ಗಂಗಾವತಿ: 15 ವರ್ಷಗಳ ಹಿಂದೆ ಪತ್ನಿಯಿಂದಲೆ ತನ್ನ ಗಂಡನನ್ನು ಕೊಲೆ ಮಾಡಿ ಮನೆಯಲ್ಲಿ ಹೂತ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಡಿವೈಎಸ್ಪಿ ಡಾ.ಚಂದ್ರಶೇಖರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಯನಗರದಲ್ಲಿರುವ ಲಕ್ಷ್ಮೀ ಸಿಂಗ್ ತನ್ನ ಗಂಡ ಪಂಪಾಪತಿ ಅಲಿಯಾಸ್ ಶಂಕರ ಸಿಂಗ್ ಅವರನ್ನು ಕೊಲೆ ಮಾಡಿದ್ದಾರೆಂದು ಪುತ್ರಿ ವಿದ್ಯಾಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಈ ದೂರಿನ ಮೇರೆಗೆ ಎಸ್.ಪಿ.ಜಿ.ಸಂಗೀತ ಅವರು ಅರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿ ಅರೋಪಿಗಳಾದ ಲಕ್ಷ್ಮಿಸಿಂಗ್, ರಾಂಪುರ ಪೇಟೆಯ ಅಮ್ಜಾದ್ ಖಾನ್, ಕಿಲ್ಲಾ ಏರಿಯಾದ ಅಬ್ದುಲ್ ಹಫೀಜ್, ಬಾಬಾ ಜಾಕಿರ್ ಭಾಷಾ, ಶಿವನಗೌಡ ಈಳಿಗನೂರು ಇವರನ್ನು ಬಂಧಿಸಿದ್ದಾರೆ.
ಜಯನಗರದಲ್ಲಿ ವಾಸವಾಗಿದ್ದ ಲಕ್ಷ್ಮೀ ಸಿಂಗ್ ಎನ್ನುವರು ತನ್ನ ಪತಿ ಪಂಪಾಪತಿ ಅಲಿಯಾಸ ಶಂಕರ ಸಿಂಗ್ ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ್ದರು. ಕೊಲೆಗೆ ಸಹಕರಿಸಿದ ಐದು ಜನ ಅರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಪಿ.ಐ. ವೆಂಕಟಸ್ವಾಮಿ, ಪಿಎಸ್ ಐ ಶೈಲಾಜ ಬೇಗಂ, ಸಿಬ್ಬಂದಿಗಳಾದ ಚಿರಂಜೀವಿ, ಅನಿಲ್ ಕುಮಾರ, ವೀರೇಶ್, ಮಹೇಶ, ಮೈಲಾರಪ್ಪ, ರಾಘವೇಂದ್ರ, ಪ್ರಭಾಕರ್, ನರಸಪ್ಪ ಭಾಗವಹಿಸಿದ್ದರು.
ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರಿಗೆ ಎಸ್.ಪಿ.ಬಹುಮಾನ ಘೋಷಿಸಿದ್ದಾರೆ.