಪಿ ಜತೆ ಸೇರಿದ್ಧಾರೆ. ತೆಲಂಗಾಣದಲ್ಲಿ ಕೆಸಿಆರ್‌ ಪರವಾಗಿ ಮಾತನಾಡುತ್ತಾರೆ. ಕೆಸಿಆರ್‌ ಅವರ ಮಗ ಮೋದಿ ಅವರನ್ನು ಸುಳ್ಳ ಎಂದು ಕರೆಯುತ್ತಾರೆ. 18 ಜನ ಶಾಸಕರನ್ನು ಕರೆದುಕೊಂಡು, ಅವರನ್ನು ಕುರ್ಚಿಯಿಂದ ಇಳಿಸಿದವರ ಜತೆಗೆ ಸಂಸಾರ ನಡೆಸುತ್ತೇವೆ ಎಂದರೆ ಸಿದ್ಧಾಂತ ಎನ್ನುವುದು ಎಲ್ಲಿಗೆ ಹೋಯಿತು ಎಂದು ಕೇಳಿದರು.

Advertisement

ಬಿಜೆಪಿ ಬಿ-ಟೀಮ್‌ ಸಾಬೀತಾಗಿದೆ
ಈ ಹಿಂದೆ ನಾನು ಜೆಡಿಎಸ್‌ ಅನ್ನು ಬಿಜೆಪಿಯ “ಬಿ-ಟೀಮ್‌’ ಅಂದಿದ್ದಕ್ಕೆ ಆ ಪಕ್ಷದವರು ಸಿಟ್ಟಾಗಿದ್ದರು. ಇಂದು ಅವರೇ (ಜೆಡಿಎಸ್‌ನವರು) ಸಾಬೀತುಪಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಜೆಡಿಎಸ್‌ನಲ್ಲಿ ಈಗ ಎಸ್‌ ಕಿತ್ತು ಹೋಗಿ ಕೇವಲ ಜನತಾದಳ ಮಾತ್ರ ಉಳಿದಿದೆ. ಅದು ಈಗ ತನ್ನ ಮೂಲಸ್ವರೂಪದಲ್ಲಿ ಜನ ಸಮು ದಾಯದ ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಕೇವಲ ಕುಟುಂಬಕ್ಕಷ್ಟೇ ಸೀಮಿತವಾಗಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮತ್ತಿತರರಿದ್ದರು.

ಡಾ| ಜಿ. ಪರಮೇಶ್ವರ್‌ ಗೈರು
ಆದರೆ ಗೌರಿಶಂಕರ್‌ ಸೇರ್ಪಡೆಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಜತೆಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಗೈರು ಹಾಜರಿ ಎದ್ದು ಕಾಣಿಸುತ್ತಿತ್ತು.

ದಳದಲ್ಲೇ ಇರಿ; ಕಾಂಗ್ರೆಸ್‌ಗೆ ಕೆಲಸ ಮಾಡಿ!
ದಳದಲ್ಲೇ ಇರಿ, ಆದರೆ ಬಿಜೆಪಿಗೆ ಕೆಲಸ ಮಾಡುವ ಬದಲು ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಿ! – ಹೀಗಂತ ಎನ್‌ಡಿಎ ಜತೆ ಕೈಜೋಡಿಸಿರುವ ಎಚ್‌. ಡಿ. ಕುಮಾರಸ್ವಾಮಿ ಅವರು ತಮ್ಮ ಮಾಜಿ ಶಾಸಕರಿಗೆ ಹೇಳುತ್ತಿದ್ದಾರಂತೆ. ಇದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಗಂಭೀರ ಆರೋಪ. ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರುತ್ತೇನೆ ಅಂದವರಿಗೆ ಕುಮಾರಸ್ವಾಮಿ, ನೀನು ದಳದÇÉೇ ಇರು, ಬಿಜೆಪಿಗೆ ಕೆಲಸ ಮಾಡುವ ಬದಲು ಕಾಂಗ್ರೆಸ್‌ಗೆ ಕೆಲಸ ಮಾಡು ಅಂತ ಹೇಳಿ¨ªಾರಂತೆ. ಇದು ಹೇಗೆ ಸಾಧ್ಯ? ಮೋಸ ಮಾಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದರು. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಗೌರಿಶಂಕರ್‌ ಮತ್ತು ಮಂಜುನಾಥ್‌ ಅವರನ್ನೇ ಕೇಳಬೇಕು. ಈ ಕಾರಣಕ್ಕೆ ಇವರಿಬ್ಬರೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಕಾಂಗ್ರೆಸ್‌ ಸೇರಿ¨ªಾರೆ ಎಂದೂ ಸ್ಪಷ್ಟಪಡಿಸಿದರು.

ಸಚಿವ ರಾಜಣ್ಣ ಅಸಮಾಧಾನ

ಜೆಡಿಎಸ್‌ ಮಾಜಿ ಶಾಸಕ ಗೌರಿಶಂಕರ್‌ ಹಾಗೂ ಮಂಜುನಾಥ್‌ ಕಾಂಗ್ರೆಸ್‌ ಸೇರ್ಪಡೆಗೆ ಸಚಿವ ಕೆ.ಎನ್‌.ರಾಜಣ್ಣ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಸೇರಿ ತುಮಕೂರು ಜಿಲ್ಲೆಯ ಕಾಂಗ್ರೆಸ್‌ ಮುಖಂಡರ ಗಮನಕ್ಕೂ ತಾರದೆ ಜೆಡಿಎಸ್‌ ಶಾಸಕರ ಸೇರ್ಪಡೆ ಆಗಿರುವುದನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಗೃಹ ಸಚಿವ ಪರಮೇಶ್ವರ್‌ ಸಹಿತ ನಮ್ಮ ಜಿಲ್ಲೆಯ ಯಾವ ಮುಖಂಡರೊಂದಿಗೂ ಚರ್ಚಿಸದೆ ಪಕ್ಷಕ್ಕೆ ಸೇರಿಸಿಕೊಂಡಿರುವುದು ಬೇಸರ ತರಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next