Advertisement

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಪ್ರತಾಪ್ ಮೈಸೂರಿನಲ್ಲಿ ಸುತ್ತಾಟ: ವಶಕ್ಕೆ ಪಡೆದ ಪೊಲೀಸರು

04:53 PM Jul 20, 2020 | keerthan |

ಮೈಸೂರು: ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದಿದ್ದ ಡ್ರೋನ್ ಕುಖ್ಯಾತಿಯ ಪ್ರತಾಪ್ ನನ್ನು ಮೈಸೂರಿನಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಪ್ರತಾಪ್ ಮೈಸೂರಿನಲ್ಲಿದ್ದಾನೆಂಬ ಮಾಹಿತಿ ಪಡೆದ ಬೆಂಗಳೂರಿನ ತಲಘಟ್ಟಪುರ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹೊರ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಪ್ರತಾಪ್‌ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ. ಅಂಜನಾಪುರದ ಎಸ್ಎಫ್ಎಂಐಎಂಜಿ ವಿಂಡ್ ಫಾಲ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದ. ಇಲ್ಲೇ ಕ್ವಾರಂಟೈನ್ ನಲ್ಲಿರುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು.

ಕೈಗೆ ಸೀಲ್ ಕೂಡಾ ಹಾಕಿದ್ದರು. ಆದರೆ, ಪ್ರತಾಪ್ ಪ್ಲಾಟ್ ನಿಂದ ಹೊರಬಂದು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ. ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಪ್ರತಾಪ್ ನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next