Advertisement

ಶೀಘ್ರ ಪೋಡಿ ಸಮಸ್ಯೆ ಇತ್ಯರ್ಥ: ಡೀಸಿ

02:10 PM Nov 22, 2020 | Suhan S |

ದೇವನಹಳ್ಳಿ: ಪೋಡಿ ಸಮಸ್ಯೆ ಇದ್ದು, ಅದನ್ನು ಬಗೆಹರಿಸಲು ಗ್ರಾಮ ಲೆಕ್ಕಾಧಿಕಾರಿಗಳು, ರಾಜ್ಯಸ್ವ ನಿರೀಕ್ಷಕರ ಸಭೆ ಕರೆದು ಮಾಹಿತಿ ಸಂಗ್ರಹಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದರು.

Advertisement

ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 2ನೇ ತ್ತೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.ಅಲ್ಲದೇ, ಇನ್ನು ಮುಂದೆ ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಪಿಂಚಣಿ ಜಮೆ ಆಗಲಿದೆ ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿಕಡ್ಡಾಯವಾಗಿ 4 ಸಭೆಗಳನ್ನು ನಡೆಸಬೇಕಾಗಿರುವುದರಿಂದ ಆದ್ಯತೆ ಮೇರೆಗೆ ಸಭೆನಡೆಸುವಂತೆ ತಾಲೂಕಿನ ತಹಶೀಲ್ದಾರ್‌ಗಳು, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ಒಳಗೊಂಡಂತೆ ಸಭೆ ನಡೆಸಲು ಸೂಚಿಸಲಾಗಿದೆ.ಉಪವಿಭಾಗದ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಕಡ್ಡಾಯವಾಗಿ 3 ತಿಂಗಳಿಗೊಮ್ಮೆ ಒಟ್ಟು4 ಉಪವಿಭಾಗದ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಲು ಅಗತ್ಯ ಕ್ರಮವಹಿಸಲು ಸೂಚಿಸಿದರು. ಅಲ್ಲದೇ, ಇನ್ನು ಮುಂದೆ ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಪಿಂಚಣಿ ಜಮೆ ಆಗಲಿದೆ ಎಂದು ತಿಳಿಸಿದರು.

ದೌರ್ಜನ್ಯ ಪ್ರಕರಣ ದಾಖಲು, ಪರಿಹಾರ ಧನಮಂಜೂರಾತಿ ವಿವರ ಪರಿಶೀಲಿಸಿ, ನೊಂದ ಸಂತ್ರಸ್ಥರಿಗೆ ಶೀಘ್ರ ಪರಿಹಾರ ಧನ ಮಂಜೂರು ಮಾಡಲು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ ಸಲಹೆ ಮಾಡಿದರು. ಉಪವಿಭಾಗಾಧಿಕಾರಿ ಅರುಳ್‌ಕುಮಾರ್‌ ಮಾತನಾಡಿ, ಉಪವಿಭಾಗದ ವ್ಯಾಪ್ತಿಯಲ್ಲಿ ಸಭೆ ಮಾಡಲಾಗಿದೆ. ಇನ್ನೊಂದು ಸಭೆ ಡಿಸೆಂಬರ್‌ನಲ್ಲಿ ಮಾಡಲಾಗುತ್ತದೆ. ಹೊಸ ಕಮಿಟಿ ರಚನೆ ಮಾಡಬೇಕಿದೆ. ಸ್ಮಶಾನ ಇಲ್ಲದಕಡೆ ಸ್ಮಶಾನ ಭೂಮಿ ಗುರ್ತಿಸುವಕೆಲಸ ಎಸ್‌ ಇಪಿ,ಟಿಎಸ್‌ಪಿ ಯೋಜನೆ ಚುರುಕುಗೊಳಿಸುವುದು, ಅನುದಾನದ ಸದ್ಭಳಕೆ ಹೀಗೆ ಹಲವಾರು ವಿಷಯಗಳನ್ನುಕೈಗೊಳ್ಳಲಾಗುತ್ತದೆ ‌ ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್‌ ಮಾತನಾಡಿ, 60 ದಿನದ ಒಳಗಾಗಿ ಚಾರ್ಚ್‌ ಶೀಟ್‌ ಹಾಕಲಾಗುತ್ತಿದೆ. ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣ ಠಾಣೆಗೆ ಬಂದಕೂಡಲೇ ಎಫ್‌ ಐಆರ್‌ ದಾಖಲಿಸಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳು ಮಾಹಿತಿಪಡೆದು ಮೇಲಧಿಕಾರಿಗಳಿಗೆ ವರದಿನೀಡಿ, ಸೂಕ್ತಕ್ರಮಕೈಗೊಳ್ಳಲಾಗುತ್ತಿದೆ ಎಂದರು.

