Advertisement
ಅವರು ಉಪ್ಪಿನಂಗಡಿಯಲ್ಲಿ ಠಾಣಾ ವ್ಯಾಪ್ತಿಯ ಗ್ರಾಮ ಗಸ್ತು ಸಭೆಯಲ್ಲಿ ಮಾತನಾಡಿದರು. ಗ್ರಾಮದ ಮಟ್ಟಿಗೆ ಬೀಟ್ ಪೊಲೀಸ್ ಅಲ್ಲಿನ ಪೊಲೀಸ್ ಅಧಿಕಾರಿ ಆಗಿರುತ್ತಾರೆ. ಗ್ರಾಮದಲ್ಲಿ ನಡೆಯುವ, ಆಗು-ಹೋಗುಗಳ ಪ್ರತಿಯೊಂದು ವಿಚಾರವನ್ನು ಬೀಟ್ ಪೊಲೀಸ್ ಗಮನಕ್ಕೆ ತರಬೇಕು. ಯಾವುದೇ ಅಕ್ರಮ, ಅನಾಚಾರದ ಬಗ್ಗೆಯೂ ಬೀಟ್ ಪೋಲಿಸ್‌ಗೆ ತಿಳಿಸಬಹುದು. ಬೀಟ್ ಸಮಿತಿಯ ಮೂಲಕವೂ ತಿಳಿಸಬಹುದು. ಬೀಟ್ ಪೊಲೀಸರಿಂದ ಸಾಧ್ಯವಾಗದ್ದನ್ನು ಠಾಣೆಗೆ, ನನ್ನ ಗಮನಕ್ಕೂ ತರಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಎಸ್.ಪಿ. ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಮಾತನಾಡಿದ ಗ್ರಾಮಸ್ಥರು, ಕೆಲವೊಂದು ಗ್ರಾಮದಲ್ಲಿ ಗ್ರಾಮ ಸಮಿತಿ ಆಗಿದೆ. ಆ ಸಮಿತಿಯಲ್ಲಿ ಯಾರಿದ್ದಾರೆ ಎನ್ನುವುದೇ ಗೊತ್ತಿಲ್ಲ. ಕೆಲ ವೊಂದು ಕಡೆ ಸಭೆಯೂ ನಡೆದಿದೆ. ಆದರೆ ಯಾವುದೇ ಕಾರಣಕ್ಕೂ ಈ ಸಮಿತಿಯ ಸದಸ್ಯರು ಇದರಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಯಾರನ್ನೋ, ಯಾವುದೋ ಕಾರಣ ದಿಂದ ದೂರು ನೀಡುವ ಹಾಗೆ ಆಗದಿರಲಿ. ಆ ರೀತಿಯಿಂದಾಗಿ ಅಮಾ ಯಕರು ಸಮಸ್ಯೆಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದರು.
Related Articles
ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಪಿ. ಅಧಿಕಾರ ದುರುಪಯೋಗ ಆಗಲು ಸಾಧ್ಯ ಇಲ್ಲ. ಅಂತಹ ಸನ್ನಿವೇಶ ನಡೆದರೆ, ಆ ರೀತಿಯ ಅನುಮಾನಗಳು ಇದ್ದರೆ ನೇರವಾಗಿ ನನಗೆ ತಿಳಿಸಬಹುದಾಗಿದೆ. ಅಷ್ಟಕ್ಕೂ ಸಮಿತಿಯಲ್ಲಿ ಇರುವ ಯಾರೂ ಕೂಡ ಯಾವುದೇ ಕಾರಣಕ್ಕೂ ಸಮಿತಿಯನ್ನು ದುರುಪಯೋಗ ಮಾಡಿಕೊಳ್ಳಬಾರದು. ಈ ರೀತಿಯ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಮೂಲಕ ಗ್ರಾಮದಲ್ಲಿ ಅಪರಾಧ ಕಡಿಮೆ ಆಗಬೇಕು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇದು ಕೆಲಸ ಮಾಡಬೇಕು ಎಂದರು.
Advertisement
ಸಭೆಯಲ್ಲಿ ಉಪ್ಪಿನಂಗಡಿ ವರ್ತಕ ಸಂಘದ ಯು.ಜಿ. ರಾಧಾ, ಕೈಲಾರ್ ರಾಜ್‌ಗೊàಪಾಲ್ ಭಟ್, ಗ್ರಾಮ ಪಂಚಾಯತ್ ಸದಸ್ಯ ಸುನಿಲ್, ಕರಾಯ ಗ್ರಾಮದ ನಾರಾಯಣ ಭಟ್, ಇಲ್ಯಾಸ್, ಪೆರ್ನೆ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲ, ಅಬ್ದುಲ್ ರಜಾಕ್, ಶ್ರೀಧರ ಗೌಡ ಮೊದಲಾದವರು ಮಾತನಾಡಿ ಸಲಹೆ ಸೂಚನೆ ನೀಡಿದರು.ಸಭೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಅಬ್ದುಲ್ ರಹಿ ಮಾನ್, ನೆಲ್ಯಾಡಿ ಗ್ರಾಮ ಪಂಚಾಯತ್‌ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ಕೃಷ್ಣ, ಗ್ರಾಮ ಪಂಚಾಯತ್ ಸದಸ್ಯ ಯು.ಟಿ. ತೌಸೀಫ್, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಜಗದೀಶ್ ಶೆಟ್ಟಿ, ಎಂ. ವಿಶ್ವನಾಥ್, ಮಾಣಿಕ್ಯರಾಜ್ ಪಡಿವಾಳ್, ಪೌಲ್ ಡಿ’ಸೋಜಾ, ಕೆ.ಇ. ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಅನಿಲ್ ಕುಲಕರ್ಣಿ ಸ್ವಾಗತಿಸಿ, ಪೊಲೀಸ್ ಸಿಬಂದಿ ಮನೋಹರ್ ವಂದಿಸಿದರು. ದೇವಿದಾಸ್ ಕಾರ್ಯಕ್ರಮ ನಿರೂಪಿಸಿದರು.