Advertisement

ಫೆಬ್ರವರಿಯಲ್ಲೇ ಬರುತ್ತಂತೆ ಪೊಗರು!

10:14 AM Jan 18, 2021 | Team Udayavani |

ನಟ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರ ಅಂತೂ ಇದೇ ಫೆಬ್ರವರಿಯಲ್ಲಿ ತೆರೆಗೆ ಬರೋದು ಬಹುತೇಕ ಖಚಿತ ಎಂಬ ಸುದ್ದಿ ಕಳೆದ ಕೆಲ ವಾರಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು.

Advertisement

ಗಾಂಧಿನಗರದ ಮೂಲಗಳ ಪ್ರಕಾರ “ಪೊಗರು’ ಫೆ. 12ಕ್ಕೆ ಅಥವಾ ಫೆ. 19ಕ್ಕೆ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ “ಪೊಗರು’ ಬಿಡುಗಡೆ ಹಠಾತ್ತನೇ ಏಪ್ರಿಲ್‌ ವರೆಗೆ ಮುಂದಕ್ಕೆ ಹೋಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ.

ಹೌದು, “ಪೊಗರು’ ಚಿತ್ರದ ಪ್ರಚಾರಕ್ಕೆ ಇನ್ನೂ ಸಮಯಾವಕಾಶ ಬೇಕಾಗಿರುವುದರಿಂದ, ಚಿತ್ರತಂಡ ಬಿಡುಗಡೆಯನ್ನು ಏಪ್ರಿಲ್‌ಗೆ ಮುಂದೂಡುವ ಯೋಚನೆಯಲ್ಲಿದೆ ಎನ್ನಲಾಗುತ್ತಿದೆ. ಏಪ್ರಿಲ್‌ 15 ಅಥವಾ 22ಕ್ಕೆ ತೆರೆಗೆ ತರಲು ಚಿತ್ರತಂಡ ಯೋಚಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಇದನ್ನೂ ಓದಿ:ಬಾಂಗ್ಲಾದೇಶ ಕಂಟ್ರಿ ಫೋಕಸ್‌: ನೋಡಲು ಮರೆಯಬೇಡಿ ‘ಇತಿ, ತೊಮಾರಿ ಢಾಕಾ‘

“ನಾವು ಫೆಬ್ರವರಿಯಲ್ಲೇ ಬರಲಿದ್ದೇವೆ. ಅದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಡೇಟ್‌ ಅನೌನ್ಸ್‌ ಮಾಡುತ್ತೇವೆ’ ಎನ್ನುವುದು ನಿರ್ಮಾಪಕ ಗಂಗಾಧರ್‌ ಅವರ ಮಾತು.

Advertisement
Advertisement

Udayavani is now on Telegram. Click here to join our channel and stay updated with the latest news.

Next