Advertisement

ಹಡಪದ ಅಪ್ಪಣ್ಣನ ಕಾಯಕ ತತ್ವ ಪಾಲಿಸಿ

02:58 PM Jul 28, 2018 | |

ಆಳಂದ: 12ನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ವಚನ ಸಾಹಿತ್ಯದ ಮೂಲಕ ಜನರ ಬಾಳು ಬೆಳಗಲು ಶ್ರಮಿಸಿದ ಶರಣ ಹಡಪದ ಅಪ್ಪಣ್ಣನ ಕಾಯಕ ಮತ್ತು ವಚನ ತತ್ವಗಳನ್ನು ಆಚರಣೆಗೆ ತರಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ಪಟ್ಟಣದ ಗುರುಭವನ ಆವರಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಶರಣ ಹಡಪದ ಅಪ್ಪಣ್ಣನವರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಡಪದ ಬಾಂಧವರ ಕಾಯಕ ಆಧುನಿಕ ಜಗತ್ತಿಗೆ ಅತಿ ಮಹತ್ವ ಪಡೆದುಕೊಳ್ಳುತ್ತಿದ್ದು, ಅನ್ಯ ಸಮುದಾಯದವರು ಕಾಯಕ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಸಮುದಾಯದವರು ಇದನ್ನು ಕೀಳೆಂದು ಭಾವಿಸಿದೆ ಆಧುನಿಕ ಸ್ಪರ್ಶದೊಂದಿಗೆ ಈ ಕಾರ್ಯವನ್ನು ನಿರ್ವಹಿಸಿ ಆರ್ಥಿಕ ಮತ್ತು ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು. ಅಲ್ಲದೇ ಶರಣರು ಕಾಯಕವನ್ನು ಸಮಾನವಾಗಿ ಕಂಡಿದ್ದಾರೆ ಎಂದು ಹೇಳಿದರು.

ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ ಮಾತನಾಡಿದರು. ಸಾವಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಸುಭಾಶ್ಚಂದ್ರ ಕರಹರಿ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಹಡಪದ ಸಮಾಜದ ಅಧ್ಯಕ್ಷ ಶಂಕರ ಎಸ್‌. ಹಡಪದ, ಉಪಾಧ್ಯಕ್ಷ ಪ್ರಕಾಶ ಎಲ್‌. ಹಡಪದ, ಡಾ| ಸಂಜಯ ರೆಡ್ಡಿ, ಮುಖಂಡ ಅಶೋಕ ಗುತ್ತೇದಾರ, ಗ್ರೇಡ್‌-2 ತಹಶೀಲ್ದಾರ್‌ ಬಿ.ಜಿ. ಕುದರಿ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಶರಣ ಗುಂಡಯ್ಯ ಸ್ವಾಮಿ, ಮುಖಂಡ ಭೀಮಶಾ ಹಡಪದ, ಚಂದ್ರಕಾಂತ ಹಡಪದ ತೀರ್ಥ ಅವರು ಶಾಸಕರನ್ನು ಮತ್ತು ತಹಶೀಲ್ದಾರ್‌ರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು. 

ವಿದ್ಯಾಧರ ಕಾಂಬಳೆ ನಿರೂಪಿಸಿದರು. ಕೈಗಾರಿಕೆ ಅಧಿಕಾರಿ ಜಫರ ಅನ್ಸಾರಿ ವಂದಿಸಿದರು. ನಂತರ ಪ್ರಮುಖ ರಸ್ತೆಗಳ ಮೂಲಕ ಹಡಪದ ಅಪ್ಪಣ್ಣನ ಭಾವಚಿತ್ರದ ಮೆರವಣಿಗೆ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next