Advertisement

ಪಿಎಂಎಸ್‌ವೈಎಂ ಪಿಂಚಣಿ ಯೋಜನೆ ಆರಂಭ

01:00 AM Mar 07, 2019 | Team Udayavani |

ಕಾಸರಗೋಡು: ಅಸಂಘಟಿತ ವಲಯದ ಕಾರ್ಮಿಕರಿಗಿ ರುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ ಧನ್‌ ಪಿಂಚಣಿ ಯೋಜನೆ(ಪಿ.ಎಂ.ಎಸ್‌.ವೈ.ಎಂ.) ಜಿಲ್ಲೆಯಲ್ಲಿ ಆರಂಭಗೊಂಡಿದೆ. ಕಾಸರಗೋಡು ಡಿ.ಪಿ.ಸಿ. ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಶಾಸಕ ಎನ್‌.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯಲ್ಲಿ ಸದಸ್ಯರಾದವರಿಗೆ ಗುರುತು ಚೀಟಿ ವಿತರಣೆ ಶಾಸಕ ಎನ್‌.ಎ.ನೆಲ್ಲಿಕುನ್ನು ನಿರ್ವಹಿಸಿದರು.

Advertisement

ಅಹಮ್ಮದಾಬಾದ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಯೋಜನೆ ಯನ್ನು ಲೋಕಾರ್ಪಣೆ ನಡೆಸುವ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಸೌಕರ್ಯ ಏರ್ಪಡಿಸಲಾಗಿತ್ತು.

ಜಿಲ್ಲೆಯಲ್ಲಿ ಈ ವರೆಗೆ 300 ಮಂದಿ ಈ ಯೋಜನೆಯಲ್ಲಿ ಸದಸ್ಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ತಲೆಹೊರೆ, ಕೃಷಿ, ಕಟ್ಟಡ ನಿರ್ಮಾಣ, ಬೀಡಿ, ಕೈಮಗ್ಗ, ಮೋಟಾರು ವಾಹನ ಇತ್ಯಾದಿ ವಲಯಗಳ ಕಾರ್ಮಿ ಕರು ಈ ಯೋಜನೆಯ ಫಲಾನುಭವಿ ಗಳಾಗಿದ್ದಾರೆ. 

ಯೋಜನೆ ಪ್ರಕಾರ 60 ವರ್ಷದಿಂದ ತೊಡಗಿ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಫಲಾನುಭವಿಗಳಿಗೆ ಲಭಿಸಲಿದೆ. ಕೇಂದ್ರ ಸರಕಾರ ಮತ್ತು ಫಲಾನುಭವಿ 50:50 ಕ್ರಮದಲ್ಲಿ ಕಂತು ಪಾವತಿಸಬೇಕು. 

18ರಿಂದ 40 ವರ್ಷ ಪ್ರಾಯದ ನಡುವಿನವರು, 15 ಸಾವಿರ ರೂ.ಗಿಂತ ಕೆಳಗಿನ ಆದಾಯ ಇರುವ, ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಯಲ್ಲಿ ಸದಸ್ಯರಾಗಬಹುದು. ವಯಸ್ಸಿಗನುಗುಣವಾಗಿ ತಿಂಗಳ ಕಂತಿನಲ್ಲಿ ವ್ಯತ್ಯಾಸ ಇರುವುದು.

Advertisement

18  ವರ್ಷದವರು ತಿಂಗಳಿಗೆ 55 ರೂ., 29 ವರ್ಷ ಪ್ರಾಯದವರು ತಿಂಗಳಿಗೆ 100 ರೂ., 35 ಯಾ ಅದಕ್ಕಿಂತ ಅಧಿಕ ಪ್ರಾಯದವರಿಗೆ 150 ರೂ., 40 ಯಾ ಅದಕ್ಕಿಂತ ಅಧಿಕ ವಯೋಮಾನದವರು 200 ರೂ. ಪಾವತಿಸಬೇಕು. 
ಇ.ಎಸ್‌.ಐ., ಇ.ಪಿ.ಎಫ್‌. ಕಚೇರಿಗಳು, ಎಲ್‌.ಐ.ಸಿ. ಶಾಖೆ ಕಚೇರಿಗಳು, ಎಲ್ಲ ಕೇಂದ್ರ-ರಾಜ್ಯ ಲೇಬರ್‌ ಕಚೇರಿಗಳು ಇತ್ಯಾದಿಗಳು ಈ ಯೋಜನೆಯ ಸಹಾಯ ಕೇಂದ್ರಗಳಾಗಿವೆ. ವೆಬ್‌ ಪೋರ್ಟಲ್‌ ಮೂಲಕ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಮಾಹಿತಿ ನೀಡಿ ನೋಂದಣಿ ನಡೆಸುವ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ನ್ನು ಸಂದರ್ಶಿಸಬಹುದು.

ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಇ.ಎಸ್‌.ಐ.ಸಿ. ಸಬ್‌ ರೀಜನಲ್‌ ಡೆಪ್ಯುಟಿ ಡೈರೆಕ್ಟರ್‌ ಜೆ. ವರ್ಗೀಸ್‌, ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಜಿಲ್ಲಾ ಲೇಬರ್‌ ಆಫೀಸರ್‌ ಕೆ. ಮಾಧವನ್‌, ಸಹಾಯಕ ಜಿಲ್ಲಾಧಿಕಾರಿ ಕೆ. ಜಯಲಕ್ಷ್ಮೀ ಪಿ.ಎಂ..ಎಸ್‌.ವೈ.ಎಂ. ಜಿಲ್ಲಾ ನೋಡಲ್‌ ಆಫೀಸರ್‌ ಪಿ. ಸದ್ಮಾ, ವಾರ್ಡ್‌ ಕೌನ್ಸಿಲರ್‌ ರಾಶಿದ್‌ ಪೂರಣಂ, ಎಲ್‌.ಐ.ಸಿ. ಶಾಖಾ ಪ್ರಬಂಧಕ ವಿ.ಕೆ. ಸಾಬು, ಸಿ.ಐ.ಟಿ.ಯು. ಜಿಲ್ಲಾ ಕಾರ್ಯದರ್ಶಿ  ಟಿ.ಕೆ. ರಾಜನ್‌, ಐ.ಎನ್‌.ಟಿ.ಯು.ಸಿ. ಪ್ರತಿನಿಧಿ ಹರೀಂದ್ರನ್‌ ಚೆಮ್ನಾಡ್‌, ಬಿ.ಎಂ.ಎಸ್‌. ಪ್ರತಿನಿಧಿ ಕೆ. ನಾರಾಯಣ, ಎ.ಐ.ಟಿ.ಯು.ಸಿ. ಜಿಲ್ಲಾ ಅಧ್ಯಕ್ಷ ಪಿ. ಕೃಷ್ಣನ್‌, ಎಸ್‌.ಟಿ.ಯು. ಜಿಲ್ಲಾ ಕಾರ್ಯದರ್ಶಿ ಶರೀಫ್‌ ಕೊಡವಂಜಿ, ಕಾರ್ಮಿಕರು, ಕುಟುಂಬಶ್ರೀ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next