ಇಂಡಿ ಗ್ರಾಮೀಣ ಠಾಣೆ ಎಸ್‌ಐ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಜಂಗಮ ಕ್ಷೇಮಾಭಿವೃದ್ಧಿ
ಮಹಾಸಭಾ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Advertisement
ಗುರುವಾರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿದ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಿರೇಮಠ, ಕಾರ್ಯದರ್ಶಿ ಸಿದ್ಧರಾಮಯ್ಯ ಸಾವಳಗಿಮಠ, ಕಾರ್ಯಾಧ್ಯಕ್ಷ ಶಿವರುದ್ರಯ್ಯ ಹಿರೇಮಠ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಸಂಘಟನೆ ಕಾರ್ಯಕರ್ತರು, ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ಅಮಾನವೀಯ ಕೃತ್ಯ ಎಸಗಿದ ಕುರಿತು ದೂರು ನೀಡಲು ಮುಂದಾದ ಸಂತ್ರಸ್ತೆಯ ದೂರು ಸ್ವೀಕರಿಸಿದೇ, ಅವಮಾನ ಕಳಿಸಿದ ಇಂಡಿ ಗ್ರಾಮೀಣ ಠಾಣೆ ಎಸೈ ಶಿವಾನಂದ ಅರೆನಾಡರ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಹೀನಕೃತ್ಯ ಎಸಗಿದ ಎಲ್ಲರನ್ನೂ ಕೂಡಲೇ ಬಂಧಿಸಿ ಗೂಂಡಾ ಕಾಯ್ದೆಯಂತೆ ಪ್ರಕರಣ ದಾಖಲಿಸಬೇಕು. ಕೃತ್ಯ ಎಸಗಿದವರನ್ನು ಗಡಿಪಾರು ಮಾಡಬೇಕು. ಬಾಧಿತ ಮಹಿಳೆಯ ಕುಟುಂಬಕ್ಕೆ ಜೀವ ಬೆದರಿಕೆಇರುವ ಕಾರಣ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಮುದ್ದೇಬಿಹಾಳ: ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಮಹಿಳೆಯ ಮೇಲೆ ಹಲ್ಲೆ ಮಾಡಿದವರನ್ನು ಎರಡು ದಿನದಲ್ಲಿ ಬಂಧಿಸಿ, ಕರ್ತವ್ಯ ನಿರತ ಪೊಲೀಸರನ್ನು ಕೂಡಲೇ ವಜಾಗೊಳಿಸಿ ಹಲ್ಲೆಗೊಳಗಾದ ಮಹಿಳೆಗೆ ಸರಕಾರದಿಂದ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಪ್ರಕೃತಿ ಮಹಿಳಾ ಸ್ವ-ಸಹಾಯ ಸಂಘದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಮಹಿಳೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದು ಖಂಡನೀಯ. ಇದರಿಂದ ಸಮಾಜದಲ್ಲಿ ಮಹಿಳೆಗೆ ಯಾವುದೇ
ರಕ್ಷಣೆ ಇಲ್ಲದಂತಾಗಿದ್ದು ದುಷ್ಕರ್ಮಿಗಳನ್ನು ಬಂಧಿಸಿ ಗಲ್ಲು ಶಿಕ್ಷಗೆ ಒಳಪಡಿಸಬೇಕು. ಕರ್ತವ್ಯ ನಿರತ ಪೊಲೀಸರನ್ನು
ವಜಾಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸರಕಾರದಿಂದ
5 ಲಕ್ಷ ರೂ. ಪರಿಹಾರ ಧನ ಒದಗಿಸಬೇಕು. ಎರಡು ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಪ್ರಕೃತಿ ಮಹಿಳಾ ಸಂಘ ಉಗ್ರ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.
Related Articles
Advertisement