Advertisement
ಕುಖ್ಯಾತ ರೌಡಿಗಳಾದ ಮಾರ್ಕೇಟ್ ಸತೀಶ ಹಾಗೂ ಇತರರನ್ನು ಕೋಕಾ ಕಾಯ್ದೆ ಅಳವಡಿಸಿ ಜೈಲಿಗೆ ಅಟ್ಟಿದ್ದರಿಂದ ಹಾಗೂ ಕಳೆದ ಆ.2ರಂದು ನಂದೂರ ಬಳಿ ಕುಖ್ಯಾತ ರೌಡಿ ಕರಿಚಿರತೆಯನ್ನು ಎನ್‌ಕೌಂಟರ್ ಮಾಡುವ ಮೂಲಕ ರೌಡಿಗಳಿಗೆ ಕಠಿಣ ಸಂದೇಶ ರವಾನಿಸಲಾಗಿತ್ತು.
Related Articles
Advertisement
ಅದರಂತೆ ನಗರದ ಕೆಲವು ಪಡ್ಡೆ ಹುಡುಗರನ್ನು ಪೊಲೀಸ್ ಪರೇಡ್ ಮೂಲಕ ಎಚ್ಚರಿಕೆ ಸಹ ನೀಡಿದ್ದಾರೆ. ಒಟ್ಟಾರೆ ಈ ಎಲ್ಲ ಅಂಶಗಳನ್ನು ಅವಲೋಕಿಸಿದರೆ ಪೊಲೀಸ್ ಇಲಾಖೆ ಅಪರಾಧ ಮುಕ್ತ ಜಿಲ್ಲೆಯನ್ನಾಗಿಸಲು ಕಾರ್ಯ ಪ್ರವೃತ್ತರಾಗಿರುವುದು ಕಂಡುಬರುತ್ತಿದೆ.
ಈಶಾನ್ಯ ವಲಯ ಐಜಿಪಿ ಅಲೋಕ್‌ಕುಮಾರ ಅವರು ಈ ಹಿಂದೆ ಕಲಬುರಗಿ ಎಸ್‌ಪಿ ಆಗಿ ಕಾರ್ಯ ನಿರ್ವಹಿಸಿದ್ದರಿಂದ ಎಲ್ಲ ಆಯಾಮಗಳ ಅಪರಾಧ ಪ್ರಕರಣಗಳ ಮಾಹಿತಿ ಅವರಿಗಿದೆ. ಜತೆಗೆ ಹಗಲಿರುಳು ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವಹಿಸಿರುವುದು ಪೊಲೀಸ್ ಇಲಾಖೆ ಕಾರ್ಯಶೈಲಿಗೆ ಬಲ ಬಂದಿದ್ದದೇ ಪಡ್ಡೆ ಹುಡುಗರಿಗೆ ನಡುಕ ಹುಟ್ಟಲಾರಂಭಿಸಿದೆ.
ಮಹಿಳಾ ಪಿಎಸ್‌ಐ ಶೌರ್ಯ: ರವಿವಾರ ಬೆಳಗ್ಗೆ ನಡೆದ ದಾಳಿಯಲ್ಲಿ ರಾಘವೇಂದ್ರ ಠಾಣೆ ಪಿಎಸ್‌ಐ ಅಕ್ಕಮಹಾದೇವಿ ಅವರು ತಮ್ಮ ಜೀವನದ ಹಂಗು ತೊರೆದು ರೌಡಿ ಶೀಟರ್‌ಗಳ ಮೇಲೆ ದಾಳಿ ನಡೆಸಿ ಫೈರಿಂಗ್ ಮಾಡಿರುವುದು ಒಂದು ಸಾಹಸವೇ ಸರಿ. ಇದನ್ನು ನೋಡಿದರೇ ಅಪರಾಧಕ್ಕೆ ಕಾಲಿಡುತ್ತಿರುವರಿಗೆ ಇದೇ ಗತಿ ಎನ್ನುವ ಸಂದೇಶವನ್ನು ಸ್ಪಷ್ಟವಾಗಿ ಸಾರಿರುವುದು ಕಂಡು ಬರುತ್ತದೆ. ರಾಜ್ಯದ ಇತಿಹಾಸದಲ್ಲೇ ಮಹಿಳಾ ಪಿಎಸ್‌ಐ ಒಬ್ಬರು ದಾಳಿ ನಡೆಸಿ ರೌಡಿಗಳ ಮೇಲೆ ಫೈರಿಂಗ್ ಮಾಡಿರುವುದು ಇದೇ ಮೊದಲೆಂಬುದು ಪೊಲೀಸ್ ಇಲಾಖೆ ಸೇವಾ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.
ಪಿಎಸ್‌ಐ ಅಕ್ಕಮಹಾದೇವಿ ಹಾಗೂ ಪೇದೆ ಪ್ರಹ್ಲಾದ ಕುಲಕರ್ಣಿ ಅವರಿಗೆ ಐಜಿಪಿ ಅವರು ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ ಅಲ್ಲದೆ ಸಿಎಂ ಸೇವಾ ಪದಕಕ್ಕೆ ಶಿಫಾರಸ್ಸು ಮಾಡಿರುವುದು ಪೊಲೀಸರ ಆತ್ಮಸ್ಥೈರ್ಯ ಹೆಚ್ಚಳಕ್ಕೆ ಪ್ರೋತ್ಸಾಹಿಸುವಂತಿದೆ.
ಮುಕ್ತ ಸಂಚಾರಕ್ಕೆ ದಿಟ್ಟ ಕ್ರಮ: ಅಪರಾಧ ಪ್ರಕರಣ ಹತ್ತಿಕ್ಕುವ ಜತೆಗೆ ಕಲಬುರಗಿ ನಗರದಲ್ಲಿ ಹದಗೆಟ್ಟ ಸಂಚಾರಿ ವ್ಯವಸ್ಥೆಗೆ ಸುಧಾರಣಾ ಕ್ರಮ ಕೈಗೊಂಡಿರುವುದು ಶ್ಲಾಘನೀಯಕ್ಕೆ ಪಾತ್ರವಾಗುತ್ತಿದೆ. ಸೂಪರ್ ಮಾರ್ಕೇಟ್‌ನಲ್ಲಿ ಸಂಚರಿಸಬೇಕೆಂದರೆ ದೇವರೇ ಬಲ್ಲ ಎನ್ನುವ ಸ್ಥಿತಿಯಿತ್ತು. ಆದರೀಗ ಸುಗಮ ರೀತಿಯಲ್ಲಿ ಸಂಚಾರ ನಡೆದಿರುವುದು ಮೆಚ್ಚುಗೆಗೆ ಪಾತ್ರವಾಗಿ
ಹಣಮಂತರಾವ ಭೈರಾಮಡಗಿ