Advertisement
ರಾವಲ್ಪಿಂಡಿಯಿಂದ ಅಪಹರಣಕ್ಕೀಡಾದ ಅಹ್ಮದ್ ಫಹಾದ್ ಶಾ ಅವರ ಪ್ರಕರಣದ ವಿಚಾರಣೆ ವೇಳೆ ಪಾಕ್ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಟಾರ್ನಿ ಜನರಲ್ ಅವರು, ಪಿಒಕೆ ನಮ್ಮ ಆಡಳಿತದ ಪರಿಧಿಯಲ್ಲಿಲ್ಲ. ನಮ್ಮ ಕಾನೂನು ಅಲ್ಲಿ ಅನ್ವಯವಾಗುವುದಿಲ್ಲ’ ಎಂದಿದ್ದಾರೆ. ಫಹಾದ್ ಅವರು ಪಿಒಕೆ ಪೊಲೀಸರ ವಶದಲ್ಲಿದ್ದು,ಅದು ವಿದೇಶಿ ನೆಲವಾದ ಕಾರಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.