Advertisement

ರಾಜಕೀಯ ಶುದ್ಧೀಕರಣ ಅಗತ್ಯವಿದೆ; ಡಿ.ವಿ.ಸದಾನಂದಗೌಡ

06:29 PM Jun 03, 2022 | Team Udayavani |

ಚನ್ನರಾಯಪಟ್ಟಣ: ಕಳೆದ ಏಳು ದಶಕದಿಂದ ದೇಶ ಹಾಗೂ ರಾಜ್ಯದ ಮೇಲ್ಮನೆಗೆ ರಾಜಕೀಯ ಪಕ್ಷಗಳು ಹಣವಂತರಿಗೆ ಮಣೆ ಹಾಕುತ್ತಿದ್ದು ಈಗ ಸ್ವಚ್ಛ ಮಾಡುವ ಅವಕಾಶ ಬಂದಿದೆ. ಇದನ್ನು ಮನದಲ್ಲಿಟ್ಟು ಕೊಂಡು ಮತದಾನ ಮಾಡಿ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮನವಿ ಮಾಡಿದರು.

Advertisement

ಪಟ್ಟಣದ ಆದಿಚುಚಂನಗರಿ ಶಿಕ್ಷಣ ಸಂಸ್ಥೆಯಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್‌ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು, ಯಾವ ವ್ಯಕ್ತಿ ರಾಜಕೀಯ ಪಕ್ಷಕ್ಕೆ ಹಣ ನೀಡುತ್ತಾನೆ, ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಾನೆ ಅವರಿಗೆ ಟಿಕೇಟ್‌ ನೀಡುತ್ತಿದ್ದರು, ಆದರೆ ಬಿಜೆಪಿ ಹಣಕ್ಕಿಂತ ಗುಣವಂತರಿಗೆ ಮಣೆ ಹಾಕುತ್ತಿದ್ದೇವೆ ನಿಮ್ಮ ಆಶೀರ್ವಾದ ಬೇಕಿದೆ ಎಂದರು.

ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್‌: ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಕ್ಷೇತ್ರದಿಂದ ರಾಜ್ಯಸಭೆಯ ಆಭ್ಯರ್ಥಿಯನ್ನು ಕಣಕ್ಕೆ ಇಳಿಸುವಾಗ ಅವರ ಮೌಲ್ಯಮಾಪನ ಮಾಡುವುದರೊಂದಿಗೆ ಆಯಾ ಕ್ಷೇತ್ರದಲ್ಲಿ ಅಗಾದ ಅನುಭವ ಹಾಗೂ ಪ್ರತಿಭೆ ಹೊಂದಿರಬೇಕು ಎಂಬ ನಿಯಮ ಜಾರಿ ಮಾಡಿ, ಅಂತಹವರನ್ನು ರಾಜ್ಯಸಭೆಗೆ ಇಳಿಸುತ್ತಿದೆ. ಇದೇ ಮಾದರಿಯಲ್ಲಿ ದೇಶದ ಪ್ರತಿಷ್ಟಿತ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ ಎಂದರು.

ಪರಿಷತ್‌ಗೂ ಅನುಭವದ ಮಾನದಂಡ: ರಾಜ್ಯದಲ್ಲಿಯೂ ವಿಧಾನ ಪರಿಷತ್‌ಗೆ ಆಯ್ಕೆ ಮಾಡಬೇಕಿರುವುದು ಅನುಭವ, ಸಮಾಜಿಕ ಕಳಕಳಿ ಮತ್ತು ಪರಿಷತ್ತಿನಗೆ ಆಯ್ಕೆಯಾಗಬೇಕಿರುವ ಕ್ಷೇತ್ರದ ಬಗ್ಗೆ ಅನುಭವ ಇಂತಹ ಅಭ್ಯರ್ಥಿಗಳನ್ನು ಮಾತ್ರ ಬಿಜೆಪಿ ಕಣಕ್ಕೆ ಇಳಿಸುತ್ತಿದೆ ಇದರಿಂದ ಜನಸಾಮಾನ್ಯರ ಪಕ್ಷವಾಗಿ ದೇಶದಲ್ಲಿ ಹೊರಹೊಮ್ಮುತ್ತಿದೆ. ಇಲ್ಲದೆ ಹೋದರೆ ಇತರ ಪಕ್ಷಗಳ ರೀತಿ ಅಪಹಾಸ್ಯಕ್ಕೆ ಇಡಾಗಬೇಕಿತ್ತು. ವಿಧಾನ ಪರಿಷತ್‌ ಮಹರಾಜರ ಕಾಲದಿಂದ ಬಂದಿರುವ ಸಂಪ್ರದಾಯ ಇಲ್ಲಿ ಚರ್ಚೆಯಾದ ವಿಷಯವನ್ನು ವಿಧಾನ ಸಭೆಯಲ್ಲಿ ಅನುಮೋದನೆ ನಿಡುತ್ತಿದ್ದು ಇನ್ನು ಪುನಃ ಹುಟ್ಟು ಹಾಕಲಾಗುತ್ತಿದೆ ಎಂದರು.

ರಾಜಕೀಯದ ಬಗ್ಗೆ ಹೀನ ಮನಸ್ಥಿತಿ: ರಾಜಕಾರಣ ಎಂದರೆ ಪರ್ಸಂಟೇಜ್‌ ಪಡೆಯುವುದು, ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಲಪಟಾಯಿಸುವುದು ಎನ್ನುವ ಮನೋಭಾವ ಜನಸಾಮನ್ಯರಲ್ಲಿ ಹಾಸುಹೊಕ್ಕಿದೆ. ಇದನ್ನು ಹೋಗಲಾಡಿಸಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಇದಕ್ಕಾಗಿ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ ರಾಜ್ಯದಲ್ಲಿಯೂ ಇದೇ ಹಾದಿಯಲ್ಲಿ ಪಕ್ಷ ಹಾಗೂ ಸರ್ಕಾರ ಸಾಗುತ್ತಿದೆ ಎಂದರು.

Advertisement

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎನ್‌.ಶಂಕರೇಶ್‌, ಸಹಪ್ರಾಧ್ಯಕರಾದ ಸಿದ್ದರಾಜು, ವಿಜಯಕುಮಾರ್‌, ಬಿಜೆಪಿ ಚುನಾವಣೆ ಉಸ್ತುವಾರಿ ನವಿಲೆ ಅಣ್ಣಪ್ಪ, ಬಿಜೆಪಿ ಮುಖಂಡರಾದ ಸಿ.ಎನ್‌.ಮಂಜುನಾಥ್‌, ರಂಗೇಗೌಡ, ರಂಗಸ್ವಾಮಿ, ರವಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next