Advertisement

ಗೋವಾದ ಪ್ರವಾಸೋದ್ಯಮ ಕ್ಷೇತ್ರದ ಅವ್ಯವಹಾರಗಳ ವಿರುದ್ಧ ಪೊಲೀಸರ ತನಿಖೆ

04:56 PM Jun 06, 2022 | Team Udayavani |

ಪಣಜಿ: ಗೋವಾ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವ ಎಲ್ಲ ಅವ್ಯವಹಾರಗಳ ವಿರುದ್ಧ ಪೋಲಿಸರು ತನಿಖೆ ನಡೆಸಲಿದ್ದಾರೆ. ಕಾನೂನು ಬದ್ಧ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಗಳಿಗೆ ಮಾತ್ರ ರಾಜ್ಯದಲ್ಲಿ ಮಾನ್ಯತೆಯಿದೆ. ಅಕ್ರಮ ಮಸಾಲ್ ಪಾರ್ಲರ್ ನಡೆಸುವವರ ವಿರುದ್ಧ ಕಟ್ಟುನಿಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಎಚ್ಚರಿಕೆ ನೀಡಿದ್ದಾರೆ.

Advertisement

ಮಹಾರಾಷ್ಟ್ರ ಮೂಲದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿದ ಘಟನೆ ನಡೆದ ಹಿನ್ನೆಲೆಯಲ್ಲಿ ಗೋವಾದ ಕಲಂಗುಟ್ ಬೀಚ್‍ಗೆ ಭೇಟಿ ನೀಡಿದ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಪೋಲಿಸ್ ಹಾಗೂ ದೃಷ್ಠಿ ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಅಮೋಣಕರ್ ಉಪಸ್ಥಿತರಿದ್ದರು.

ರಾಜ್ಯದಲ್ಲಿನ ಅಕ್ರಮ ನೈಟ್‍ಕ್ಲಬ್, ಡಾನ್ಸ್, ಬಾರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.  ಆದೇಶ ಸಮರ್ಪಕವಾಗಿ ಜಾರಿಯಾಗದಿದ್ದಲ್ಲಿ ಆ ಭಾಗದ ಪೊಲೀಸ್ ಇನ್ಸಪೆಕ್ಟರ್ ಗ ಳನ್ನೇ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಲಂಗುಟ್, ಹಣಜುಣ, ಪೆಡ್ನೆ ಮುಂತಾದ ಕರಾವಳಿ ಪ್ರದೇಶದಲ್ಲಿ ಹೆಚ್ಚುವರಿ ಪೋಲಿಸ್ ಠಾಣೆಗಳನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಚಾರಿ ಪೊಲೀಸ್ ಪಡೆಯನ್ನು ಒದಗಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಮೂಲಕ ಗೋವಾ ರಾಜ್ಯವು ಸುರಕ್ಷಿತ ಪ್ರವಾಸಿ ತಾಣ ಎಂಬ ಸಂದೇಶವನ್ನು ಎಲ್ಲೆಡೆ ತಲುಪಿಸಲಾಗುವುದು. ಮುಂದಿನ ಪ್ರವಾಸಿ ಸೀಜನ್‍ನಿಂದ ಬೀಚ್‍ಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next