Advertisement

ಕವಿ ಸರ್ವಜ್ಞ ಜಯಂತಿ ಆಚರಣೆ

11:08 AM Feb 22, 2019 | |

ಯಾದಗಿರಿ: ಮಾನವ ವಿಶ್ವ ಮಾನವನಾಗಲು ಬೇಕಾದ ಜೀವನ ಮೌಲ್ಯಗಳನ್ನು ಸರ್ವಜ್ಞ ತನ್ನ ತ್ರಿಪತಿಗಳಲ್ಲಿ ನೀಡಿದ್ದಾನೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶೇಖರಪ್ಪ ಅರ್ಜುಣಗಿ ಕುಂಬಾರ ಹೇಳಿದರು.

Advertisement

ನಗರದ ಆದರ್ಶ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಕವಿ ಸರ್ವಜ್ಞನ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ವಜ್ಞ ರಚಿಸಿದ ಸಾವಿರಾರು ತ್ರಿಪದಿಗಳಲ್ಲಿ ಇಡೀ ಸಾರ ಹಿಡಿದಿಟ್ಟು ಅಮೂಲ್ಯ ಸಾಹಿತ್ಯವನ್ನು ನೀಡಿ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ ಕವಿ ಎಂದು ತಿಳಿಸಿದರು.

ಏಳು ಕೋಟಿಯೇ ಕೋಟಿ ಏಳು ಲಕ್ಷವೇ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳು ಹೇಳಿದನು ಕೇಳ ಸರ್ವಜ್ಞ ಎಂದು ವಚನಗಳು ಬರದ ಕುರಿತು ಹೇಳಿದ್ದು, ಆದರೆ ಇದುವರೆಗೆ 1000 ತ್ರಿಪದಿಗಳು ಲಭಿಸಿವೆ. ಇನ್ನು ಬಾಕಿ ಸಿಕ್ಕಿಲ್ಲ ಎಂದರು. ಮುಖ್ಯ ಗುರು ಭಗವಾನ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಎಸ್‌ಡಿಎಂಸಿ ಸದಸ್ಯೆ ದೀಪಾರಾಣಿ, ಲಚ್ಚಪ್ಪ ಇದ್ದರು. 

ಸಹ್ಯಾದ್ರಿ ಕಾಲೇಜು: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಸರ್ವಜ್ಞ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಗರದ ಆರ್‌ಎಂಎಸ್‌ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶೇಖರಪ್ಪ ಅರ್ಜುಣಗಿ, ಭರತೇಶ ಜೈನ್‌, ಶ್ರೀನಿವಾರಸರಡ್ಡಿ, ಆಂಜನೇಯಲು, ನವೀನ ಕುಮಾರ, ಪವನ ರಾಠೊಡ,
ಮಹೇಶ ಕೆ, ವಿಶ್ವನಾಥಯ್ಯ ಸ್ವಾಮಿ, ಅರ್ಚನಾ ಜೆ, ಅಂಬಿಕಾ ಸೇರಿದಂತೆ ಇತರರು ಇದ್ದರು.

ಅನಕಸೂಗರ: ವಡಗೇರಾ ತಾಲೂಕಿನ ಅನಕಸೂಗರ ಗ್ರಾಮದಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಕುಂಬಾರ ಸಮಾಜದ ತಾಲೂಕು ಅಧ್ಯಕ್ಷ ರಾಜು ಕುಂಬಾರ ಅನಕಸುಗೂರ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಮದ ಪ್ರಮುಖ ಸುರೇಶಗೌಡ
ಪೊಲೀಸ್‌ ಪಾಟೀಲ ಮಾಲಾರ್ಪಣೆ ಮಾಡಿದರು.

Advertisement

ವಿಶ್ವನಾಥರೆಡ್ಡಿ ಪಾಟೀಲ, ರಾಮರೆಡ್ಡಿಗೌಡ ಮಾಲಿಪಾಟೀಲ, ಮುಖ್ಯ ಶಿಕ್ಷಕ ಶಂಕ್ರಪ್ಪ, ನಿಂಗಪ್ಪ ಕುರಿ, ಪರಶುರಾಮ, ಕುಂಬಾರ ಸಮಾಜದ ಪ್ರಮುಖರಾದ ಶರಣು, ಕುಮಾರ, ಕುಂಬಾರ ಸಮಾಜದವರಾದ ಗ್ರಾಪಂ ಸದಸ್ಯ ನಾಗೇಂದ್ರಪ್ಪ ಕುಂಬಾರ, ಬಸವರಾಜ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಶರಣು ಕುಂಬಾರ, ಸುರೇಶ ಕುಂಬಾರ, ದೊಡ್ಡ ಮಲ್ಲಣ್ಣ ಕುಂಬಾರ, ಸಣ್ಣ ಮಲ್ಲಿಕಾರ್ಜುನ ಕುಂಬಾರ, ಚೆನ್ನಪ್ಪ ಕುಂಬಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next