Advertisement

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹನುಮಂತರಾಯಪ್ಪ ಮಾತನಾಡಿ, ಜಿಲ್ಲೆಯಲ್ಲಿ 44 ಪ್ರಕರಣಗಳಲ್ಲಿ 21 ಪ್ರಕರಣಕ್ಕೆ ಪರಿಹಾರ ಒದಗಿಸಲಾಗಿದೆ. ವಾರದೊಳಗೆ ಬ್ಯಾಂಕುಗಳಲ್ಲಿನ ದಾಖಲೆಗಳನ್ನು ಸಂತ್ರಸ್ಥರು ನೀಡಿದರೆ, ತಕ್ಷಣ ಪರಿಹಾರಧನ ಮಂಜೂರು ಮಾಡಲಾಗುತ್ತದೆ. 3 ಹಂತದಲ್ಲಿ ಪರಿಹಾರ ಧನ ಬರಲಿದ್ದು, ಅದರಲ್ಲಿ ಚಾರ್ಚ್‌ ಶೀಟ್‌ ಹಾಕಿದ60 ದಿನದೊಳಗೆ ಪರಿಹಾರ ಧನ ಅವರಿಗೆ ವಿತರಿಸಲಾಗುತ್ತದೆ. ಸಕಾಲದಲ್ಲಿ ಚಾರ್ಚ್‌ಶೀಟ್‌ ಹಾಕಬೇಕು ಎಂದು ಸಭೆಯ ಗಮನಕ್ಕೆ ತಂದರು.

ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌ ಕೆ.ನಾಯಕ್‌, ಡಿವೈಎಸ್‌ಪಿ ರಂಗಪ್ಪ, ಜಿಪಂ ಉಪಕಾರ್ಯದರ್ಶಿ ಕರಿಯಪ್ಪ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಜಾಗೃತಿ ಸಮಿತಿ ನಿರ್ದೇಶಕರಾದ ಕೊಟ್ರೇಶ್‌, ಈರಣ್ಣ ಮೌರ್ಯ, ರೆಡ್ಡಿಹಳ್ಳಿ ಮುನಿರಾಜು, ನರಸಿಂಹಮೂರ್ತಿ, ಶಾಮಣ್ಣ, ರವಿಕುಮಾರ್‌, ರವಿಕಲಾ, ರಮೇಶ್‌ ಚಕ್ರವರ್ತಿ ಇದ್ದರು.

ನೆಲಮಂಗಲ ತಾಲೂಕಿನ ಬಸವನಹಳ್ಳಿ ಗ್ರಾಮದ ದಲಿತ ಯುವಕನಕೊಲೆಯಾಗಿದ್ದು,ಕೂಡಲೇ ಸಂತ್ರಸ್ಥನಕುಟುಂಬಕ್ಕೆ ಐದೂವರೆ ಲಕ್ಷ ಪರಿಹಾರವನ್ನುಕೂಡಲೇ ನೀಡಬೇಕು. ಸಂತ್ರಸ್ಥರಿಗೆ ತ್ವರಿತವಾಗಿ ಅನುದಾನ ನೀಡುವಂತೆ ಆಗಬೇಕು.ಯಾವುದೇಕಾರಣಕ್ಕೂ ತಡ ಮಾಡಬಾರದು. ಎಸ್‌ಸಿ, ಎಸ್‌ಟಿ ಸಮಸ್ಯೆ ಏನೇ ಇದ್ದರೂ ತನ್ನ ಗಮನಕ್ಕೆ ತನ್ನಿ. ರವೀಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next