Advertisement

25ರೊಳಗೆ ಬಿಜೆಪಿ ಸರಕಾರ ರಚಿಸಿದರೆ ರಾಜಕೀಯ ನಿವೃತ್ತಿ

10:46 PM May 12, 2019 | Team Udayavani |

ಹುಬ್ಬಳ್ಳಿ: “ಬಿಜೆಪಿಯವರು ತಮ್ಮ ಬಳಿ ಕಾಂಗ್ರೆಸ್‌ 20 ಶಾಸಕರು ಸಂಪರ್ಕದಲ್ಲಿದ್ದಾರೆಂದು ಸುಮ್ಮನೆ ಬೊಗಳೆ ಬಿಡುತ್ತಿದ್ದಾರೆ. ಮೇ 25ರೊಳಗೆ ಅವರು ಸರಕಾರ ರಚಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸಾಧ್ಯವಾಗದಿದ್ದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿಗೆ ಸಿದ್ಧರಿದ್ದಾರಾ’ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸವಾಲು ಹಾಕಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ನಮ್ಮ 20 ಶಾಸಕರ ಹೆಸರು ಬಹಿರಂಗ ಪಡಿಸಲಿ. ಆಗ ನಾನು ನಮ್ಮ ಜತೆ ಇರುವ ಬಿಜೆಪಿ ಶಾಸಕರ ಹೆಸರು ಹೇಳುವೆ. ಕರ್ನಾಟಕದಲ್ಲಿ ಬಿಜೆಪಿಯವರಿಗೆ ನೆಲೆಯಿಲ್ಲ. ಎಚ್‌.ಡಿ. ಕುಮಾರಸ್ವಾಮಿ 2008ರಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಅವತ್ತು ಬಿಜೆಪಿಗೆ ಅಧಿಕಾರ ನೀಡಿದ್ದರೆ ಇಷ್ಟೊತ್ತಿಗೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಿರುತ್ತಿತ್ತು ಎಂದರು.

ಸಮ್ಮಿಶ್ರ ಸರಕಾರದಲ್ಲಿ ಐದು ವರ್ಷ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ಇದಾದ ಮೇಲೆ 2022ರಲ್ಲಿ ಮತ್ತೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಅಂದರೂ ನಾವು ಹಾಗೂ ರಾಜ್ಯದ ಜನತೆ ಬಿಡೋದಿಲ್ಲ. ಅವರನ್ನು ಒತ್ತಾಯ ಮಾಡಿ ನಿಲ್ಲಿಸಿ ಸಿಎಂ ಮಾಡುತ್ತೇವೆ ಎಂದರು.

ಯಡಿಯೂರಪ್ಪ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಅದರ ಕನವರಿಕೆಯಲ್ಲಿ ಮಧ್ಯರಾತ್ರಿ ಎದ್ದು ಕೂರುತ್ತಿದ್ದಾರಂತೆ. ಬಿಜೆಪಿಯಲ್ಲಿನ ಎಲ್ಲ 104 ಶಾಸಕರು ಮೂಲತಃ ಬಿಜೆಪಿಯವರಲ್ಲ. ಅವರಲ್ಲಿನ 60-70 ಜನರು ಕಾಂಗ್ರೆಸ್‌, ಜೆಡಿಎಸ್‌ನಿಂದ ಬಂದವರು. ಅಸಮಾಧಾನಗೊಂಡವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರನ್ನು ಸೇರ್ಪಡೆ ಮಾಡಿಕೊಳ್ಳುವುದು ನಮಗೆ ಬೇಕಿಲ್ಲ. ನಮ್ಮದು ಹೈಕಮಾಂಡ್‌ ಪಕ್ಷ. ಈಗ ನಾವು ಕೊಟ್ಟ ಮಾತು ತಪ್ಪಲ್ಲ.

ಶಾಸಕ ರೇಣುಕಾಚಾರ್ಯ ಯಾವಾಗಲೂ ಜೋಕರ್‌. ಅವರಿಗೆ ಕುಂದಗೋಳದಲ್ಲಿ ವೈಯಕ್ತಿಕವಾಗಿ ಯಾವ ಶಕ್ತಿಯಿದೆ. ಅವರಿಗೆ ಪಕ್ಷದ ಅಭ್ಯರ್ಥಿ ಪರ 500 ಮತ ಹಾಕಿಸುವ ಶಕ್ತಿ ಇದೆಯಾ? ಉಡಾಫೆಯಾಗಿ ಮಾತನಾಡುವುದೇ ಅವರ ಚಾಳಿ ಎಂದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸುಮಾರು 1.5 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next