Advertisement

ಕವಿ ಕಣವಿ ಆರೋಗ್ಯ ಮುತುವರ್ಜಿಗೆ ಸೂಚನೆ

05:45 PM Feb 01, 2022 | Team Udayavani |

ಧಾರವಾಡ: ಸತ್ತೂರಿನ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕವಿ, ನಾಡೋಜ ಡಾ| ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಜಗದೀಶ ಶೆಟ್ಟರ ಹಾಗೂ ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ವೈದ್ಯರು ಮತ್ತು ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು.

Advertisement

ಜಗದೀಶ ಶೆಟ್ಟರ ಮಾತನಾಡಿ, ಕಣವಿ ಅವರ ಚಿಕಿತ್ಸೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಎಸ್‌ಡಿಎಂ ಆಸ್ಪತ್ರೆ ಉತ್ತಮ ತಜ್ಞ ವೈದ್ಯರನ್ನು ಮತ್ತು ಸೌಲಭ್ಯಗಳನ್ನು ಹೊಂದಿದೆ. ಅಗತ್ಯವಿದ್ದಲ್ಲಿ ಕಿಮ್ಸ್‌ ಮತ್ತು ಸರ್ಕಾರಿ ಆಸ್ಪತ್ರೆ ತಜ್ಞ ವೈದ್ಯರ ಸಲಹೆ, ನೆರವು ಪಡೆಯುವಂತೆ ಮತ್ತು ಡಾ| ಕಣವಿ ಅವರು ಬೇಗ ಚೇತರಿಸಿಕೊಳ್ಳಲು ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಡಾ| ಕಣವಿ ಅವರ ಆರೋಗ್ಯದ ಬಗ್ಗೆ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿದ್ದು, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಉತ್ತಮ ಚಿಕಿತ್ಸೆ ನೀಡಿ ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಲು ವೈದ್ಯರ ತಂಡಕ್ಕೆ ಸೂಚನೆ ನೀಡಿದರು.

ಕಣವಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಮುಖ್ಯಸ್ಥ ಡಾ| ಕಿರಣ ಐತಾಳ ಮಾತನಾಡಿ, ಕಣವಿ ಅವರ ಆರೋಗ್ಯದಲ್ಲಿ ಕಳೆದ ವಾರಕ್ಕಿಂತ ಈಗ ಚೇತರಿಕೆ ಕಂಡುಬಂದಿದೆ. ರಕ್ತದೊತ್ತಡ ನಿಯಂತ್ರಣದಲ್ಲಿದ್ದು, ಕಿಡ್ನಿ ಕಾರ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ಪುಪ್ಪಸದ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿದೆ. ವಯೋ ಗುಣಧರ್ಮದಿಂದ ಚಿಕಿತ್ಸೆಗೆ ನಿಯಮಿತವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಶಾಶ್ವಕೋಶ ತಜ್ಞ ಡಾ|ಶ್ರೀಕಾಂತ ಹಿರೇಮಠ, ಅರವಳಿಕೆ ತಜ್ಞ ಡಾ|ಶ್ರೀರಂಗ ತೋರಗಲ್ಲ ಮತ್ತು ಜನರಲ್‌ ಫಿಜಿಷನ್‌ ಆದ ಡಾ|ರಾಜೇಂದ್ರ ಪಾರಿಕ್‌ ಅವರನ್ನೊಳಗೊಂಡು ತಜ್ಞ ವೈದ್ಯರ ತಂಡ ರಚಿಸಲಾಗಿದ್ದು, ಕಣವಿ ಅವರ ಆರೋಗ್ಯದ ಕುರಿತು ನಿರಂತರ ನಿಗಾ ವಹಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

Advertisement

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಬಸನಗೌಡ ಕರಿಗೌಡರ, ಎಸ್‌ಡಿಎಂ ವೈದ್ಯಕೀಯ ಅಧೀಕ್ಷಕ ಡಾ| ಕಿರಣ ಹೆಗಡೆ, ಪಾಲಿಕೆ ಸದಸ್ಯರಾದ ಮಾಜಿ ಮೇಯರ್‌ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಎಸ್‌ಡಿಎಂ ಆಸ್ಪತ್ರೆಯ ಪಿಆರ್‌ಒ ನಾಗರಾಜ ಕಲ್ಲಾಪುರ ಹಾಗೂ ಡಾ| ಕಣವಿ ಅವರ ಕುಟುಂಬ ಸದಸ್ಯ ನಾಗರಾಜ ಎಲಿಗಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next