Advertisement

Politics: ಎರಡೂ ಕಡೆ ಸಂಧಾನ ಸದ್ಯಕ್ಕಿಲ್ಲ ಜಿಗಿತ?

12:14 AM Aug 19, 2023 | Team Udayavani |

ಬೆಂಗಳೂರು: “ಆಪರೇಶನ್‌ ಕಾಂಗ್ರೆಸ್‌’ ಚರ್ಚೆ ತೀವ್ರವಾಗಿರುವುದರ ಮಧ್ಯೆಯೇ ಪಕ್ಷಾಂತರಿಗಳ ಓಲೈಕೆಗೆ ಎರಡೂ ಪಕ್ಷಗಳಿಂದ ಪ್ರಯತ್ನಗಳು ಪ್ರಾರಂಭ ವಾಗಿದ್ದು, ತತ್‌ಕ್ಷಣಕ್ಕೆ ಪಕ್ಷಾಂತರ ಸಾಧ್ಯತೆಗಳು ಕ್ಷೀಣವಾಗಿವೆ. ಆದರೆ ಈ ಪ್ರಕ್ರಿಯೆ ಮುಂದಿನ 2 ತಿಂಗಳೊಳಗಾಗಿ ಫ‌ಲ ನೀಡಬಹುದೆಂಬ ಆಶಾವಾದದಲ್ಲಿ ಕಾಂಗ್ರೆಸ್‌ ನಾಯಕರು ಇದ್ದರೆ, ಸಂಭಾವ್ಯರ ಜತೆ ಬಿಜೆಪಿ ನಾಯಕರು ಸಂಧಾನ ಪ್ರಾರಂಭಿಸಿದ್ದಾರೆ.

Advertisement

ಮಾಜಿ ಸಚಿವರಾದ ಎಸ್‌.ಟಿ. ಸೋಮ ಶೇಖರ್‌, ಶಿವರಾಂ ಹೆಬ್ಟಾರ್‌, ಬೈರತಿ ಬಸವರಾಜ್‌, ಮಾಜಿ ಸಂಸದ ಬಿ.ವಿ. ನಾಯಕ್‌, ಮಾಜಿ ಶಾಸಕಿ ಪೂರ್ಣಿಮಾ ಸಹಿತ ಅನೇಕರಿಗೆ ಕಾಂಗ್ರೆಸ್‌ ಈಗಾಗಲೇ ಗಾಳ ಹಾಕಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಬಹಿರಂಗವಾಗಿ ಹೊಸ ರಾಜಕೀಯ ಸಮೀಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಬಿಜೆಪಿಯಲ್ಲಿ ಸಂಧಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ  ಬಿ.ಎಸ್‌. ಯಡಿಯೂರಪ್ಪ ನಿವಾಸದಲ್ಲಿ ನಡೆದ

ಶಾಸಕರ ಸಭೆಗೆ ಗೈರು ಹಾಜರಾಗುವ ಮೂಲಕ ಎಸ್‌.ಟಿ. ಸೋಮಶೇಖರ್‌ ಇನ್ನಷ್ಟು ಕುತೂಹಲ ಸೃಷ್ಟಿಸಿದ್ದಾರೆ.

ಶೆಟ್ಟರ್‌, ಸವದಿಗೆ ಹೊಣೆ

ಈ ಮಧ್ಯೆ ಸಂಸತ್‌ ಚುನಾವಣೆ ದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರನ್ನು

Advertisement

ಕಾಂಗ್ರೆಸ್‌ಗೆ ಸೆಳೆಯುವ ಜವಾಬ್ದಾರಿ ಯನ್ನು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಯವರಿಗೆ ಒಪ್ಪಿಸಲಾಗಿದೆ. ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಬಾಗಲ ಕೋಟೆ ಭಾಗದ ಪ್ರಭಾವಿ ಲಿಂಗಾಯತ ಮುಖಂಡರನ್ನು ಸೆಳೆಯುವುದಕ್ಕೆ ಕಾಂಗ್ರೆಸ್‌ ಯೋಜನೆ ರೂಪಿಸಿದೆ.

ಬಿಜೆಪಿ ಶಾಸಕರು ಪಕ್ಷ ತೊರೆಯುತ್ತಾರೆಂಬುದು ಸುಳ್ಳು ಸುದ್ದಿ. ಎಸ್‌.ಟಿ. ಸೋಮಶೇಖರ್‌, ಶಿವರಾಮ್‌ ಹೆಬ್ಟಾರ್‌ ಜತೆ ನಾನು ಮಾತನಾಡಿದ್ದು, ಯಾರೂ ಪಕ್ಷ ತೊರೆಯುವುದಿಲ್ಲ.

-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

ಸ್ಥಳೀಯವಾಗಿರುವ ಕೆಲವು ಸಮಸ್ಯೆಗಳನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಶನಿವಾರ ಸಿ.ಟಿ. ರವಿ ಅವರನ್ನು ಭೇಟಿ ಮಾಡಲಿದ್ದೇನೆ. ಕಾದು ನೋಡುತ್ತೇನೆ.

-ಎಸ್‌.ಟಿ. ಸೋಮಶೇಖರ್‌, ಬಿಜೆಪಿ ಶಾಸಕ

ನಾನು ಕಾಂಗ್ರೆಸ್‌ ಸೇರುವ ಪ್ರಮೇಯವೇ ಇಲ್ಲ. ಈ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ವದಂತಿ. ಯಾರೂ ಇದನ್ನು ನಂಬಬಾರದು. ನಾನು ಕನಸಿನಲ್ಲೂ ಕಾಂಗ್ರೆಸ್‌ ಸೇರ್ಪಡೆಯಾಗುವ ಬಗ್ಗೆ ಯೋಚಿಸಿಲ್ಲ.

-ಕೆ. ಗೋಪಾಲಯ್ಯ, ಮಾಜಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next