ಕೊಪ್ಪಳ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕುಟುಂಬ ವರ್ಗದ ಯೋಗಕ್ಷೇಮಕ್ಕಾಗಿ ಅವರ ಆರೋಗ್ಯ ಹಾಗೂ ಇತರೆ ಸೌಲಭ್ಯಕ್ಕಾಗಿ ಪೊಲೀಸ್ ದಿನ ಆಚರಣೆ ಮಾಡಲಾಗುತ್ತಿದೆ. ಅವರ ಕ್ಷೇಮಾಭಿವೃದ್ಧಿ ನಿಧಿಯಿಂದ ಹಲವು ಸೌಲಭ್ಯ ಪಡೆಯಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹೇಳಿದರು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕುಟುಂಬದ ಯೋಗಕ್ಷೇಮಕ್ಕಾಗಿ ಕೇಂದ್ರ ಸರ್ಕಾರ ಹಿಂದೆ ಪೊಲೀಸ್ ದಿನವನ್ನಾಗಿ ಆಚರಣೆ ಮಾಡುತ್ತಿತ್ತು. ಅದರಲ್ಲಿ ಪೊಲೀಸ್ ಧ್ವಜ ಮಾರಾಟ ಮಾಡಿ ಅದರಿಂದ ಸಂಗ್ರಹವಾದ ನಿ ಧಿಯನ್ನು ನಿವೃತ್ತ ಪೊಲೀಸರ ಯೋಗಕ್ಷೇಮ ಮತ್ತು ಕಲ್ಯಾಣಕ್ಕಾಗಿ ಆ ನಿಧಿ ಬಳಕೆ ಮಾಡಲಾಗುತ್ತಿತ್ತು. ಕರ್ನಾಟಕದಲ್ಲೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವ ಯೋಗಕ್ಷೇಮಕ್ಕಾಗಿ ಪೊಲೀಸ್ ಧ್ವಜ ದಿನಾಚರಣೆ ಮಾಡಲಾಗುತ್ತಿದೆ.
ಈ ನಿಧಿಯಿಂದ ನಿವೃತ್ತರ ಮಕ್ಕಳಿಗೆ ವಿವಿಧ ಸೌಲಭ್ಯವೂ ದೊರೆಯಲಿವೆ. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ನಿ ಧಿಯಿಂದ ನಿವೃತ್ತ ಪೊಲೀಸ್ ಅ ಧಿಕಾರಿ, ಸಿಬ್ಬಂದಿಗಳಿಗೆ ಪೊಲೀಸ್ ಸಬ್‌ಸಿಡಿರಿ ಕ್ಯಾಂಟೆಂಟ್ ಸ್ಮಾರ್ಟ್ ಕಾರ್ಡ್ ಒದಗಿಸಲಾಗುತ್ತಿದೆ. ನಿಧಿ ಯಲ್ಲಿ ನಿವೃತ್ತರಿಗೆ ವೈದ್ಯಕೀಯ ವೆಚ್ಚ ಒದಗಿಸಲಾಗುವುದು ಎಂದರು. ನಿವೃತ್ತ ಪಿಎಸ್‌ಐ ಪರಸಪ್ಪ ಮಾತನಾಡಿ, ಪೊಲೀಸ್ ಅ ಧಿಕಾರಿ ಹಾಗೂ ಸಿಬ್ಬಂದಿ ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುತ್ತಾರೆ. ಅವರು ಆರೋಗ್ಯ ಕಾಪಾಡಿಕೊಳ್ಳಬೇಕು.
ಜೊತೆಗೆ ಕರ್ತವ್ಯ ನಿರತ ಪೊಲೀಸರಿಗೆ ಇರುವಂತ ನಿವೃತ್ತರ ಕುಟುಂಬಕ್ಕೂ ಆರೋಗ್ಯ ಭಾಗ್ಯ ಯೋಜನೆ ಸೌಲಭ್ಯ ಕಲ್ಪಿಸಬೇಕು. ಅದಕ್ಕೆ ಎಸ್ಪಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲವೇ ವರ್ಷಕ್ಕೆ 5 ಲಕ್ಷದ ವರೆಗೂ ವೆಚ್ಚಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು. ಪೊಲೀಸ್ ಇಲಾಖೆ ಕಾರ್ಯಕ್ರಮಕ್ಕೂ ನಿವೃತ್ತರನ್ನು ಆಹ್ವಾನಿಸಬೇಕು ಎಂದರಲ್ಲದೇ ಪೊಲೀಸರು ಸರ್ಕಾರದ ನಿಯಮದ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ಮಾಧ್ಯಮದವರು ಸತ್ಯಾ ಸತ್ಯತೆ ಅರಿತು ವರದಿಯನ್ನ ಮಾಡಬೇಕು. ಯಾರೋ ಮಾಡಿದ ತಪ್ಪಿಗೆ ಪೇದೆಗಳು, ಪಿಎಸ್‌ಐಗಳು ಅಮಾನತು ಆಗುತ್ತಿದ್ದಾರೆ. ಇಂತಹ ಹಲವು ಉದಾಹರಣೆಗಳು ರಾಜ್ಯದಲ್ಲಿ ನಡೆದಿವೆ ಎಂದರು. ಡಿವೈಎಸ್ಪಿ ಗೀತಾ ಬೆಳನಾಳ, ರುದ್ರೇಶ ಉಜ್ಜನಕೊಪ್ಪ, ಡಿಎಸ್‌ಪಿ ಡಿ.ಆರ್. ಶಶಿಧರಯ್ಯ, ಸಿಪಿಐಗಳಾದ ವಿಶ್ವನಾಥ ಹಿರೇಗೌಡ್ರ, ಮಾರುತಿ ಗುಳ್ಳಾರಿ, ವೆಂಕಟಸ್ವಾಮಿ, ನಾಗರಡ್ಡಿ, ರವಿ ಉಕ್ಕುಂದ, ಪಿಎಸ್‌ಐಗಳಾದ ಅಮರೇಶ ಹುಬ್ಬಳ್ಳಿ, ಕರಿಯಮ್ಮ, ಚಂದ್ರಪ್ಪ ಮೌನೇಶ್ವರ ಪಾಟೀಲ್, ಪುಂಡಲಿಕಪ್ಪ, ಉಪಸ್ಥಿತರಿದ್ದರು. ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಸ್ವಾಗತಿಸಿದರೆ, ಕೆ.ಎಚ್. ಕಲಕಬಂಡಿ ನಿರೂಪಿಸಿದರು.
ಮಾರುತಿ ಗುಳ್ಳಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪಿಎಸ್‌ಐ ರಮೇಶ ಪದಕಿ, ನಿವೃತ್ತ ಸಿಎಚ್‌ಸಿ ಸುಂಕಪ್ಪ ಅವರು ಸೇರಿದಂತೆ ವಿವಿಧ ನಿವೃತ್ತ ಪೊಲೀಸ್ ಅಧಿ ಕಾರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜದೊಂದಿಗೆ ಪೊಲೀಸ್ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.