Advertisement

ಶಿವಕುಮಾರ ಸ್ವಾಮೀಜಿ ಜಯಂತಿ: ಪಕ್ಷಾತೀತವಾಗಿ ಗೌರವ ನಮನ ಸಲ್ಲಿಸಿದ ರಾಜಕೀಯ ನಾಯಕರು

02:30 PM Apr 01, 2022 | Team Udayavani |

ಬೆಂಗಳೂರು: ಸಿದ್ಧಗಂಗಾ ಮಠದ ಲಿ.ಡಾ|ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿಯ ಅಂಗವಾಗಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂ ಮಾಡಿ, “ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸಿದ ಅವರ ಬದುಕು ಮತ್ತು ಸಾಧನೆಗಳು ನಮಗೆ ಪ್ರೇರಣೆಯಾಗಿವೆ” ಎಂದಿದ್ದಾರೆ.

ಇದನ್ನೂ ಓದಿ:ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮ

Koo App

ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಅವರ ಬದುಕು ಮತ್ತು ಸಾಧನೆಗಳು ನಮಗೆ ಪ್ರೇರಣೆಯಾಗಿವೆ” : ಮುಖ್ಯಮಂತ್ರಿ @bsbommai

Advertisement

CM of Karnataka (@CMOKarnataka) 1 Apr 2022

ಸುಮಾರು ಎಂಟು ದಶಕಗಳ ಕಾಲ ನಾಡಿಗೆ ಅಧ್ಯಾತ್ಮದ ಮಾರ್ಗ ತೋರಿದ ಸಂತ, ತ್ರಿವಿಧ ದಾಸೋಹದಿಂದ ಬಡ ಮಕ್ಕಳ ಬದುಕಿಗೆ ದಾರಿ ಮಾಡಿದ ನಡೆದಾಡುವ ದೇವರು, ಪದ್ಮಭೂಷಣ, ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅನಂತ ಪ್ರಣಾಮಗಳು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸಿದ್ಧಗಂಗಾ ಮಠದ ನಡೆದಾಡುವ ದೇವರು, ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಗೌರವ ಪ್ರಣಾಮಗಳು. ತ್ರಿವಿಧ ದಾಸೋಹದ ಮೂಲಕ ಜನಮಾನಸದಲ್ಲಿ ಪೂಜನೀಯ ಸ್ಥಾನಪಡೆದಿರುವ ಅವರ ಆದರ್ಶ ವ್ಯಕ್ತಿತ್ವ ಅಸಂಖ್ಯ ಭಕ್ತರಿಗೆ ದಾರಿ ದೀಪವಾಗಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವಥ ನಾರಾಯಣ ಅವರು ಕೂ ಮಾಡಿದ್ದಾರೆ.

ನಡೆದಾಡುವ ದೇವರೆಂದೇ ಪ್ರಸಿದ್ದರಾದ ಶತಮಾನ ಕಂಡ ಶ್ರೇಷ್ಠ ಸಂತ, ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ| ಶಿವಕುಮಾರ ಮಹಾ ಸ್ವಾಮೀಜಿಗಳ 115 ನೇ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ಪ್ರಾಣಾಮಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡು ಕೂ ಮಾಡಿದ್ದಾರೆ.

ಮಾಜಿ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ನಮನ ಸಲ್ಲಿಸಿದ್ದು, ನಮ್ಮ ಪಾಲಿನ ನಡೆದಾಡುವ ದೇವರಾಗಿದ್ದವರು ಹಾಗೂ ಅನ್ನ, ಅಕ್ಷರ ಮತ್ತು ಆಶ್ರಯವೆಂಬ ತ್ರಿವಿಧ ದಾಸೋಹದ ದಿವ್ಯಚೈತನ್ಯದೊಂದಿಗೆ ಈ ನಾಡನ್ನು ಪೊರೆದ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ಶಿರಸಾಷ್ಟಾಂಗ ಪ್ರಣಾಮಗಳು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next