Advertisement

Bengaluru: ಪೊಲೀಸ್‌ ನಿಂದಿಸುವ ಟ್ಯಾಟೂ; ಕಲಾವಿದನಿಗೆ ನೋಟಸ್‌ ಜಾರಿ

11:54 AM Jul 21, 2024 | Team Udayavani |

ಬೆಂಗಳೂರು: ಪೊಲೀಸರಿಗೆ ಅವಹೇಳನ ಮಾಡುವ ಬರಹದ ಟ್ಯಾಟೂ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಟ್ಯಾಟೂ ಕಲಾವಿದನ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬ್ರಿಗೇಡ್‌ ರಸ್ತೆಯ ಟ್ಯಾಟೂ ಸ್ಟುಡಿಯೋ ಹೊಂದಿರುವ ಕಲಾವಿದ ರಿತೇಶ್‌ ಅಘಾರಿಯಾ ಎಂಬಾತನ ವಿರುದ್ಧ ಶಾಂತಿಗೆ ಭಂಗ, ಉದ್ದೇಶ ಪೂರ್ವಕ ಅವಮಾನ ಆರೋಪದಡಿ ಎಫ್ ಐಆರ್‌ ದಾಖಲಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗು ವಂತೆ ಆರೋಪಿಗೆ ನೋಟಿಸ್‌ ನೀಡಿದ್ದಾರೆ.

ಕಲಾವಿದ ರಿತೇಶ್‌ ಅಘಾರಿಯ ವ್ಯಕ್ತಿಯೊಬ್ಬರ ಎದೆಯ ಮೇಲೆ ಪೊಲೀಸರನ್ನು ಅವಹೇಳನ ಮಾಡುವ ರೀತಿಯ ಬರಹವನ್ನು ಟ್ಯಾಟೂ ಹಾಕಿದ್ದ. ಈ ಫೋಟೋವನ್ನು ತನ್ನ  ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದ. ಅದನ್ನು ಗಮನಿಸಿದ್ದ ಸಾರ್ವಜನಿಕರು ಈ ಪೋಸ್ಟ್‌ ಅನ್ನು ಎಕ್ಸ್‌ ಖಾತೆಯಲ್ಲಿ ನಗರ ಪೊಲೀಸರಿಗೆ ಟ್ಯಾಗ್‌ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ಮಾಹಿತಿ ಮೇರೆಗೆ ಟ್ಯಾಟೂ ಕಲಾವಿದ ರಿತೇಶ್‌ ಅಘಾರಿಯಾ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next