Advertisement

ದುಬೈಯಲ್ಲಿ ಕೇರಳದ 2 ಕುಟುಂಬಗಳ 11 ಮಂದಿ ನಾಪತ್ತೆ: ತನಿಖೆ

04:52 PM Jun 27, 2018 | Team Udayavani |

ಕಾಸರಗೋಡು : ಕಳೆದ ಜೂನ್‌ 15ರಿಂದ ದುಬೈಯಲ್ಲಿ  ಮಕ್ಕಳ ಸಹಿತ ಕೇರಳದ ಎರಡು ಕುಟುಂಬಗಳ 11 ಮಂದಿ ನಾಪತ್ತೆಯಾಗಿರುವ ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರು ಆರಂಭಿಸಿದ್ದಾರೆ.

Advertisement

‘ಅಬ್ದುಲ್‌ ಹಮೀದ್‌ ಎಂಬರು ತನ್ನ ಪುತ್ರಿಯ ಕುಟುಂಬದ ಆರು ಸದಸ್ಯರು ದುಬೈಯಲ್ಲಿ ನಾಪತ್ತೆಯಾಗಿರುವ ಬಗ್ಗೆ ನೀಡಿರುವ ದೂರನ್ನು ನಾವು ತನಿಖೆಗಾಗಿ ಸ್ವೀಕರಿಸಿದ್ದೇವೆ. ಇದೇ ರೀತಿ ಇನ್ನೊಂದು ಕುಟುಂಬದ ಐವರು ಸದಸ್ಯರು ನಾಪತ್ತೆಯಾಗಿರುವ ದೂರಿನ ತನಿಖೆಯನ್ನು ಕೂಡ ಕೈಗೊಂಡಿದ್ದೇವೆ’ ಎಂದು ಕಾಸರಗೋಡು ಜಿಲ್ಲಾ ಪೊಲೀಸ್‌ ಮುಖ್ಯಸ್ಥ  ಎ ಶ್ರೀನಿವಾಸ್‌ ಹೇಳಿದ್ದಾರೆ.

ಕೇರಳದ ಮುಂಡಂಕುಳಂ ನ ಅಬ್ದುಲ್‌ ಹಮೀದ್‌ ಅವರು ತನ್ನ ಪುತ್ರಿ ನಸೀನಾ 25, ಆಕೆಯ ಪತಿ ಸವದ್‌ 32, ಇವರ ಮೂವರು ಮಕ್ಕಳು, ಸವದ್‌ ಅವರ ಎರಡನೇ ಪತ್ನಿ ರಹನತ್‌ 22 ದುಬೈಯಲ್ಲಿ ನಾಪತ್ತೆಯಾಗಿದ್ದು ಕಳೆದ 15 ದಿನಗಳಿಂದ ಇವರ ಸಂಪರ್ಕ ಇಲ್ಲವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. 

ಆದರೆ ಈಗ ಎರಡು ದಿನಗಳ ಹಿಂದೆ ಹಮೀದ್‌ ಅವರೇ ತನ್ನ ಕುಟುಂಬದವರು ಯೆಮೆನ್‌ನಲ್ಲಿ ಸುರಕ್ಷಿತರಿರುವುದಾಗಿ ತನಗೆ ತಿಳಿದು ಬಂದಿದೆ ಎಂದು ತಮಗೆ ಹೇಳಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next