ಹುಬ್ಬಳ್ಳಿ: ಕರ್ತವ್ಯ ನಿರತ ಮಹಾನಗರ ಪಾಲಿಕೆ ಅಧಿಕಾರಿ ಮೇಲೆ ಪೊಲೀಸರು ಹಲ್ಲೆ ಮಾಡಿ ಬೈಕ್ ಜಪ್ತಿ ಮಾಡಿದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನು ವಿರೋಧಿಸಿ ಪಾಲಿಕೆ ಅಧಿಕಾರಿ, ಸಿಬ್ಬಂದಿಗಳಿಂದ ದಿಢೀರ್ ಪ್ರತಿಭಟನೆ ನಡೆಯುತ್ತಿದ್ದು, ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ.
9 ನೇ ವಲಯ ಕಚೇರಿಯಲ್ಲಿ ಸಹಾಯಕ ಕಂದಾಯ ಅಧಿಕಾರಿಯಾಗಿರುವ ಎನ್.ಕೆ.ಅಂಗಡಿ ಹಲ್ಲೆಗೊಳಗಾದ ಅಧಿಕಾರಿ.
ಇವರು ಹಾಲು ವಿತರಣೆ ಕಾರ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆನಂದ ನಗರ ರಸ್ತೆ ಹೆಗ್ಗೇರಿ ಕ್ರಾಸ್ ಬಳಿ ಪೊಲೀಸರು ಅಡ್ಡಗಟ್ಟಿದ್ದು, ಗುರುತಿನ ಚೀಟಿ ಕೊಟ್ಟರೂ ಹಳೇ ಹುಬ್ಬಳ್ಳಿ ಠಾಣೆ ಪಿ.ಎಸ್.ಐ ಹಾಗೂ ಓರ್ವ ಪೇದೆ ಲಾಠಿಯಿಂದ ಹೊಡೆದು ಬೈಕ್ ಜಪ್ತಿ ಮಾಡಿದ್ಧಾರೆ.
ಪ್ರತಿಭಟನೆ
ಕರ್ತವ್ಯ ನಿರತ ಅಧಿಕಾರಿಯ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ಪಾಲಿಕೆ ಅಧಿಕಾರಿ, ಸಿಬ್ಬಂದಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಎಲ್ಲಾ ಕಚೇರಿಗಳನ್ನು ಬಂದ್ ಮಾಡಿ ಪಾಲಿಕೆ ಅಧಿಕಾರಿಗಳು ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಿಂದೆಯೂ ಕೂಡ ಪೊಲೀಸರು ಪಾಲಿಕೆ ವಾಹನ ತಡೆದು ತೊಂದರೆ ಕೊಡುತ್ತಿದ್ದರು ಎಂದು ತುರ್ತು ಕರ್ತವ್ಯದ ಮೇಲಿರುವ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ಅಮಾನತ್ತಿಗೆ ಆಗ್ರಹ ಆಗ್ರಹಿಸಲಾಗುತ್ತಿದೆ