ಶಿವಮೊಗ್ಗ: ರಾಜ್ಯದಲ್ಲಿ ಕೋವಿಡ್ ಆತಂಕ ಹೆಚ್ಚಾಗಿದೆ. ಶಿವಮೊಗ್ಗದಲ್ಲೂ ಸಹ ಕೋವಿಡ್ ಎರಡನೇ ಅಲೆ ಅಬ್ಬರ ಆರಂಭವಾಗಿದ್ದು, ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ 146 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿ ಸಿದ್ದಾರೆ. ಶಿವಮೊಗ್ಗದ ಗೋಪಿ ವೃತ್ತದ ಬಳಿ ಸಿಟಿ ಡಿವೈಎಸ್ಪಿ ಪ್ರಶಾಂತ್ ನೇತೃತ್ವದಲ್ಲಿ ದೊಡ್ಡಪೇಟೆ ಹಾಗೂ ಕೋಟೆ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ.
ಇನ್ನು ಉಷಾ ನಸಿಂìಗ್ ಹೋಂ ಸರ್ಕಲ್ ಬಳಿ ಜಯನಗರ ಠಾಣೆ ಪೊಲೀಸರು ಸಹ ದಂಡ ವಿ ಧಿಸಿದ್ದಾರೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಷ್ಟೇ ಅಲ್ಲದೆ ನಗರದ ವಿವಿಧ ಸರ್ಕಲ್‌ಗಳಲ್ಲೂ ಮಾಸ್ಕ್ ಕಾರ್ಯಾಚರಣೆ ನಡೆಯಿತು. ಉಷಾ ನಸಿಂìಗ್ ಹೋಮ್ ಸಿಗ್ನಲ್ ಬಳಿ, ಬಸ್ ನಿಲ್ದಾಣ, ಮಹಾವೀರ ವೃತ್ತ, ಗೋಪಿ ವೃತ್ತ, ಅಮೀರ್ ಅಹ್ಮದ್ ಕಾಲೋನಿ, ಪೊಲೀಸ್ ಚೌಕಿ, ಆಲ್ಕೊಳ, ರೈಲ್ವೆ ನಿಲ್ದಾಣ, ಕೆಇಬಿ ವೃತ್ತದಲ್ಲಿ ಪೊಲೀಸರು ದಂಡ ಪ್ರಯೋಗ ನಡೆಸಿದರು. ಡಿಸಿ ಕಚೇರಿಯ ಸಿಬ್ಬಂದಿ, ಪಾಲಿಕೆ ಸಿಬ್ಬಂದಿ ಕೂಡ ಮಾಸ್ಕ್ ದಂಡ ತೆತ್ತಿದ್ದಾರೆ.
ಬೆಳಗ್ಗೆ 11ರಿಂದ 12ಗಂಟೆ ಅವ ಧಿಯಲ್ಲಿ 300ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿತ್ತು. ಮೊಬೈಲ್ ಕವರ್ ಹಾಕಿಸಲು ಬಂದಿದ್ದೇನೆ. ನಾನು ಸಹ ಸರ್ಕಾರಿ ನೌಕರರು ಎಂದು ಹೇಳುವ ಮೂಲಕ ಮಹಿಳೆಯೋರ್ವರು ದಂಡ ನೀಡಿದರೆ, ಪಾಲಿಕೆ ಸಿಬ್ಬಂದಿ ಪೇಂಟ್ ತರಲು ಬಂದಿದ್ದೇನೆ. ಮಾಸ್ಕ್ ಜೇಬಿನಲ್ಲಿದೆ ಎಂದು ಹೇಳಿ ದಂಡ ಕಟ್ಟಿದ್ದಾರೆ. ಕೆಲವರು ಮಾಸ್ಕ್ ಧರಿಸದೆ ಜೇಬಿನಲ್ಲಿಟ್ಟುಕೊಂಡು ಬಂದು ಪೊಲೀಸರಿಗೆ ದಂಡ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡವರು ರಾಜಕಾರಣಿಗಳಿಗೂ ಹೀಗೆ ದಂಡ ಕಟ್ಟಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಬೈಕ್ ಹಾಗೂ ಕಾರ್‌ನಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿ ಸುವುದು ಮಾತ್ರವಲ್ಲದೆ ನಗರ ಸಾರಿಗೆ ಮತ್ತು ಖಾಸಗಿ ಬಸ್‌ಗಳಲ್ಲಿ ಸಹ ಮಾಸ್ಕ್ ಧರಿಸದವರಿಗೆ ದಂಡ ವಿಧಿ ಸಿದ್ದು, ಮಾಸ್ಕ್ ಧರಿಸದೇ ಓಡಾಡದಂತೆ ಎಚ್ಚರಿಕೆ ಸಹ ನೀಡಲಾಗಿದೆ. 80 ಸಾವಿರ ದಂಡ: ಮಾಸ್ಕ್ ಧರಿಸದವರ ವಿರುದ್ಧ ಭಾನುವಾರ ಶಿವಮೊಗ್ಗ ಪೊಲೀಸರು ಒಟ್ಟು 517 ಪ್ರಕರಣದಲ್ಲಿ 80800 ರೂ. ದಂಡ ವಿಧಿಸಿದ್ದಾರೆ.