Advertisement

ಧ್ರುವಸರ್ಜಾ ಪೊಗರು ಪ್ರದರ್ಶನ ಸೂಪರ್‌

04:47 PM Feb 20, 2021 | Team Udayavani |

ಶಿವಮೊಗ್ಗ: ಆಕ್ಷನ್‌ಪ್ರಿನ್ಸ್‌ ಧ್ರುವಸರ್ಜಾ ಅಭಿನಯದ ಬಹುನಿರೀಕ್ಷಿತ “ಪೊಗರು’ ಶುಕ್ರವಾರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಬೆಳಿಗ್ಗೆ 7 ಗಂಟೆಗೆ ಪ್ರದರ್ಶನ ಆರಂಭವಾಗಿದೆ. ಬರೋಬ್ಬರಿ 3 ವರ್ಷಗಳ ನಂತರ ಧ್ರುವಸರ್ಜಾ ಅಭಿನಯದ ಸಿನಿಮಾ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Advertisement

ಕೊರೊನಾ ಕಾರಣದಿಂದ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿತ್ತು. ಶುಕ್ರವಾರ ಪೊಗರು ಬಿಡುಗಡೆಯಾಗುವುದರೊಂದಿಗೆ ಚಿತ್ರಮಂದಿರಗಳಿಗೆ ಹೊಸಕಳೆ ಬಂದಿದೆ. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಸಿನಿರಸಿಕರು, ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಬೆಳಿಗ್ಗೆ 7 ಗಂಟೆಗೆ ವಿಶೇಷ ಪ್ರದರ್ಶನ ಶುರುವಾಗಿದ್ದು, ನಿರಂತರ  ಪ್ರದರ್ಶನ ಮುಂದುವರೆದಿದೆ. ನಗರದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಪೊಗರು ಪ್ರದರ್ಶನ ಕಾಣುತ್ತಿದ್ದು, ಚಿತ್ರಮಂದಿರದ ಬಳಿ ಹಬ್ಬದ ವಾತಾವರಣ ಕಂಡುಬಂದಿದೆ.

ಧ್ರುವಸರ್ಜಾ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಬಹುದಿನಗಳ ನಂತರ ಸಿನಿಮಾ ಮಂದಿರದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದ್ದು, ಧ್ರುವಸರ್ಜಾ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next