Advertisement
ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ತಿರುನಾಗರಿ ಮಾರುತಿ ರಾವ್ ಮಿರಿಯಾಲಗುಡದಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ರಾಜಕಾರಣಿಯಾಗಿದ್ದರು.
Related Articles
Advertisement
ಇಂದು ಬೆಳಿಗ್ಗೆ ರಾವ್ ಅವರ ಪತ್ನಿ ತನ್ನ ಪತಿಗೆ ಕರೆ ಮಾಡಿದ್ದ ಸಂದರ್ಭದಲ್ಲಿ ಅವರು ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ರಾವ್ ಅವರ ಪತ್ನಿ ಕಾರು ಚಾಲಕನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕಾರು ಚಾಲಕ ರಾವ್ ಅವರು ತಂಗಿದ್ದ ಕೊಠಡಿಗೆ ಬಂದು ನೋಡಿದಾಗ ಅವರು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ರಾವ್ ಅವರ ಮಗಳ ಗಂಡ ಪೆರುಮಳ್ಳ ಪ್ರಣಯ್ ನನ್ನು 2018ರ ಸೆಪ್ಟಂಬರ್ 14ರಂದು ಹಾಡುಹಗಲೇ ಕೊಲೆ ಮಾಡಲಾಗಿತ್ತು. ಪ್ರಣಯ್ ತನ್ನ ಗರ್ಭಿಣಿ ಪತ್ನಿ ಅಮೃತಾ ಅವರನ್ನು ವೈದ್ಯರಲ್ಲಿ ಕರೆದುಕೊಂಡು ಹೋಗಿ ವಾಪಾಸು ಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಆಸ್ಪತ್ರೆಯ ಎದುರೇ ಕೊಲೆ ಮಾಡಲಾಗಿತ್ತು. ಮತ್ತು ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಪ್ರಣಯ್ ಹತ್ಯೆಯ ನಾಲ್ಕು ದಿನಗಳ ಬಳಿಕ ನಲಗೊಂಡ ಪೊಲೀಸರು ತಿರುನಾಗರಿ ಮಾರುತಿ ರಾವ್, ಇವರ ಸಹೋದರ ಶ್ರವಣ್ ಮತ್ತು ಇತರೇ ಮೂವರನ್ನು ಈ ಕೊಲೆಗೆ ಸಂಬಂಧಿಸಿದಂತೆ ಬಂಧಿಸಿದ್ದರು. ಶಂಕಿತ ಭಯೋತ್ಪಾದಕನೊಬ್ಬನ ನೆರವಿನೊಂದಿಗೆ ರಾವ್ ಬಿಹಾರ ಮೂಲದ ಸುಪಾರಿ ಹಂತಕರ ನೆರವಿನಿಂದ ತನ್ನ ಅಳಿಯನನ್ನು ಕೊಲೆ ಮಾಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಮತ್ತು ಸುಪಾರಿ ಹಂತಕ ಸುಭಾಷ್ ಶರ್ಮಾನಿಗೆ ರಾವ್ ಅವರು ಒಂದು ಕೋಟಿ ರೂಪಾಯಿಗಳನ್ನು ನೀಡಿರುವ ಕುರಿತಾಗಿಯೂ ಪೊಲೀಸರು ತಮ್ಮ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.