Advertisement

ಪೊಲೀಸರ ದೌರ್ಜನ್ಯಕ್ಕೆ ಕೋಲಿ ಸಮಾಜ ಖಂಡನೆ

09:35 AM Oct 30, 2021 | Team Udayavani |

ಚಿತ್ತಾಪುರ: ಕಲಬುರಗಿ ಚೌಕ್‌ ಠಾಣೆ ಪಿಎಸ್‌ಐ ಎಸ್‌.ಆರ್‌. ನಾಯಕ ಹಾಗೂ ಆರು ಜನ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಸಾಬಣ್ಣ ಡಿಗ್ಗಿ ನೇತೃತ್ವದಲ್ಲಿ ಕಾರ್ಯಕರ್ತರು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ನಂತರ ಮಾತನಾಡಿದ ಅವರು, ಅಫಜಲಪುರ ತಾಲೂಕಿನ ಕೋಲಿ ಸಮಾಜದ ದುಂಡಪ್ಪ ಸಿದ್ರಾಮ ಜಮಾದಾರ ಅವರು ಸೇಡಂನಿಂದ ಕಲಬುರಗಿ ಟೋಲ್‌ಗೇಟ್‌ ಹತ್ತಿರ ಬರುವಾಗ ಕಲಬುರಗಿ ಚೌಕಿ ಠಾಣೆಯ ಪಿಎಸ್‌ಐ ಮತ್ತು ಆರು ಜನ ಸಿಬ್ಬಂದಿ ವಿಚಾರಣೆ ನೆಪದಲ್ಲಿ ತಲೆಗೆ ಬಂದೂಕು ಹಿಡಿದು, ಠಾಣೆಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಚಾರಣೆ ನಂತರ ಅವರ ಸಹೋದರ ಲಚ್ಚಪ್ಪ ಜಮಾದಾರ್‌ ಅವರನ್ನು ಕರೆಯಿಸಿ ಬಿಟ್ಟು ಕಳಿಸಿದ್ದಾರೆ. ದುಂಡಪ್ಪ ಜಮಾದಾರ ಹೋಟೆಲ್‌ ನಡೆಸಿಕೊಂಡು ಉಪಜೀವನ ಮಾಡುತ್ತಿದ್ದಾರೆ. ಇಂತಹವರನ್ನು ವಿನಾ ಕಾರಣ ಹೊಡೆದಿರುವ ಪಿಎಸ್‌ಐ ಮತ್ತು ಆರು ಜನ ಸಿಬ್ಬಂದಿ ವಿರುದ್ಧ ಕೂಡಲೇ ಎಫ್‌.ಐ.ಆರ್‌ ದಾಖಲಿಸಿ, ಉನ್ನತ ಮಟ್ಟದ ತನಿಖೆ ಮಾಡಬೇಕು. ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಪಕ್ಕದ ಮನೆಯ ಮಹಿಳೆಯ ಟೀಕೆಗೆ ಕುಪಿತನಾಗಿ ಆಕೆಯ ಮನೆಯವರಿಗೆಲ್ಲಾ ಇರಿದ! ಇಬ್ಬರು ಸಾವು

ಕೋಲಿ ಸಮಾಜದ ಗೌರವ ಅಧ್ಯಕ್ಷ ಅಣ್ಣರಾಯ ಸಣ್ಣೂರಕರ್‌, ಉಪಾಧ್ಯಕ್ಷ ಸುರೇಶ ಬೇನಕನಳ್ಳಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಅಲ್ಲೂರಕರ್‌, ಸಹ ಕಾರ್ಯದರ್ಶಿ ಸೂರ್ಯಕಾಂತ ಕೊಂಕನಳ್ಳಿ, ಭೀಮಣ್ಣ ಸೀಬಾ, ನಾಗೇಶ ಲಬಕಾ, ಮರೇಪ್ಪ ಅಳಬೋ, ಶರಶರಣ, ಮಹೇಶ ಸಾತನೂರ, ಅಶೋಕ ಕಾಸ್ಲೆ, ಮಹಾದೇವ ಭೀಮನಳ್ಳಿ, ಚನ್ನಪ್ಪ ಭೀಮನಳ್ಳಿ, ಶಂಕ್ರಪ್ಪ ಭೀಮನಳ್ಳಿ, ಮಲ್ಲಿಕಾರ್ಜುನ, ಬಸವರಾಜ, ಅಯ್ಯಪ್ಪ, ಶರಣಪ್ಪ, ನಾಗಪ್ಪ, ದೇವಿಂದ್ರಪ್ಪ ಹಲಕಟ್ಟಿ, ರಾಜಶೇಖರ ಬಿ.ಎಂ, ಭಾಗಣ್ಣ ಹೋಳಿಕಟ್ಟಿ, ತುಳಜಪ್ಪ ಹೊಸ್ಸುರಕರ್‌, ಸಂತೋಷ ಕೊಂಕನಳ್ಳಿ, ಮಲ್ಲಿಕಾರ್ಜುನ ಮುಡಬೂಳಕರ್‌, ಮೈಲಾರಿ ಡಿಗ್ಗಿ, ಮಲ್ಲಿಕಾರ್ಜುನ ಮಳಖೇಡ, ಮೌನಗಂಗಾಧರ ಡಿಗ್ಗಿ, ಮಹಾದೇವ ಕೋನಗೇರಿ, ರಾಜಶೇಖರ ಹೋಳಿಹಟ್ಟಿ ಈ ಸಂದರ್ಭದಲ್ಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next