Advertisement

ಕಡಗಂಚಿ: ಕನ್ನಡ ಸಾಹಿತ್ಯ ಸಮ್ಮೇಳನ ಇಂದು

06:16 AM Feb 09, 2019 | Team Udayavani |

ಆಳಂದ: ಕಲಬುರಗಿ-ಆಳಂದ ಮಾರ್ಗದ ವಾಗ್ದರಿ-ರಿಬ್ಬನಪಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಜ.9ರಂದು 10ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಶಿವಶಾಂತ ರೆಡ್ಡಿ ನೇತೃತ್ವದಲ್ಲಿ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಭಕರೆ ತಿಳಿಸಿದ್ದಾರೆ.

Advertisement

ಬೆಳಗಿನ ಜಾವ ಚಂದಪ್ಪ ಪಾಟೀಲ ಮಹಾ ವೇದಿಕೆಯಲ್ಲಿ ಧ್ವಜಾರೋಹಣ, ನಂತರ ನಾಡದೇವಿ ಭುವನೇಶ್ವರಿ ಪೂಜೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಕಲ್ಯಾಣ ಚಾಲುಕ್ಯರ ವೇದಿಕೆಯಲ್ಲಿ ಬೆಳಗ್ಗೆ 11ಕ್ಕೆ ಸಮ್ಮೇಳನವನ್ನು ಕಲಬುರಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ವಿಶೇಷ ಅಧಿಕಾರಿ ಡಾ| ಬಸವರಾಜ ಗಾದಗೆ ಉದ್ಘಾಟಿಸುವರು.

ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಸುಭಾಷ ಗುತ್ತೇದಾರ ಆಶಯ ನುಡಿ ಆಡುವರು. ಕಡಗಂಚಿ ಕಟ್ಟಿಮಠದ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಚಲನಚಿತ್ರ ನಟ ಮಂಡ್ಯ ರಮೇಶ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಡಾ| ಶರಣಪ್ಪ ಚಕ್ರವರ್ತಿ ರಚಿಸಿದ ತಾಲೂಕು ಶಾಸನಗಳ ಪುಸ್ತಕ ಬಿಡುಗಡೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಕೈಗೊಳ್ಳುವರು. ತಡಕಲ್‌ನ ಎಸ್‌.ಬಿ. ಪಾಟೀಲ ರಚಿಸಿದ ಕಾವ್ಯ ಸಂಕೇತ ಕವ‌ನ ಸಂಕಲನವನ್ನು ಹಿರಿಯ ಸಾಹಿತಿ ಡಾ| ಕಾಶಿನಾಥ ಅಂಬಲಗಿ, ಶರಣ ಸಾಹಿತ್ಯ ಪರಿಷತ್‌ ರಾಜ್ಯ ಉಪಾಧ್ಯಕ್ಷ ಅಪ್ಪಾರಾವ್‌ ಅಕ್ಕೋಣಿ ಸಿಡಿ ಬಿಡುಗಡೆ, ಜಿಪಂ ಅಧ್ಯಕ್ಷೆ ಸುವರ್ಣ ಎಚ್. ಮಲಾಜಿ ಪುಸ್ತಕ ಮಳಿಗೆ ಬಿಡುಗಡೆ ಮಾಡುವರು.

ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು, ತಹಶೀಲ್ದಾರರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಿಕಟ ಪೂರ್ವ ಅಧ್ಯಕ್ಷ ಎಸ್‌.ಪಿ. ಸುಳ್ಳದ, ಸಮ್ಮೇಳನ ಅಧ್ಯಕ್ಷ ಶಿವಶಾಂತ ರೆಡ್ಡಿ ಸಮ್ಮೇಳನ ಭಾಷಣ ಕೈಗೊಳ್ಳುವರು. ನಂತರ ವಿವಿಧ ಗೋಷ್ಠಿ, ಸಂವಾದ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಹಾಸ್ಯ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next